ನವದೆಹಲಿ: ಕಳೆದ ವರ್ಷ ಡ್ರಗ್ಸ್ ಮಾರಾಟ ಜಾಲ ದಂಧೆ ಪ್ರಕರಣದಲ್ಲಿ ಜೈಲು ಸೇರಿದ್ದ ಕನ್ನಡ ಚಿತ್ರರಂಗದ ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಜಾಮೀನು ಸಿಕ್ಕಿದೆ.
ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಗುರುವಾರ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ಸೆಷನ್ಸ್ ಮತ್ತು ಹೈಕೋರ್ಟ್ ಜಾಮೀನು ಅರ್ಜಿ ನಿರಾಕರಿಸಿದ್ದರಿಂದ ರಾಗಿಣಿ ಪರ ವಕೀಲರು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದಿಗೆ ಮುಂದೂಡಲಾಗಿತ್ತು.
ಹಲವು ನಟನಟಿಯರಿಗೆ ಮತ್ತು ಪ್ರಮುಖ ವ್ಯಕ್ತಿಗಳಿಗೆ ಡ್ರಗ್ಸ್ ಒದಗಿಸುತ್ತಿದ್ದ ರೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಕಳೆದ ಸೆಪ್ಟೆಂಬರ್ 4ರಂದು ನಟಿ ರಾಗಿಣಿ ಅವರನ್ನು ಸಿಸಿಬಿ ಪೊಲೀಸರು ಬೆಂಗಳೂರಿನ ಯಲಹಂಕದಲ್ಲಿರುವ ಅವರ ಅಪಾರ್ಟ್ ಮೆಂಟ್ ನಲ್ಲಿ ಬಂಧಿಸಿದ್ದರು. ಇಷ್ಟು ತಿಂಗಳು ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯಾಗಿದ್ದರು, ಇದೀಗ ಕೊನೊಗೂ ಜಮೀನು ದೊರೆತಿದೆ.