ಸೀನಿಯರ್ ಚೇಂಬರ್‌ನಿoದ ವಿಶ್ವ ದಾದಿಯರ ದಿನಾಚರಣೆ

ಕೋಟ: ಸಿನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ಉಡುಪಿ ಟೆಂಪಲ್ ಸಿಟಿ ಹಾಗೂ ಗಿರಿಜ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ಉಡುಪಿ ಅದರ ಜಂಟಿ ಆಶ್ರಯದಲ್ಲಿ ವಿಶ್ವ ದಾದಿಯರ ದಿನಾಚರಣೆಯನ್ನು ಗಿರಿಜ ಹೆಲ್ತ್ ಕೇರ್ ಉಡುಪಿಯ ಕಛೇರಿಯಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ| ಎ.ವಿ ಬಾಳಿಗ ಆಸ್ಪತ್ರೆಯ ವೈದ್ಯರಾದ ಡಾ|
ವಿರೂಪಾಕ್ಷ ದೇವರಮನೆಯವರು ಪ್ಲೊರೆನ್ಸ್ ನೈಂಟಿಗೆಲ್‌ರ ಅಪೂರ್ವ ಸೇವೆ,
ಅವರ ಸೇವಾ ಗುಣಮಟ್ಟವನ್ನು ಇಂದು ದಾದಿಯರು ನೆನಪಿಟ್ಟುಕೊಂಡು
ರೋಗಿಗಳಿಗೆ ಮಾನವೀಯ ಸೇವೆ ನೀಡಿದರೆ ಅದೇ ಅವರ ಹುಟ್ಟುಹಬ್ಬಕ್ಕೆ
ನೀಡುವ ಸ್ಮರಣೀಯ ಉಡುಗೊರೆ ಎಂದರು.
ನಿವೃತ್ತರಾದ ಹತ್ತು ಮಂದಿ ದಾದಿಯರಿಗೆ ಸನ್ಮಾನಿಸಲಾಯಿತು.
ಇಪ್ಪತ್ತೈದು ಮಂದಿ ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ ಸೇವೆ
ಸಲ್ಲಿಸುತ್ತಿರುವ ದಾದಿಯರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು. ಸೀನಿಯರ್
ಚೇಂಬರ್ ಇಂಟರ್‌ನ್ಯಾಶನಲ್ ಉಡುಪಿ ಟೆಂಪಲ್ ಸಿಟಿ ಅಧ್ಯಕ್ಷ ಜಗದೀಶ್ ಕೆಮ್ಮಣ್ಣು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಿರಿಜ ಹೆಲ್ತ್ ಕೇರ್ ಮತ್ತು
ಸರ್ಜಿಕಲ್ಸ್ನ ಅರ್ಹತೆ ಪಾಲುದಾರ ರವೀಂದ್ರ ಕೆ. ಶೆಟ್ಟಿ ಸ್ವಾಗತಿಸಿದರು.
ವೇದಿಕೆಯಲ್ಲಿ ಲಯನೆಸ್ ಗಿರಿಜ ಶಿವರಾಮ ಶೆಟ್ಟಿ, ಸೀನಿಯರ್ ಚೇಂಬರ್ ಇಂಟರ್
ನ್ಯಾಶನಲ್‌ನ ಸಮುದಾಯ ಸೇವಾ ವಿಭಾಗದ ರಾಷ್ಟ್ರೀಯ  ನಿರ್ದೇಶಕ
ಚಿತ್ರಕುಮಾರ್, ಬೆಳವಣಿಗೆ ಹಾಗೂ ಅಭಿವೃದ್ಧಿ ವಿಭಾಗದ ರಾಷ್ಟ್ರೀಯ 
ನಿರ್ದೇಶಕ ವಿಜಯ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು. ಕಾರ್ಯದರ್ಶಿ
ಸಂತೋಷ್ ಕುಮಾರ್ ಉದ್ಯಾವರ ವಂದಿಸಿದರು.

ಸಿನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ಉಡುಪಿ ಟೆಂಪಲ್ ಸಿಟಿ ಹಾಗೂ ಗಿರಿಜ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ಉಡುಪಿ ಅದರ ಜಂಟಿ ಆಶ್ರಯದಲ್ಲಿ ವಿಶ್ವ ದಾದಿಯರ ದಿನಾಚರಣೆಯ ಪ್ರಯುಕ್ತ ನಿವೃತ್ತರಾದ ಹತ್ತು ಮಂದಿ ದಾದಿಯರಿಗೆ
ಸನ್ಮಾನಿಸಲಾಯಿತು. ಇಪ್ಪತ್ತೈದು ಮಂದಿ ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ
ಸೇವೆ ಸಲ್ಲಿಸುತ್ತಿರುವ ದಾದಿಯರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು.
ಲಯನೆಸ್ ಗಿರಿಜ ಶಿವರಾಮ ಶೆಟ್ಟಿ, ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್‌ನ
ಸಮುದಾಯ ಸೇವಾ ವಿಭಾಗದ ರಾಷ್ಟ್ರೀಯ ನಿರ್ದೇಶಕ ಚಿತ್ರಕುಮಾರ್,
ಬೆಳವಣಿಗೆ ಹಾಗೂ ಅಭಿವೃದ್ಧಿ ವಿಭಾಗದ ರಾಷ್ಟ್ರೀಯ ನಿರ್ದೇಶಕ ವಿಜಯ
ಕುಮಾರ್ ಉದ್ಯಾವರ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply