ಚರಕ ಸಂಹಿತಾ ಉದಯಾಸ್ತಮಾನ ಪಾರಾಯಣ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಕುತ್ಪಾಡಿ ಉಡುಪಿಯಲ್ಲಿ ಆಯೋಜಿಸಲಾಗಿದ್ದ ಚರಕ ಸಂಹಿತಾ ಉದಯಾಸ್ತಮಾನ ಪಾರಾಯಣದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ನಿವೃತ್ತ ವೈದ್ಯಕೀಯ ಅಧೀಕ್ಷಕರಾದ ಡಾ. ಮುರಳೀಧರ ಶರ್ಮ ಅವರು ವೈಜ್ಞಾನಿಕ ಸಂಶೋಧನೆಗಳು, ಪ್ರಬಂಧ ಮಂಡನೆ, ಶಿಕ್ಷಣ ಕ್ರಮಗಳ ಕುರಿತು ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಚರಕ ಸಂಹಿತೆಯಲ್ಲಿ ವಿವರಿಸಲ್ಪಟ್ಟಿದೆ ಎಂದು ಅಭಿಪ್ರಾಯಪಟ್ಟರು. ಚರಕ ಜಯಂತಿಯ ಪ್ರಯುಕ್ತ ಕಾಲೇಜಿನ ಸಂಹಿತಾ ಸಿದ್ಧಾಂತ ವಿಭಾಗ ಹಾಗೂ ಸಾಂಸ್ಕೃತಿಕ ಸಂಘದಿoದ ಜಂಟಿಯಾಗಿ ಚರಕ ಸಂಹಿತಾ (ಸೂತ್ರಸ್ಥಾನ) ಉದಯಾಸ್ತಮಾನ ಪಾರಾಯಣವು ಆಗಸ್ಟ್ 24ರಂದು ಆಯೋಜಿಸಲ್ಪಟ್ಟಿತು. ಮುಂಜಾನೆ 5:30 ರ ಉಷಃಕಾಲದಲ್ಲಿ ದೀಪ ಬೆಳಗಿ ಚರಕ ಸಂಹಿತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಗೊoಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ. ಭಾಗವಹಿಸಿದ್ದರು. ಸೂರ್ಯೋದಯದ ಶುಭ ಮುಹೂರ್ತಕ್ಕೆ ಆಯುರ್ವೇದದ ಪ್ರಧಾನ ಶಾಸ್ತçಗ್ರಂಥವಾದ ಆಚಾರ್ಯ ಅಗ್ನಿವೇಶಕೃತ ಚರಕ ಸಂಹಿತೆಯ ಪ್ರಥಮ ಭಾಗವಾದ ಸೂತ್ರಸ್ಥಾನದ ಪಾರಾಯಣ ಆರಂಭಗೊAಡಿತು. ಕಾಲೇಜಿನ ಸ್ನಾತಕ, ಸ್ನಾತಕೋತ್ತರ, ಕಿರುವೈದ್ಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವರ್ಗದವರು 20 ಜನರ ತಂಡಗಳಾಗಿ ಮಾಡಿಕೊಂಡು ಅಧ್ಯಾಯಾನುಸಾರ ಸತತವಾಗಿ ಸಾಯಂಕಾಲ ಸೂರ್ಯಾಸ್ತದ ತನಕ ಒಟ್ಟು 33 ಅಧ್ಯಾಯಗಳ ಪಾರಾಯಣವನ್ನು ಶ್ರುತಿ, ಲಯ ಬದ್ಧವಾಗಿ ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಅವರ ಮಾರ್ಗದರ್ಶನದೊಂದಿಗೆ ಜರುಗಿದ ಕಾರ್ಯಕ್ರಮಕ್ಕೆ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ನಿರಂಜನ್ ರಾವ್ ಅವರು ವಿದ್ಯಾರ್ಥಿಗಳಿಗೆ ಉಪಾಹಾರದ ವ್ಯವಸ್ಥೆಯನ್ನು ಒದಗಿಸಿ ಸಂಪೂರ್ಣ ಸಹಕಾರ ನೀಡಿದರು.
ಸಂಧ್ಯಾಕಾಲ 6:45 ಕ್ಕೆ ಕಾಲೇಜಿನ ನಿವೃತ್ತ ಡೀನ್, ರಸಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಪಿ.ಯು. ರೆಂಜಾಳ್ ಅವರು ಚರಕ ಸಂಹಿತೆಗೆ ಆರತಿ ಬೆಳಗುವ ಮೂಲಕ ಪಾರಾಯಣವನ್ನು ಸಮಾಪನಗೊಳಿಸಿದರು. ಬಳಿಕ ಜರುಗಿದ ಸಮಾರೋಪ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪಾರಾಯಣದಿಂದ ಉಂಟಾಗುವ ಕಂಪನಗಳ ಧನಾತ್ಮಕ ಪರಿಣಾಮದಿಂದ ಲೋಕಕ್ಕೆ ಸನ್ಮಂಗಳವುoಟಾಗಲಿ ಎಂದು ಆಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್.ಡಿ.ಎಮ್. ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ನಾಗರಾಜ್ ಎಸ್.ರವರು ಚರಕ ಸಂಹಿತೆಯು ಜೀವನ ಕ್ರಮವನ್ನು ಹೇಗೆ ಧನಾತ್ಮಕವಾಗಿ ಬದಲಿಸುತ್ತದೆ ಎಂಬುದನ್ನು ವಿವರಿಸಿದರು. ಈ ಸಂದರ್ಭದಲ್ಲಿ ಸಂಹಿತಾ ಸಿದ್ಧಾಂತ ವಿಭಾಗದ ಸಂಸ್ಕೃತ ಪ್ರಾಧ್ಯಾಪಕರಾದ ಶ್ರೀಯುತ ಸುಬ್ರಹ್ಮಣ್ಯ ಭಟ್ ಪಿ. ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪೂರ್ಣ ವರದಿಯನ್ನು ಸಂಹಿತಾ ಸಿದ್ಧಾಂತ ವಿಭಾಗಾಧ್ಯಕ್ಷೆ ಡಾ. ವಿದ್ಯಾಲಕ್ಷ್ಮೀ ಕೆ. ಮಂಡಿಸಿದರು. ಸಾಂಸ್ಕೃತಿಕ ಸಂಘದ ಮುಖ್ಯಸ್ಥರಾದ ಡಾ. ವಿಜಯೇಂದ್ರ ಭಟ್ ವಂದಿಸಿದರು. ಸಂಹಿತಾ ಸಿದ್ಧಾಂತ ವಿಭಾಗದ ಡಾ. ಅರ್ಹಂತ್ ಕುಮಾರ್, ಡಾ. ಲಿಖಿತ ಡಿ.ಎನ್., ಡಾ.ಅರ್ಚನಾ ಶುಕ್ಲ, ಡಾ. ಮಹಾಲಕ್ಷ್ಮೀ ಎಮ್.ಎಸ್., ಸಾಂಸ್ಕೃತಿಕ ಸಂಘದ ಡಾ. ಶ್ರೀನಿಧಿ ಧನ್ಯ, ಡಾ. ಸಂದೇಶ್ ಶೆಟ್ಟಿ, ಡಾ. ಶೈಲೇಶ್, ಡಾ.ಸುಶ್ಮಾ ಸಂಪೂರ್ಣ ಕಾರ್ಯಕ್ರಮವನ್ನು ಸುಗಮವಾಗಿ ಜರುಗುವಂತೆ ಸಹಕರಿಸಿದರು.

 
 
 
 
 
 
 
 
 
 
 

Leave a Reply