ಆಸಕ್ತರಿಗೆ ಅಂಚೆ ಇಲಾಖೆಯಲ್ಲಿ ಸುಕನ್ಯ ಸಮೃದ್ದಿ ಖಾತೆ ತೆರೆಯಲು ಅವಕಾಶ

ಹತ್ತು ವರುಷದ ಒಳಗಿನ ಪ್ರಾಯದ ಹೆಣ್ಣು ಮಕ್ಕಳಿಗೆ ಅಂಚೆ ಇಲಾಖೆಯಲ್ಲಿ ಸುಕನ್ಯ ಸಮೃದ್ಧಿ ಖಾತೆ ತೆರೆಯಲು ಅವಕಾಶವಿದೆ. ಯಾರಾದರೂ ಬಡ ತಂದೆ ತಾಯಿಗಳಿದ್ದಲ್ಲಿ ಆರಂಭಿಕ ಶಿಲ್ಕು ರೂ.250/- ನ್ನು ವಿವಿಧ ದಾನಿಗಳಿಂದ ಪ್ರಾಯೋಜಿಸಲಾಗುವುದು.

ಆಸಕ್ತರು (ಇಷ್ಟರವರೆಗೆ ಈ ಖಾತೆ ತೆರೆಯದವರು) ಪೋಸ್ಟ್ ಬಾಕ್ಸ್ ನಂ.60, ಉಡುಪಿ ಪ್ರಧಾನ ಅಂಚೆ ಕಚೇರಿ, ಉಡುಪಿ 576101 ಇದಕ್ಕೆ ತಮ್ಮ ವಿಳಾಸ, ಮೊಬೈಲ್ ನಂಬರ್ ನ್ನು ಸಾಧಾರಣ ಅಂಚೆ ಮೂಲಕ 22/01/2021 ರ ಒಳಗೆ ಕಳುಹಿಸಿತಕ್ಕದ್ದು ಎಂದು ಉಡುಪಿ‌‌ ರೋಯಲ್ ರೋಟರಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply