ಶಿರ್ವ ಹಿಂದೂ ಪ್ರೌಢ ಶಾಲೆ -ಎಸ್‌ಎಸ್‌ಎಲ್‌ಸಿ ಪರೀಕ್ಷೆ – ಶ್ರಾವ್ಯಾ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್  

ಶಿರ್ವ:- ಶಿರ್ವದ ಹಿಂದು ಪ್ರೌಢಶಾಲೆಯ ವಿದ್ಯಾರ್ಥಿನಿ  ಶ್ರಾವ್ಯಾ ಜುಲೈನಲ್ಲಿ ನಡೆದ ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳಲ್ಲಿ 621 ಅಂಕಗಳಿಸಿ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿರುತ್ತಾಳೆ.
ಇವಳು ಬಂಟಕಲ್ಲು ಸದಾನಂದ ಮತ್ತು ಶ್ರೀಮತಿ ಸುನಂದ ದಂಪತಿಗಳ ಪುತ್ರಿ. ಈ ವಿದ್ಯಾರ್ಥಿ ನಿಯ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ, ಅಧ್ಯಾಪಕ ವೃಂದದವರು ಶ್ಲಾಘಿಸಿದ್ದಾರೆ.
 
ಪರೀಕ್ಷೆಗೆ ಹಾಜರಾದ, ಎಲ್ಲಾ 65 ವಿದ್ಯಾರ್ಥಿಗಳು  ಉತ್ತೀರ್ಣರಾಗಿ ಸಂಸ್ಥೆಗೆ ಶೇಕಡಾ 100 ಫಲಿತಾಂಶ ಬಂದಿರುತ್ತದೆ. 14ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 39ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ದ್ವಿತೀಯ ಶ್ರೇಣಿಯಲ್ಲಿ 12 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
 
 
 
 
 
 
 
 
 
 
 

Leave a Reply