Janardhan Kodavoor/ Team KaravaliXpress
31.6 C
Udupi
Wednesday, December 8, 2021
Sathyanatha Stores Brahmavara

ಅಲೆವೂರು ಸುಬೋಧಿನೀ ಹಿ. ಪ್ರಾ ಶಾಲೆಯಲ್ಲಿ ಸಮವಸ್ತ್ರ ವಿತರಣೆ ಕಾರ್ಯಕ್ರಮ

ಉಡುಪಿ : ಸುಬೋಧಿನೀ ಹಿ ಪ್ರಾ ಶಾಲೆ ಅಲೆವೂರು ಉಡುಪಿ, ಶಾಲೆಯಲ್ಲಿ ಹೊಸ ದಾಖಲಾತಿ ಪಡೆದ 50 ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರವನ್ನು ಶಾಲಾ ಆಡಳಿತ ಮಂಡಳಿಯ ಗೌರವ ಅಧ್ಯಕ್ಷೆ ವಾರಿಜ ಸುಂದರ ಶೆಟ್ಟಿ ಮತ್ತು ಮಕ್ಕಳಿಂದ ಸುಮಾರು ರೂಪಾಯಿ 30000/- ಮೌಲ್ಯದ ಶಾಲಾ ಸಮವಸ್ತ್ರವನ್ನು ವಿತರಣೆ ಮಾಡಲಾಯಿತು.

ಶಾಲಾ ಗೌರವ ಅಧ್ಯಕ್ಷೆ ವಾರಿಜ ಸುಂದರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ವೈ ಕರುಣಾಕರ ಶೆಟ್ಟಿ , ಉಮೇಶ್ ಶೆಟ್ಟಿ, ಸುಭೋಧರಾಜ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಮುಂಬೈ, ಅಭಿಷೇಕ ಶೆಟ್ಟಿ ಮುಂಬೈ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಶೇಖರ್ ಆಚಾರ್ಯ, ಮುಖ್ಯ ಶಿಕ್ಷಕಿ ಪುಷ್ಪಲತಾ ಬಿ ಎಸ್ , ನಿವೃತ್ತ ಮುಖ್ಯ ಶಿಕ್ಷಕ ಶ್ಯಾಮರಾಯ ಆಚಾರಿ, ಶಾಲಾ ಗೌರವ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಮುಖ್ಯ ಶಿಕ್ಷಕಿ ಪುಷ್ಪಲತಾ ಸ್ವಾಗತಿಸಿ,ಗೌರವ ಶಿಕ್ಷಕಿ ಕುಮಾರಿ ಶ್ರೀಲತಾ ಧನ್ಯವಾದ ನೀಡಿದರು. ಗೌರವ ಶಿಕ್ಷಕಿ ಕುಮಾರಿ ರೇಖಾ ಕಾರ್ಯಕ್ರಮ ನಿರ್ವಹಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!