ಬೆಂಗಳೂರಿನಲ್ಲಿ ಗಲಭೆ ನಡೆಸಲು ಪೆಟ್ರೋಲ್ ಬಾಂಬ್ ಸಂಗ್ರಹಿಸಿದ್ದ ಮೂವರು ಅಂದರ್

ಬೆಂಗಳೂರು: ನಗರದಲ್ಲಿ ಗಲಭೆ ಸೃಷ್ಠಿಸೋ ಕಾರಣದಿಂದಾಗಿ ಪೆಟ್ರೋಲ್ ಬಾಂಬ್ ಗಳನ್ನು ಸಂಗ್ರಹಿಸಿದ್ದಂತ ಮೂವರು ಆರೋಪಿಗಳನ್ನು, ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಹೆಣ್ಣೂರು ಪೊಲೀಸರು, ಗಲಭೆ ಸೃಷ್ಠಿಸಲು ಪೆಟ್ರೋಲ್ ಬಾಂಬ್ ಸಂಗ್ರಹಿಸಿದ್ದಂತ ಮುನಾವರ್ ಪಾಷಾ, ಸೈಯದ್ ಹುಸೇನ್ ಮತ್ತು ಸಿಕ್ಕಂದರ್ ಎಂಬಂತ ಮೂವರು ಆರೋಪಿಗಳನ್ನ ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.

 

ಬಂಧಿತ ಆರೋಪಿಗಳಿಂದ 1 ನಾಡಾ ಪಿಸ್ತೂಲ್, 1 ಜೀವಂತ ಗುಂಡು, 10 ಬಿಯರ್ ಬಾಟಲ್, ಲಾಂಗ್ ಮತ್ತು ಮಚ್ಚುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಮೂವರು ಆರೋಪಿಗಳು ಸಾರಾಯಿ ಪಾಳ್ಯದ ನಿವಾಸಿಗಳೆಂದು ತಿಳಿದು ಬಂದಿದೆ.

 
 
 
 
 
 
 
 
 
 
 

Leave a Reply