ಮಣಿಪಾಲ : ಸ್ಕಿನ್ ಬ್ಯಾಂಕ್ ರೋ.ಜಿಲ್ಲಾ ಗವರ್ನರ್ ಭೇಟಿ

ಮಣಿಪಾಲ : ಸ್ಕಿನ್ ಬ್ಯಾಂಕ್ ರೋ.ಜಿಲ್ಲಾ ಗವರ್ನರ್ ಭೇಟ
ಮಣಿಪಾಲ : ರೋಟರಿ ಕ್ಲಬ್ ಮಣಿಪಾಲ ಟೌನ್ ಸಹಕಾರ ಮತ್ತು ಮಾಹೆ ವಿಶ್ವವಿದ್ಯಾಲಯಗಳ ಜಂಟಿ ಯೋಜನೆಯಾದ ಸ್ಕಿನ್ ಬ್ಯಾಂಕ್ ಒಂದು ಚರಿತ್ರಾರ್ಹವಾದ ಮತ್ತು ಅತ್ಯವಶ್ಯಕವಾದ ಯೋಜನೆ.
ರೋಟರಿಯ ಅಂತರ್ರಾಷ್ಟ್ರೀಯ ಅನುದಾನದಿಂದ ಮತ್ತು ಮಾಹೆಯ ಆಡಳಿತವರ್ಗದವರಿಂದ ಸಹಕಾರದಿಂದ
ರೂ.1.50 ಕೋಟಿಯ ಮೊತ್ತದಲ್ಲಿ ಇದು ಸುಸಜ್ಜಿತವಾಗಿ ಸಿದ್ಧವಾಗಿದೆ.
ಇದು ದೇಶದ ಅತ್ಯುತ್ತಮ ಸ್ಕಿನ್ ಬ್ಯಾಂಕ್ ಆಗಿ ಮೂಡಿಬರಲಿ ಎಂದು ರೋ. ಎಂ.ಜಿ. ರಾಮಚಂದ್ರ ಮೂರ್ತಿಯವರು ಹೇಳಿದರು.

ಮಾಹೆಯ ಬರ್ನ್ ಸೆಂಟರಿನ ಮುಖ್ಯಸ್ಥ ಡಾ. ಶ್ರೀಕುಮಾರ್ ಈ ಘಟಕದ ಕಾರ್ಯವೈಖರಿಯ ಪರಿಚಯ ಮಾಡಿಸಿಕೊಟ್ಟರು.

ಜಿಲ್ಲಾ ಏಜಿ. ಡಾ. ಸುರೇಶ್ ಶಣೈ ಮಾತನಾಡಿ ಮನುಷ್ಯನ ಅಂಗಾಂಗ ದಾನದಲ್ಲಿ ಚರ್ಮದಾನದ ಮಹತ್ವವನ್ನು ಪ್ರಚಾರ ಮಾಡಿ ಚರ್ಮದಾನಿಗಳ ನೋಂದಾವಣಿ ಮಾಡಿಸುವುದಕ್ಕೆ ರೋಟರಿಯು ಮಾಹೆಯೊಂದಿಗೆ ಶ್ರಮಿಸುವುದಾಗಿ ನುಡಿದರು.

ವಲಯ ಸೇನಾನಿ ಸಚ್ಚಿದಾನಂದ ನಾಯಕ್, ಜಿಲ್ಲಾ ತರಬೇತುದಾರ ಶೇಸಪ್ಪ ರೈ, ಕ್ಲಬ್ಬಿನ ಅಧ್ಯಕ್ಷ ಗಣೇಶ್ ನಾಯಕ್, ಕಾರ್ಯದರ್ಶಿ ನಿತ್ಯಾನಂದ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಡಾ. ಬಸವರಾಜ್ ಹಡಪದ ವಂದಿಸಿದರು.

 
 
 
 
 
 
 
 
 
 
 

Leave a Reply