ಮಕ್ಕಳಿಗೆ ವಿದ್ಯೆ ಶಾಲೆಯಲ್ಲಿ ಸಿಗುತ್ತದೆ. ಒಳ್ಳೊಳ್ಳೆ ಸಂಸ್ಕಾರ ಮನೆಯಿಂದಲೇ ಕಲಿಸಿಕೊಡಿ~ ಡಾ. ಶಶಿಕಿರಣ್ ಶೆಟ್ಟಿ

ಆತ ದೊಡ್ಡ ಸಾಫ್ಟವೆರ್ ಕಂಪೆನಿ ಒಂದರಲ್ಲಿ ಆಫೀಸ್ ಅಲ್ಲಿ ಗುಮಾಸ್ತ ನಾಗಿ ದುಡಿಯುತಿದ್ದ. ತನ್ನ ಮಗನಿಗೆ ಅದೇ ಸಾಫ್ಟವೆರ್ ಕಂಪೆನಿಯಲ್ಲಿ ಇಂಜಿನಿಯರ್ ಮಾಡಿಸಬೇಕು ಎಂಬುದು ಅವನ ಕನಸಾಗಿತ್ತು.. ಆತ ಮಗನಿಗೆ ಯಾವತ್ತು ತಾನೊಬ್ಬ ಗುಮಾಸ್ತ ನ ಮಗ ಎಂಬುದು ಗೊತ್ತಾಗದಂತೆ ನೋಡಿಕೊಂಡ ಬದಲಾಗಿ ಚಿಕ್ಕಂದಿನಲ್ಲೇ ಮಗ ಕೇಳಿದ್ದೆಲ್ಲ ಕೊಡಿಸಿದ, ಹಾಗೇ ಲೆವೆಲ್ ಮೆಂಟೈನ್ ಮಾಡುವುದನ್ನು ಹೇಳಿ ಕೊಟ್ಟ, ನಾಳೆ ಇಂಜಿನಿಯರ್ ಆದರೆ ಇದೆಲ್ಲ ಅವನಿಗೆ ಉಪಯೋಗಕ್ಕೆ ಬರುತ್ತದೆ ಎಂಬುದು ಇವನ ಯೋಚನೆ ಯಾಗಿತ್ತು.
ಆತ ಕೆಲಸ ಮಾಡುವ ಅದೇ ಸಾಫ್ಟ್ವೇರ್ ಕಂಪೆನಿಯ ಎಮ್. ಡಿ ತನ್ನ ಮಗನಿಗೆ ಸಿಂಪಲ್ ಆಗಿರುವುದನ್ನು, ಎಲ್ಲರೊಂದಿಗೆ ಬೆರೆತು ಮುನ್ನಡೆಯುವುದನ್ನು ಹೇಳಿಕೊಟ್ಟಿದ್ದ. ನಾನು ಸ್ಥಾಪಿಸಿರುವ ಈ ಸಾಫ್ಟವೆರ್ ಕಂಪನಿಯನ್ನು ಮುನ್ನಡೆಸಲು ಇಂತಹ ಗುಣಗಳು ಬೇಕಿದ್ದವು ಅವನಿಗೆ. ವರ್ಷ ಗಳು ಕಳೆದವು ಗುಮಾಸ್ತನ ಮಗ ಸಾಫ್ಟವೆರ್ ಇಂಜಿನಿಯರ್ ಅದ. ತಂದೆಯ ಕನಸು ಈಡೇರಿತ್ತು. ಅದೇ ಕಂಪೆನಿಯಲ್ಲಿ ಸಾಫ್ಟವೆರ್ ಇಂಜಿನಿಯರ್ ಆಗಿ ಸೇರಿಕೊಂಡ. ಅವನ ಮ್. ಡಿ ಯಮಗ ಕೂಡಾ ಇಂಜಿನಿಯರ್ ಆಗಿ ತಂದೆಯ ಕಂಪೆನಿಗೆ ಎಂ.ಡಿ ಆಗಿದ್ದ.. ಅಲ್ಲೊಂದು ಟ್ವಿಸ್ಟ್ ಇತ್ತು.
ಇಂಜಿನಿಯರ್ ಆಗಿ ದುಡಿಯುತಿದ್ದ ಮಗನಿಗೆ ತನ್ನ ತಂದೆ ಅಲ್ಲಿ ಗುಮಾಸ್ತ ನಾಗಿ ದುಡಿಯುವುದು ಇಷ್ಟ ವಿರಲಿಲ್ಲ. ಇಲ್ಲಿ ನನ್ನನ್ನು ಗುಮಾಸ್ತನ ಮಗ ಎಂದು ತನ್ನ ಸಹೋದ್ಯೋಗಿ ಗಳು ಕರೆಯುವುದು ಅವನಿಗೆ ಅವಮಾನ ತರಿಸುತಿತ್ತು. ಆಫೀಸ್ ಅಲ್ಲಿ ತಂದೆ ಯೊಂದಿಗೆ ಲೆವೆಲ್ ಮೆಂಟೈನ್ ಮಾಡಲು ಆರಂಭಿಸಿದ. ದಿನ ಕಳೆದಂತೆ ಅವನ ಲೆವೆಲ್ ಮತ್ತಷ್ಟು ಎತ್ತರಕ್ಕೇರಿದಂತೆಲ್ಲ ತಂದೆಯನ್ನು ಅವಾಯ್ಡ್ ಮಾಡ ತೊಡಗಿದ, ತಂದೆಯ ಮನೆ ಬಿಟ್ಟ, ಆ ಮನೆ ಬಹಳ ಚಿಕ್ಕದಿದೆ ಅನಿಸಿತ್ತು ಅವನಿಗೆ ದೊಡ್ಡದು ಮನೆ ಕಾರು ಅವನದಾಯಿತು.
ತಂದೆ ಅದೇ ಸೈಕಲ್ ಅಲ್ಲಿ ಅವರ ಚಿಕ್ಕ ಮನೆಗೇ ಹೋಗುತಿದ್ದರು. ಅತ್ತ ಮ್. ಡಿ ಯ ಮಗ ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ಳುತಿದ್ದ ಅವನಪ್ಪ ಹೇಳಿದ್ದ ಪಾಠ ಇಷ್ಟು ದೊಡ್ಡ ಕಂಪೆನಿ ಯನ್ನು ನೋಡಿಕೊಳ್ಳಲು ಸಹಕಾರಿಯಾಗಿತ್ತು ಅವನಿಗೆ. ಈತ ಮಾತ್ರ ಲೆವೆಲ್ ಮೆಂಟೈನ್ ಮಾಡುತ್ತ ಅದೇ ಕಂಪೆನಿಯಲ್ಲಿ ಕೊಡುವ ಸಂಬಳಕ್ಕೆ ದುಡಿಯುವ ಕೆಲಸಗಾರನಾಗಿಯೇ ಉಳಿದು ಬಿಟ್ಟ. ಇಂದು 75 ವರ್ಷದ ತಂದೆ ಏಕಾಂಗಿ ಯಾಗಿದ್ದಾರೆ, ವೃದ್ದಾಶ್ರಮದಲ್ಲಿ ತಾವು ದುಡಿದು ಸಂಗ್ರ ಹಿಸಿಟ್ಟಿದ್ದ ಒಂದಷ್ಟು ಹಣದಲ್ಲಿ ಜೀವಿಸುತ್ತಿದ್ದಾರೆ. ಮಗ ಲೆವೆಲ್ ಮೆಂಟೈನ್ ಮಾಡುತ್ತಾ ಮಾಡುತ್ತಾ ತಂದೆಯಿಂದ ಬಹಳಷ್ಟು ದೂರ ಹೋಗಿಬಿಟ್ಟಿದ್ದ.
ಅದೆಷ್ಟು ಸತ್ಯ ನೋಡಿ ಒಬ್ಬ ಮಕ್ಕಳಿಗೆ ಲೆವೆಲ್ ಮೆಂಟೈನ್ ಮಾಡುವುದ ಹೇಳಿಕೊಟ್ಟ, ತನ್ನ ಕಷ್ಟಗಳನ್ನು ಮಗನಿಂದ ಮುಚ್ಚಿಟ್ಟ ಇನ್ನೊಬ್ಬ ಪ್ರೀತಿ, ವಿಶ್ವಾಸ ದಿಂದ ಎಲ್ಲರೊಂದಿಗೆ ಒಂದಾಗಿ ಬದುಕುವ ಕಲೆಯನ್ನು ಹೇಳಿ ಕೊಟ್ಟ. ಲೆವೆಲ್  ಮಂಟೈನ್ ಮಾಡುವುದ ಕಲಿತವ ತನ್ನದಷ್ಟೇ ನೋಡಿ ಕೊಂಡ. ಬದುಕುವುದ, ಎಲ್ಲರನ್ನು ಪ್ರೀತಿಸುವುದನ್ನು ಕಲಿತವ. ಎಲ್ಲರೊಂದಿಗೆ ಬೆರೆತು ಎಲ್ಲರ ಮೆಚ್ಚುಗೆಗೆ ಪಾತ್ರನಾದ..
ನಿಮ್ಮ ಕಷ್ಟಗಳು ಮಕ್ಕಳಿಗೆ ಗೊತ್ತಿರಲಿ ಅಪ್ಪ ನಮಗಾಗಿ ಅದೆಷ್ಟು ಕಷ್ಟ ಪಡುತ್ತಿದ್ದಾರೆ ಎಂಬ ಅರಿವಿರಲಿ ನಿಮ್ಮ ಮಕ್ಕಳಿಗೆ ಹಾಗೇ ನೆನಪಿಡಿ. ಮಕ್ಕಳಿಗೆ ವಿದ್ಯೆ ಶಾಲೆಯಲ್ಲಿ ಸಿಗುತ್ತದೆ. ಒಳ್ಳೊಳ್ಳೆ ಸಂಸ್ಕಾರ ಮನೆಯಿಂದಲೇ ಕಲಿಸಿಕೊಡಿ. ~ ಡಾ. ಶಶಿಕಿರಣ್ ಶೆಟ್ಟಿ
 
 
 
 
 
 
 
 
 
 
 

Leave a Reply