ಅತಂತ್ರ ಸ್ಥಿತಿಯಲ್ಲಿ ಸಭಾಭವನಗಳು- ಉಡುಪಿ  ಜಿಲ್ಲಾ ಸಭಾಭವನಗಳ ಒಕ್ಕೂಟದ ಸಭೆ

ಕೋವಿಡ್ ೧೯ ನಿಂ ದ ಸಭಾಗೃಹಗಳಲ್ಲಿ ಸಮಾರಂಭಗಳು ನಡೆಯದೆ ಸಭಾಭವನಗಳು ಮುಚ್ಚುವ ಪರಿಸ್ಥಿತಿ ಬಂದಿದೆ,ಸರಕಾರವು ಈ ವಿಷಯದ ಬಗ್ಗೆ ಗಂಭೀರವಾಗಿರವಾಗಿ ಆಲೋಚಿಸ ಬೇಕಾಗಿದೆ. ಸಭಾಗೃಹಗಳಲ್ಲಿ ಸಮಾರಂಭಕ್ಕೆ ಅವಕಾಶ  ನೀಡದೇ ಮನೆಯಲ್ಲಿ ಸಮಾರಂಭಗಳು ನಡೆ ಯುತಿದ್ದು,  ಮನೆಯ ಪರಿಸರದ ಇಕ್ಕಟ್ಟು ಜಾಗಗಳಲ್ಲಿ ಕೋವಿಡ್  ನಿಯಮ ಪಾಲನೆ ಸರಿಯಾಗಿ ನಡೆಯದೇ ಸಮಾರಂಭದಲ್ಲಿ ನೂರಕ್ಕಿಂತ ಹೆಚ್ಚು ಜನ ಸೇರಿ ಕೊರೋನಾ ಖಾಯಿಲೆಯು ಜಾಸ್ತಿಯಾಗುವ ಸಂಭವ ಹೆಚ್ಚು. 
ಸಭಾಗೃಹಗಳಲ್ಲಿ ವಿಶಾಲವಾದ ಜಾಗವಿದ್ದು ಸಾಮಾಜಿಕ ಅಂತರ ಪಾಲನೆ ಇರುತ್ತದೆ. ಸರಕಾರವು ಸಭಾಗೃಹಗಳ ಸಾಮರ್ಥ್ಯಕ್ಕನುಸಾರವಾಗಿ ಸಮಾರಂಭ ನಡೆಸಲು ಅವಕಾಶ  ನೀಡಬೇಕು. ಇದರಿಂದ ಸಭಾಗೃಹಗಳ ಮಾಲ್ಹಕರಿಗೆ ಮಾತ್ರವಲ್ಲದೇ ಇದರ ಹಿಂದಿರುವ ನೂರಾರು ಜನರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶವಿದೆ ಎಂದು ಶನಿವಾರ ಉಡುಪಿ ಅಂಬಾಗಿಲಿನ ಅಂಬ್ರೆಟ್ ಗಾರ್ಡನ್ ನಲ್ಲಿ ನಡೆದ ಉಡುಪಿ  ಜಿಲ್ಲಾ ಸಭಾಭವನಗಳ ಒಕ್ಕೂಟದ ಸಭೆಯಲ್ಲಿ ಒಕ್ಕೊರೊಲಿ ನಿಂದ ಸರಕಾರವನ್ನು ಆಗ್ರಹಿಸಿದ್ದಾರೆ. 
 
ಉಡುಪಿ ಜಿಲ್ಲೆಯ ಎಲ್ಲಾ ಸಭಾಗೃಹಗಳ ಮಾಲೀಕರ ಮತ್ತು ಅಧಿಕೃತ ಪ್ರತಿ ನಿಧಿಗಳ ಸಭೆ ಒಕ್ಕೂಟದ ಅಧ್ಯಕ್ಷ ಶೇಡಿ ಕೊಡ್ಲು ವಿಠಲ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಭಾಗೃಹಗಳು ಅಸಿತ್ವದಲ್ಲಿ ಉಳಿಯ ಬೇಕಾದರೆ ನಮ್ಮ ಸಂಘಟನೆ ಗಟ್ಟಿಯಾಗ ಬೇಕು.  ಅದಕ್ಕೆ ಸಭಾಗೃಹಗಳ ಮಾಲ್ಹಕರ ಜೊತೆಗೆ ಸಾರ್ವಜನಿಕರ ಸಹಕಾರ ಪ್ರೋತ್ಸಾಹ ಅಗತ್ಯ ಎಂದರು.
ಯುವ ಮೆರೀಡಿಯನ್  ಸಭಾಗೃಹ ದ ಮಾಲ್ಹಕ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಸರಕಾರವು ಸಿನಿಮಾ ಮಂದಿರಗಳಲ್ಲಿ, ವಿಮಾನಗಳಲ್ಲಿ ಸಂಪೂರ್ಣ ಅವಕಾಶ  ನೀಡಿದ್ದು  ಸಭಾಗೃಹಳಿಗೆ ಮಾತ್ರ 50,000 ಜನರಿಗೆ ಅವಕಾಶ  ನೀಡಿದೆ ಇದನ್ನು ಪನಃ ಪರಿಶೀಲಿಸ ಬೇಕಾಗಿದೆ.
ಸಭಾಗೃಹಗಳಲ್ಲಿ ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 2ಸಾವಿರ ಸಮಾರಂಭಗಳು ನಡೆದು ೩ಸಾವಿರ ಕೋಟಿಯಷ್ಟು ವ್ಯವಹಾರ ನಡೆಯುತ್ತದೆ.  ಇದರಿಂದ ನೂರಾರು ಜನರ ಬದುಕು ಸಾಗುತ್ತದೆ ಎಂದರು. ಸುರೇಂದ್ರ ಶೆಟ್ಟಿ, ಮಂಜುನಾಥ ಹೆಬ್ಬಾರ್, ರಾಘವೇಂದ್ರ ಅಡಿಗ, ಜಗದೀಶ್  ಶೆಟ್ಟಿ, ಮನೋಜ್  ಕುಮಾರ್  ಚಂದ್ರಶೇಖರ ಶೆಟ್ಟಿ, ರಾಜರಾಮ ಶೆಟ್ಟಿ ಅಭಿಪ್ರಾಯಗಳನ್ನು ಪ್ರಾಯ ಗಳನ್ನು ಮಂಡಿಸಿದರು.
ಸಭೆಯಲ್ಲಿ ಒಕ್ಕೂಟ ದ ಮಾರ್ಗದರ್ಶಕರಾದ ಪುರುಷೋತ್ತಮ ಶೆಟ್ಟಿ, ಉಪಾಧ್ಯಕ್ಷ ಜಯರಾಜ ಹೆಗ್ಡೆ, ಕಾರ್ಯದರ್ಶಿ ಪ್ರದೀಪ್ ಚಂದ್ರ ಶೆಟ್ಟಿ, ಖಜಾಂಚಿ ರಂಜನ್. ಕಲ್ಕೂರ ಉಪಸ್ಥಿತರಿದ್ದರು.  ಸಭೆಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಭುವನೇಂದ್ರ ಕಿದಿಯೂರು ಮತ್ತು ಮಾರ್ಗದರ್ಶಕರಾದ ನಾಡೋಜ ಜಿ.ಶಂಕರ್ ಅವರ ಪ್ರೋತ್ಸಾಹವನ್ನು ಸ್ಮರಿಸಲಾಯಿತು. 
ಮದರ್ ಪ್ಯಾಲೇಸ್ ಭರತ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಚಂದ್ರ ಶೆಟ್ಟಿ ವರದಿ ಮಂಡಿಸಿದರು. ಖಜಾಂಚಿ ರಂಜನ್ ಕಲ್ಕೂರ ವಂದಿಸಿದರು.
 
 
 
 
 
 
 
 
 
 
 
 

Leave a Reply