ಎಸ್ಸೆಲ್ಸಿ ಪರೀಕ್ಷೆಯಲ್ಲಿ ಬಿಸಿಎಂ ವಸತಿ ನಿಲಯ ವಿದ್ಯಾರ್ಥಿನಿ ವರ್ಷ ಆರ್.ಶೆಟ್ಟಿ ವಿಶೇಷ ಸಾಧನೆ

ಉಡುಪಿ: ಎಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಬ್ರಹ್ಮಾವರದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ವಸತಿ ನಿಲಯದ ವಿದ್ಯಾರ್ಥಿನಿ ವರ್ಷ ಆರ್.ಶೆಟ್ಟಿ ಶೇ.99.36 ಅಂಕ ಪಡೆದು ಸಾಧನೆ ಮಾಡಿದ್ದಾರೆ.
 ಬ್ರಹ್ಮಾವರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ವರ್ಷ 625ಕ್ಕೆ 621 ಅಂಕ ಪಡೆದಿದ್ದಾರೆ. ಹಿಂದುಳಿದ ವರ್ಗಗಳ  ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ದೇವಿಂದರ್.ಎಸ್. ಬೀರದರ್ ಅವರು ವಿದ್ಯಾರ್ಥಿನಿಗೆ ಅಭಿನಂದಿಸಿದ್ದಾರೆ. 
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯದ ಎಲ್ಲಾ 104 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 12 ವಿದ್ಯಾರ್ಥಿಗಳು ಶೇ.90ಕ್ಕೂ ಅಧಿಕ ಅಂಕ, 27 ವಿದ್ಯಾರ್ಥಿಗಳು ಶೇ.80ಕ್ಕೂ ಅಧಿಕ ಅಂಕ ಪಡೆದು ತೇರ್ಗಡೆಯಾಗಿದ್ದಾರೆ. 
 
 
 
 
 
 
 
 
 
 
 

Leave a Reply