ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಕುತ್ಪಾಡಿ, ಉಡುಪಿ ವಿಶ್ವ ಪರಿಸರ ದಿನಾಚರಣೆ

ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಕುತ್ಪಾಡಿಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ 7, ಜೂನ್ 2022 ರಂದು ಕಾಲೇಜಿನ ದ್ರವ್ಯಗುಣ ವಿಭಾಗ ಹಾಗೂ ಹರ್ಬ್ ಗಾರ್ಡನ್ ಕಮಿಟಿ ವತಿಯಿಂದ, ಆವರಣದಲ್ಲಿ ಸಸಿಗಳ ಸಂಗ್ರಹಣೆ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಜಲ ಮರುಪೂರಣ ತಜ್ಞ ಶ್ರೀ ಜೋಸೆಫ್ ಜಿ.ಎಮ್. ರೆಬೆಲ್ಲೋರವರು ‘ಮಳೆ ನೀರು ಕೊಯ್ಲು’ ವಿಷಯದ ಮೇಲೆ ಉಪನ್ಯಾಸ ನೀಡಿದರು. ಬರಗಾಲದಿಂದ ಜನರ ಸ್ಥಿತಿ, ದೇಶದಲ್ಲಿ ಮಳೆಯ ಪ್ರಮಾಣ ಯಾವ ತರಹದಲ್ಲಿ ನೀರಿನ ತ್ಯಾಜ್ಯವಾಗುತ್ತಿದೆ, ಜಲಮಾಲಿನ್ಯ ಹಾಗೂ ಇದೆಲ್ಲವನ್ನು ತಡೆಗಟ್ಟಲು ಹೇಗೆ ಮಳೆ ನೀರಿನ ಕೊಯ್ಲು ಉಪಯುಕ್ತ ಮತ್ತು ಅದನ್ನು ಮಾಡುವ ವಿಧಾನದ ಬಗ್ಗೆ ತಿಳಿಸಿದರು.

ಸಭೆಯ ಅಧ್ಯಕ್ಷರಾಗಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ.ಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜಲದ ಪ್ರಾಮುಖ್ಯತೆ ಹಾಗೂ ಅದರ ಮಿತವಾದ ಬಳಕೆಯ ಬಗ್ಗೆ ಹೇಳಿ ಮುಖ್ಯ ಅತಿಥಿಯನ್ನು ಸನ್ಮಾನಿಸಿದರು.

ಕಾಲೇಜಿನ ಸ್ನಾತಕೋತ್ತರ ಹಾಗೂ ಪಿ.ಎಚ್‌ಡಿ ಅಧ್ಯಯನ ಕೇಂದ್ರದ ಡೀನ್ ಡಾ. ನಿರಂಜನ್ ರಾವ್ ಅವರು ಜಲದ ಪ್ರಾಮುಖ್ಯತೆ ಹಾಗೂ ಮಳೆ ನೀರಿನ ಕೊಯ್ಲಿನ ಬಗ್ಗೆ, ಅದರ ಅಳವಡಿಕೆ ತುಂಬಾ ಸಹಾಯಕಾರಿ ಎಂದು ವ್ಯಕ್ತ ಪಡಿಸಿದರು. ದ್ರವ್ಯಗುಣ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಸುಮಾ ಮಲ್ಯ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕರಾದ ಡಾ. ನಿವೇದಿತಾ ಶೆಟ್ಟಿ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್., ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply