ರೆಡ್ ಎಫ್ ಎಂ ತನ್ನ ಕೇಳುಗರ ಆನಂದಕ್ಕಾಗಿ ತಡೆಯಿರದ ಹಾಡುಗಳ ಸರಮಾಲೆಯನ್ನು ಅರ್ಪಿಸುತ್ತಿದೆ

ಭಾರತದಲ್ಲಿ  ಅತಿ ಹೆಚ್ಚು ಅವಾರ್ಡ್ ಗಳನ್ನು  ಪಡೆದಿರುವ ಅತೀ ದೊಡ್ಡ ರೇಡಿಯೋ ನೆಟ್ವರ್ಕ್, 93.5  ರೆಡ್ ಎಫ್  ಎಂ. ಮೈಸೂರು ಮಂಗಳೂರು, ಹುಬ್ಬಳ್ಳಿ-ಧಾರವಾಡ, ಹಾಗೂ ಕಲಬುರ್ಗಿ ನಗರಗಳಲ್ಲಿ ಪ್ರಸ್ತುತಪಡಿಸುತ್ತಿದೆ “ನಾನ್ ಸ್ಟಾಪ್ 8  ಹಾಡುಗಳ ಸರಮಾಲೆ”.
ಕೇಳುಗರಿಗೆ ಅತಿ ಹೆಚ್ಚು superhit ಹಾಡುಗಳನ್ನು ದಿನ ಪೂರ್ತಿ ಪ್ರಸಾರ ಮಾಡುವ ಸಲುವಾಗಿ ಈ ವಿಭಿನ್ನ ಪ್ರಯೋಗಕ್ಕೆ ಮುಂದಾಗಿದೆ. ನಾನ್ ಸ್ಟಾಪ್ 8 ಹಾಡುಗಳನ್ನು (೮ ಹಾಡುಗಳ ಸರಮಾಲೆಯಾಗಿ )ಪ್ರಸಾರ ಮಾಡುವ ಏಕೈಕ ರೇಡಿಯೋ ಸ್ಟೇಷನ್ ಸೂಪರ್ ಹಿಟ್ಸ್  93.5 ರೆಡ್ ಎಫ್ ಎಂ  ಆಗಿದೆ.  
ಕೇಳುಗರ ಮನೋರಂಜನೆಯೇ  ರೆಡ್ FM ನ ಜೀವಾಳ ಅಂತೆಯೇ ಹಲವು ಜನಪರ ಕಾಳಜಿ, ಮಾಹಿತಿ ಆಧಾರಿತ  ಹಾಗು  ಮನೋರಂಜನಾ ಕಾರ್ಯಕ್ರಮಗಳನ್ನು ಯಶಸ್ವೀಯಾಗಿ ನೀಡುತ್ತಾ ಬಂದಿದೆ. ನಾನ್ ಸ್ಟಾಪ್ 8 ಹಾಡುಗಳ ಸರಮಾಲೆ -ಚಲನಚಿತ್ರ ಗೀತೆಗಳನ್ನು ಕೇಳಲು ಇಚ್ಚಿಸುವ  ಪ್ರತಿಯೊಬ್ಬರಿಗೂ 8 ಹಾಡುಗಳ ರಸದೌತಣ ವನ್ನು ನೀಡುತ್ತದೆ  ಅಂತೆಯೇ 8  ಹಾಡುಗಳ ಸರಮಾಲೆ ಕೇಳುಗರ ಸಂಭ್ರಮ ಹೆಚ್ಚಿಸಿ ಮನೋ ರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

8ರ ನಂಟು ಗಟ್ಟಿ ಆಗಲೆಂದು ರೆಡ್ FM ನ ನಾನ್  ಸ್ಟಾಪ್ ೮ ಹಾಡುಗಳ ಸರಮಾಲೆಯನ್ನು ಇದೆ ಆಗಸ್ಟ್ 8 ರಂದು ಬೆಳ್ಳಿಗೆ 8 ರಿಂದ ಪ್ರಾರಂಭಿಸಲಾಯಿತು .ಸಂಗೀತ ನಿರ್ದೇಶಕರಾದ ಶ್ರೀ ಅರ್ಜುನ್ ಜನ್ಯ ,ಹಿನ್ನಲೆ ಗಾಯಕರಾದ ಶ್ರೀ.ವಿಜಯ ಪ್ರಕಾಶ್ , ಶ್ರೀಮತಿ ಅನುರಾಧ ಭಟ್, ವಿ ಮನೋಹರ್ ಮತ್ತಿತರ ಸಂಗೀತ ಲೋಕದ ಗಣ್ಯರು ಹಾಗು ಸಂಗೀತ ಪ್ರಿಯರು ಶುಭ ಹಾರೈಸಿದ್ದು ವಿಶೇಷ.

ಶ್ರೀ.ಸುರೇಂದರ್ (COO and Director, Red FM Network): “ಕೇಳುಗರ ಮನೋರಂಜನೆ ನಮ್ಮ ಆದ್ಯತೆ ಕೊರೊನದ ಅಟ್ಟಹಾಸದ ನಡುವೆ ನಮ್ಮ 8  ಹಾಡುಗಳ ಸರಮಾಲೆ ನಮ್ಮ ಜನರಿಗೆ ಸ್ವಲ್ಪ ನೆಮ್ಮದಿಯನ್ನು ತರುವುದೆಂದು ನಾವು ಆಶಿಸುತ್ತೇವೆ. ಸಂಗೀತದ ಮೇಲೆ ಪ್ರೀತಿ ಒಲವು ಸ್ವಾಭಾವಿಕ, ರೇಡಿಯೋ ವಾಹಿನಿಯಾದ ನಾವು ಕೇಳುಗರಿಗೆ ಆಯ್ದ ಸುಮಧುರವಾದ 8 ನಾನ್ ಸ್ಟಾಪ್ ಹಾಡುಗಳ ಸರಮಾಲೆಯನ್ನು ನೀಡುತ್ತಿದ್ದೇವೆ.

ಪ್ರಾಯಶ ಪ್ರತಿ ಘಂಟೆಯೂ ಪ್ರಸಾರವಾಗುವ ಈ ಸರಮಾಲೆಯ ನಮ್ಮ ಈ ಕೊಡುಗೆ ಮೈಸೂರು ಮಂಗಳೂರು ಹುಬ್ಬಳಿ ಧಾರವಾಡದ ಹಾಗೂ ಕಲಬುರ್ಗಿಯ ಜನರಿಗೆ ಇಷ್ಟವಾಗ ಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  
 
 
 
 
 
 
 
 
 
 
 

Leave a Reply