ಎಸ್.ಡಿ.ಎಮ್. ಬಿ.ಎಚ್.ಯು. ತ್ರಿವಳಿ- ಕಾಲೇಜು ಕ್ರೀಡಾಕೂಟ-೨೦೨೨

ಬೆಂಗಳೂರು, ಉಡುಪಿ, ಹಾಸನಗಳಲ್ಲಿರುವ, ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆ, ಉಜಿರೆಗೆ ಸೇರಿರುವ ಮೂರು ಆಯುರ್ವೇದ ಕಾಲೇಜುಗಳ ಒಕ್ಕೂಟದ, ಎರಡು ದಿನಗಳ ‘ ಬಿ.ಹೆಚ್.ಯು ತ್ರಿವಳಿ ಕಾಲೇಜು’ ಕ್ರೀಡಾಕೂಟವು ಉಡುಪಿಯ ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆ, ಉಜಿರೆಯ ಜಂಟಿ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್.ರವರ ಅಧ್ಯಕ್ಷತೆಯಲ್ಲಿ ಏಪ್ರಿಲ್ ೨೯ ರಂದು ನಡೆದ ಕ್ರೀಡಾಕೂಟದ ಉದ್ಘಾಟನೆಯನ್ನು ಆಳ್ವಾಸ್ ಶಿಕ್ಶಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಅಳ್ವರು ನಡೆಸಿಕೊಟ್ಟು ದೈಹಿಕ ಸಾಮರ್ಥ್ಯದ ಮಹತ್ವವನ್ನು ತಿಳಿಸಿ, ಪ್ರತಿಯೊರ್ವರೂ ಕ್ರೀಡಾಕೂಟದಲ್ಲಿ ಭಗವಹಿಸಿ, ತಮ್ಮ ಆರೋಗ್ಯರಕ್ಷಣೆಯನ್ನು ಮಾಡಿಕೊಳ್ಳಬೇಕು, ಉತ್ತಮ ಕ್ರೀಡಾಪಟುಗಳು ದೇಹಬಲದೊಂದಿಗೆ ಮನೋಬಲವನ್ನೂ ಕೂಡ ಹೆಚ್ಚಿಸಿಕೊಂಡು ಉತ್ತಮ ವೈದ್ಯರೂ ಆಗಬಲ್ಲರು ಎಂದರು. ಡಾ. ಸತೀಶ್ಚಂದ್ರ ಎಸ್.ರವರು ಹೊರಾಂಗಣ ಕ್ರೀಡೆಗಳ ಒಳ್ಳೆಯ ಪರಿಣಾಮಗಳ ಬಗ್ಗೆ ತಿಳಿಸಿ ಕ್ರೀಡಾ ಮನೋಭಾವವನ್ನು ಹೆಚ್ಚಿಸಿಕೊಳ್ಳುವ ಸಲಹೆ ಇತ್ತು ಶುಭ ಹಾರೈಸಿದರು.

ಉಡುಪಿ ಎಸ್.ಡಿ.ಎಮ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತ ಕೆ.ವಿ, ಎಸ್.ಡಿ.ಎಮ್ ಆಯುರ್ವೇದ ಆಸ್ಪತ್ರೆಯ ಅಧೀಕ್ಷಕರಾದ ಡಾ. ನಾಗರಾಜ್.ಎಸ್, ಉಪ ಅಧೀಕ್ಷಕಾರಾದ ಡಾ. ದೀಪಕ್ ಎಸ್.ಎಮ್., ಸ್ನಾತಕೋತ್ತರ ವಿಭಾಗದ ಡೀನ್ ಡಾ. ಸುಚೇತಕುಮಾರಿ, ಸ್ನಾತಕ ವಿಭಾಗದ ಡೀನ್ ಡಾ. ವೀರಕುಮಾರ ಕೆ. ಕ್ರೀಡಾ ಸಂಚಾಲಕರಾದ ಡಾ ಪೃಥ್ವಿರಾಜ್ ಪುರಾಣಿಕ್ ಉಪಸ್ಥಿತರಿದ್ದರು. ಡಾ. ಮಮತಾ ಕೆ.ವಿ ಸ್ವಾಗತಿಸುತ್ತಾ ಕ್ರೀಡಾ ಕೂಟದ ಉದ್ದೇಶ ವರ್ಷಕ್ಕೆ ಒಮ್ಮೆಯಾದರೂ ಮೂರು ಸಂಸ್ಥೆಗಳ ವಿದ್ಯಾರ್ಥಿಗಳು, ಬೋಧನಾ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಒಗ್ಗೂಡಿಸುವುದು ಮತ್ತು ಇದು ಆಂತರಿಕ ಅಭಿವೃದ್ದಿಗೆ ಸಹಾಯಕವಾಗಲಿದೆ ಎಂದು ಪ್ರಾಸ್ತಾವನೆಗೈದರು.
ಎಪ್ರಿಲ್ ೩೦ರಂದು ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉತ್ತಮ ಪ್ರದರ್ಶನವನ್ನು ಮೂರೂ ಕಾಲೇಜುಗಳು ನೀಡಿ ಅನೇಕ ಟ್ರೋಫಿಗಳನ್ನು ಗೆದ್ದರು. ಸಮಗ್ರ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಉಡುಪಿ ಆಯುರ್ವೇದ ಕಾಲೇಜು ಗೆದ್ದುಕೊಂಡಿತು. ಅಥಿತಿಗಳಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್ ಸಭೆಯನ್ನುದ್ದೇಶಿಸಿ ಮಾತನಾಡಿ ಕ್ರೀಡೆ ದೈಹಿಕ ಸಾಮರ್ಥ್ಯವನ್ನು ಉತ್ತಮವಾಗಿಸುತ್ತದೆ ಎಂದು ಹೇಳಿ ಸ್ಪೋರ್ಟ್್ಸ ಮೆಡಿಸಿನ್ ಕ್ಲಬ್. ಮಂಗಳೂರು ಇದರ ವಿವಿಧ ಚಟುವಟಿಗೆಗಳ ಬಗ್ಗೆ ಮಾಹಿತಿ ನೀಡಿದರು. ಉಡುಪಿ ಎಸ್.ಡಿ.ಎಮ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತ ಕೆ.ವಿಯವರು ಅಧ್ಯಕ್ಷತೆಯನ್ನು ವಹಿಸಿ, ಭಾಗವಹಿಸಿದ ಎಲ್ಲರನ್ನೂ ಶ್ಲಾಘಿಸಿ, ವಿಜೇತರನ್ನು ಅಭಿನಂದಿಸಿದರು. ಎಸ್.ಡಿ.ಎಮ್ ಆಯುರ್ವೇದ ಆಸ್ಪತ್ರೆಯ ಅಧೀಕ್ಷಕರಾದ ಡಾ. ನಾಗರಾಜ್.ಎಸ್, ಎಸ್.ಡಿಎಮ್ ಆಯುರ್ವೇದ ಫಾರ್ಮಸಿಯ ವ್ಯವಸ್ಥಾಪಕ ಡಾ ಮುರಳೀಧರ ಆರ್., ಹಾಸನದ ಎಸ್.ಡಿ.ಎಮ್ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕರೂ ಹಾಗೂ ಪ್ರಸೂತಿ -ಸ್ತಿçÃರೋಗ ವಿಭಾಗ ಮುಖ್ಯಸ್ಥರಾದ ಡಾ. ಗಾಯತ್ರಿ ಭಟ್, ಪ್ರಾಧ್ಯಾಪಕರೂ ಹಾಗೂ ಪಂಚಕರ್ಮ ವಿಭಾಗ ಮುಖ್ಯಸ್ಥರಾದ ಡಾ ಅರುಣ ಜೈನ್ ಸ್ನಾತಕ, ಕ್ರೀಡಾ ಸಂಚಾಲಕರಾದ ಡಾ ಪೃಥ್ವಿರಾಜ್ ಪುರಾಣಿಕ್ ಉಪಸ್ಥಿತರಿದ್ದರು. ಕಾಲೇಜಿನ ರೋಟರಾಕ್ಟ್ ಕ್ಲಬ್ ವತಿಯಿಂದ ಮಾದಕವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ‘ನಿಷ್ಕರ್ಶ’ ಎಂಬ ಬೀದಿನಾಟಕವೂ ನಡೆಯಿತು.

 
 
 
 
 
 
 
 
 
 
 

Leave a Reply