ಮರಳಿಗೆ ಶಾಲೆಗೆ ಬಂದ ಬುದ್ದಿಮಾಂದ್ಯ ಮಕ್ಕಳು

ಚಿಕ್ಕಮಗಳೂರು, ಫೆ.೨೪:- ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳ ಕಾಲ ತಡೆಹಿಡಿಯ ಲಾಗಿದ್ದ ಬುದ್ದಿಮಾಂದ್ಯ ಮಕ್ಕಳ ಶಾಲೆಯನ್ನು ಇಂದು ವಿಶೇಷವಾಗಿ ಸರಸ್ವತಿ ಪೂಜೆ ನೆರವೇರಿಸುವ ಮೂಲಕ ಮಕ್ಕಳನ್ನು ಶಾಲೆಗೆ ಮರಳಿ ಕರೆತರಲಾಯಿತು.

ನಗರದ ಲಯನ್ಸ್ ಭವನ ಆವರಣದ ಕೊಠಡಿಯಲ್ಲಿರುವ ಶಾಲೆಯಲ್ಲಿ ಲಯನ್ಸ್ ಚಾರಿಟಬಲ್ ಟ್ರಸ್ಟ್ ಹಾಗೂ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಬುದ್ದಿಮಾಂದ್ಯ ಮಕ್ಕಳನ್ನು ಸಿಹಿ ತಿಂಡಿ ವಿತರಿಸುವ ಮೂಲಕ ಮರಳಿ ಶಾಲೆಗೆ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹೆಚ್.ಆರ್.ಹರೀಶ್ ಬುದ್ದಿಮಾಂದ್ಯ ಮಕ್ಕಳ ಶಾಲೆಯು ಪ್ರಾರಂಭಗೊAಡು ಸುಮಾರು ೨೫ ವರ್ಷಗಳು ಕಳೆದಿವೆ. ಆದರೆ ಈಚೆಗೆ ಕೋವಿಡ್ ಅಲೆಯಿಂದಾಗಿ ಶಾಲೆಯನ್ನು ಸ್ಥಗಿತಗೊಳಿಸಲಾಗಿತ್ತು. ಮಕ್ಕಳ ಪೋಷಕರು ಶಾಲೆಯನ್ನು ಪುನರಾರಂಭ ಗೊಳಿಸಲು ವಿನಂತಿಸಿಕೊAಡಾಗ ಇಂದು ಶಾಲೆಯಲ್ಲಿ ಸರಸ್ವತಿದೇವಿಯ ಪೂಜೆ ಮಾಡುವ ಮೂಲಕ ಮಕ್ಕಳನ್ನು ಮರಳಿ ಕರೆತರಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಶಾಲೆಗೆ ೯ ಮಕ್ಕಳು ಬರಲಾರಂಭಿಸಿದ್ದು ಟ್ರಸ್ಟ್ ವತಿಯಿಂದ ಎಲ್ಲಾ ಬುದ್ದಿಮಾಂದ್ಯ ಮಕ್ಕಳ ಪೋಷಕರಿಗೆ ಭೇಟಿ ಮಾಡಿ ಮನವರಿಕೆ ಮಾಡಲಾಗಿದೆ ಎಂದ ಅವರು ಹೊಸದಾಗಿ ಸೇರ್ಪಡೆಗೊಳ್ಳುವ ಮಕ್ಕಳಿಗೂ ವ್ಯವಸ್ಥೆ ಕಲ್ಪಿಸಲಾಗಿದ್ದು ಯಾವುದೇ ಮುಜುಗರ ಪಡದೇ ಧೈರ್ಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಎಂ.ಆರ್.ಕೇಶವಮೂರ್ತಿ, ಖಜಾಂಚಿ ಜಗದೀಶ್, ಲಯನ್ಸ್ ಅಧ್ಯಕ್ಷ ಬಿ.ಎನ್.ವೆಂಕಟೇಶ್, ಕಾರ್ಯದರ್ಶಿ ದಯಾಶಂಕರ್, ಖಜಾಂಚಿ ಕುಮಾರ್, ಮಾಜಿ ಅಧ್ಯಕ್ಷ ಸಿ.ಪಿ.ಸುರೇಶ್, ನಮಿತಾ ಹರೀಶ್, ಹಿರಿಯ ಸದಸ್ಯರಾದ ಎಂ.ಆರ್.ನಾಗರಾಜ್, ಎಸ್.ವಿ. ಕನಕರಾಜ್, ಕೆ.ಡಿ.ಪುಟ್ಟಣ್ಣ, ಎಸ್.ಆರ್.ವೈದ್ಯ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply