Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ಕಲೆಯನ್ನು ಮುಂದಿನ ತಲೆಮಾರಿಗೆ ಧಾರೆ ಎರೆಯುವುದನ್ನು ಎಂದೂ ಮರೆಯಬಾರದು- ಹೆಚ್ ಶ್ರೀಧರ ಹಂದೆ

 

ಶಾ೦ತಿಮತೀ ಪ್ರತಿಷ್ಠಾನದ ಪ್ರಶಸ್ತಿ ಸ್ವೀಕರಿಸಿ ಹೇಳಿಕೆ
ಕೋಟ: ಕಲೆಗೆ ಎಂದೂ ನಿವೃತ್ತಿ ಇಲ್ಲ ಆದರೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದು ನಿವೃತ್ತಿಯಂಚಿನಲ್ಲಿರುವವರು ತಮ್ಮಲ್ಲಿರುವ ಪ್ರತಿಭೆಯನ್ನು ಮುಂದಿನ ತಲೆಮಾರಿ ಧಾರೆ ಎರೆಯುವುದನ್ನು ಎಂದೂ ಮರೆಯಬಾರದು ಎಂದು ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಯಜಮಾನ ಹೆಚ್ ಶ್ರೀಧರ ಹಂದೆ ಹೇಳಿದ್ದಾರೆ.

ಕೋಟ ಮಾಂಗಲ್ಯ ಮಂದಿರ ಇಲ್ಲಿ ಶ್ರೀ ಶಾಂತಿಮತೀ ಪ್ರತಿಷ್ಠಾನ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಹಂದಾಡಿ ಬ್ರಹ್ಮಾವರ ಇದರ ವಾರ್ಷಿಕೋತ್ಸವದ ಅಂಗವಾಗಿ ಶಾಂತಿಮತೀ ಪುರಸ್ಕಾರ -೨೦೨೨ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಾಂತಿಮತೀ ಪುರಸ್ಕಾರ ಸ್ವೀಕರಿಸಿ ಮಾತನಾಡಿ ಆ ಮೂಲಕ ಎಷ್ಟೋ ಕಲೆಗಳು ಮರಿಚಿಕೆಯಾಗುವುದನ್ನು ತಪ್ಪುತ್ತದೆ

ಹೃದಯವಂತರಿಂದ ಪುರಸ್ಕರಿಸುವ ಪ್ರಶಸ್ತಿಗಳು ರಾಷ್ಟ್ರ ಪ್ರಶಸ್ತಿಗಿಂತ ಸರ್ವಶ್ರೇಷ್ಠತೆಯನ್ನು ಹೊಂದಿರುತ್ತದೆ ಅಲ್ಲದೆ
ಪ್ರಶಸ್ತಿ ,ಸಂಮ್ಮಾನಗಳು ಜವಾಬ್ದಾರಿ ಹೆಚ್ಚಿಸುವ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟರಲ್ಲದೆ ಪ್ರತಿಭೆಗಳು ಅಪರೂಪವಾಗಿರದೆ ಪ್ರತಿಯೊಬ್ಬ ನಲ್ಲೂ ನೆಲೆಯೂರಿರುತ್ತದೆ ಆದರೆ ಅದನ್ನು ಹೊರಗೆಳೆವ ಪ್ರಯತ್ನ ಮನೆಯ ಪೋಷಕರು ಮಾಡಬೇಕು.ಸಂಸ್ಕಾರಯುತ ಜಗತ್ತಿಗೆ ಪೋಷಕರ ಕೊಡುಗೆ ಅನನ್ಯವಾದದ್ದು ದಾನ ಧರ್ಮಗಳು ಜೀವನದ ಮೌಲ್ಯಗಳ ಹೆಚ್ಚಿಸುತ್ತದೆ.

ಪ್ರಸ್ತುತ ಕಾಲಘಟ್ಟದಲ್ಲಿ ಮರೆಯಾಗುತ್ತಿರುವ ಸಾಂಪ್ರಾದಯಕ ಕ್ರಮಗಳ ಕುರಿತು ಒತ್ತಿ ಹೇಳಿದರಲ್ಲದೆ ಪ್ರತಿಯೊಂದು ಮನೆ ಮನಗಳಲ್ಲಿ ಕಲಾರಾಧನೆ ನಡೆಯಬೇಕು ಆ ಮೂಲಕ ನಾವು ಉಳಿಸಿಕೊಂಡು ಬಂದ ಯಕ್ಷ ಪರಂಪರೆಗೆ ಮುನ್ನುಡಿ ಬರೆಯಬೇಕು ಮುಂದಿನ ಜನಾಂಗಕ್ಕೆ ನೈಜ ಇತಿಹಾಸ ದೊರಕುವಂತ್ತಾಗಬೇಕು ಎಂದು ಕರೆ ಇತ್ತು, ಪ್ರತಿಯೊಬ್ಬ ಸಾಧಕನ ಜೀವನದಲ್ಲಿ ಸಾರ್ಥಕತೆ ಕಾಣುವುದು ಅವನನ್ನು ಗುರುತಿಸಿ ಗೌರವಿಸಿದಾಗ ಅಂತಹ ಕಾರ್ಯವನ್ನು ಶಾಂತಿಮತೀ ಪ್ರತಿಷ್ಠಾನ ಕೈಗೊಂಡಿದೆ ಇದು ಪ್ರಶಂಸನೀಯ ಕಾರ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ಅಧ್ಯಕ್ಷ ಗಣೇಶ್ ಅಡಿಗ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು,ಆಶಾವಾಣಿ ಟ್ರಸ್ಟ್ನ ಡಾ.ವಾಣಿಶ್ರೀ ಐತಾಳ್ ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯದರ್ಶಿ ಸಚ್ಚಿದಾನಂದ ಅಡಿಗ ವಡ್ಡರ್ಸೆ ಸ್ವಾಗತಿಸಿದರು. ಸಂಸ್ಥೆಯ ಸಂಘಟಕ ಪಾಂಡೇಶ್ವರ ಡಾ.ವಿಜಯ ಕುಮಾರ್ ಮಂಜರು ಪ್ರಾಸ್ತಾವವನೆ ಸಲ್ಲಿಸಿ ವರದಿ ವಾಚಿಸಿದರು.ಸಂಸ್ಥೆಯ ಮಾಜಿ ಅಧ್ಯಕ್ಷ ದಯಾನಂದ ವಾರಂಬಳ್ಳಿ ಪ್ರಶಸ್ತಿಪತ್ರ ವಾಚಿಸಿದರು,ಕೋಶಾಧಿಕಾರಿ ಉಮೇಶ್ ಬಾಯರಿ ಆಯವ್ಯಯ ಮಂಡಿಸಿದರು,ಕಾರ್ಯಕ್ರಮವನ್ನು ಸಂಸ್ಥೆಯ ರಾಮಚಂದ್ರ ಉಡುಪ ನಿರೂಪಿಸಿದರು. ಶ್ರೀ ಶಾಂತಿಮತೀ ಪ್ರತಿಷ್ಠಾನದ ಅಧ್ಯಕ್ಷ ಚಂದ್ರಶೇಖರ ಉಡುಪ ವಂದಿಸಿದರು.

ಈ ಕಾರ್ಯಕ್ರಮದ ಹಿನ್ನಲ್ಲೆಯಲ್ಲಿ ಕೋಟ ಮಹತೋಭಾರ ಹಿರೇಮಹಾಲಿಂಗೇಶ್ವರ ದೇವಳದಲ್ಲಿ ಮಹಾಮೃತ್ಯುಂಜಯ ಯಾಗ,ಏಕದಶ ರುದ್ರಾಭಿಷೇಕ, ವಿಪ್ರಬಾಂಧವರಿಂದ ವಿಷ್ಣು ಸಹಸ್ರನಾಮ ಪಠಣ ,ಗಾನ ನೃತ್ಯ ವೈಭವ ಜರಗಿತು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!