ಕಡಲಕೊರೆತ ಹಾಗೂ ನೆರೆಪೀಡಿತ ಪ್ರದೇಶಗಳಿಗೆ ತಹಶಿಲ್ದಾರ್, ತಾ.ಪಂ ಇಓ ಭೇಟಿ ವೀಕ್ಷಣೆ

ಕೋಟ: ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಟ ಹೋಬಳಿ ಭಾಗದ ಸಾಕಷ್ಟು ಕೃಷಿ ಭೂಮಿ,ಮನೆಗಳು ನೆರೆಪೀಡಿತ ಪ್ರದೇಶಗಳಾಗಿ ರೂಪುಗೊಂಡಿವೆ.

ಕೋಡಿ ಕನ್ಯಾಣ,ಹೊಸಬೇಂಗ್ರೆ ಕೋಡಿತಲೆ ಸುಮಾರು 9ಕಿಮೀ ಹಂಚಿಕೊoಡಿರುವ ಸುಮಾರು ಕಡಲಕಿನಾರೆ ಪ್ರದೇಶದಲ್ಲಿ ಅಲ್ಲಲ್ಲಿ ಕಡಲಕೊರೆತ ಉಂಟಾಗಿದ್ದು ಸಾಕಷ್ಟು ಮನೆಗಳು ಹಾನಿಗೊಳ್ಳುವ ಭಯದಲ್ಲಿವೆ ಈ ಪ್ರದೇಶಗಳಿಗೆ ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರ ಮೂರ್ತಿ ಹಾಗೂ ತಾ.ಪಂ ಇ.ಓ ಎಚ್.ವಿ ಇಬ್ರಾಹಿಂಪುರ್ ಭೇಟಿ ನೀಡಿ ಸ್ಥಳೀಯ ಕೋಡಿ ಪಂಚಾಯತ್ ಅಧ್ಯಕ್ಷರ ಸಮ್ಮುಖದಲ್ಲಿ ಹಾನಿಪ್ರದೇಶಕ್ಕೆ ತೆರಳಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಶಿಲ್ದಾರ್ ಪ್ರತಿವರ್ಷ ಮಳೆಗಾಲದಲ್ಲಿ ಈ ಭಾಗಗಳಲ್ಲಿ ಕಡಲಕೊರೆತ ಸಂಭವಿಸುತ್ತದೆ ಆದರೆ ಈ ಸಮಸ್ಯೆ ಬಗೆಹರಿಯಬೇಕಾದರೆ ಇಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸುವ ಅಗತ್ಯತೆಯನ್ನು ಮನಗಾಣಿಸಿ ಜಿಲ್ಲಾಡಳಿತಕ್ಕೆ ಪೂರ್ಣಪ್ರಮಾಣದ ವರದಿ ನೀಡಲಾಗುವುದು ಎಂದರು.
ಇದೇ ವೇಳೆ ನೆರೆ ಪೀಡಿತ ಕೋಟ ಗ್ರಾಮಪಂಚಾಯತ್ ನ ಮಣೂರು ಪಡುಕರೆ,ಮೂಡುಗಿಳಿಯಾರು,ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಚಿತ್ರಪಾಡಿ,ಬೆಟ್ಲಕ್ಕಿ,ಪಾಂಡೇಶ್ವರ ಪಂಚಾಯತ್ ವ್ಯಾಪ್ತಿಗೆ ಭೇಟಿ ನೀಡಿ ಪರಿಶೀಲಿಸಿದರು.ಶುಕ್ರವಾರವು ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮತ್ತಷ್ಟು ಭೀತಿ ಎದುರಾಗಿದ್ದು ಮಳೆಯ ನಡುವೆಯಲ್ಲೂ ತಹಶಿಲ್ದಾರ್ ವಿವಿಧ ಭಾಗಗಳಿಗೆ ತೆರಳಿ ನೆರೆಪೀಡಿತರೊಂದಿಗೆ ಸಮಸ್ಯೆ ಆಲಿಸಿದರು.
ಈ ಸಂದರ್ಭದಲ್ಲಿ ಕೋಟ ಹೋಬಳಿ ಕಂದಾಯ ಅಧಿಕಾರಿ ರಾಜು ,ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಭಾಕರ್ ಮೆಂಡನ್,ಪAಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್,ಸದಸ್ಯರಾದ ಕೃಷ್ಣ ಪೂಜಾರಿ,ಅಂತೋನಿ ನಾಯಕ್,ಸತೀಶ್ ಕುಂದರ್,ಗೀತಾ ಕಾರ್ವಿ,ಕೋಡಿ ಗ್ರಾಮಸಹಾಯಕಿ ಸರೋಜ ಮತ್ತಿತರರು ಉಪಸ್ಥಿತರಿದ್ದರು.

Leave a Reply