“ಕೋಸ್ಟ್ ಟು ಕೋಸ್ಟ್” ಬೀಚ್ ಕ್ಲೀನಿಂಗ್ ಆಂದೋಲನ

ಶ್ರೀ ಕೃಷ್ಣ ರೋಟರಾಕ್ಟ್ ಕ್ಲಬ್ ಉಡುಪಿ ರೋಟರಾಕ್ಟ್ ಡಿಸ್ಟ್ರಿಕ್ಟ್ 3182 ರ ಸಹಯೋಗದೊಂದಿಗೆ ಅಕ್ಟೋಬರ್ 2 ರಂದು “ಕೋಸ್ಟ್ ಟು ಕೋಸ್ಟ್” ಎಂಬ ಬೀಚ್ ಕ್ಲೀನಿಂಗ್ ಆಂದೋಲನ ನಡೆಸಿತು. ಬದನಿದಿಯೂರು ಗ್ರಾಮದ ಆಸರೇ ಬೀಚ್ ಪಾರ್ಕ್ ನಲ್ಲಿ ನಡೆದ ಈ ಸ್ವಚ್ಛತಾ ಅಭಿಯಾನದಲ್ಲಿ 45 ಸ್ವಯಂಸೇವಕರು ಭಾಗವಹಿಸಿ 28 ಚೀಲ ತ್ಯಾಜ್ಯವನ್ನು ಸಂಗ್ರಹಿಸಿದರು. ಶ್ರೀ ಕೃಷ್ಣ ರೋಟರಾಕ್ಟ್ ಕ್ಲಬ್ ಉಡುಪಿಯ ಅಧ್ಯಕ್ಷ ಶ್ರೀಹರಿ ಕೆ ಎಸ್ ಮತ್ತು ಕಾರ್ಯದರ್ಶಿ ಸಂಭ್ರಮ್ ಶೆಟ್ಟಿ ಹಾಗೂ ಸದಸ್ಯರಾದ ತನ್ವಿ ವಿಶಿಷ್ಟಾ, ಗೌರವ್, ನಿಕಿತಾ ಹೆಬ್ಬಾರ್, ಅಂಶ್ ಕೋಟ್ಯಾನ್ ಮತ್ತು ವಿನಯ್ ಶೆಟ್ಟಿ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಉಪಸ್ಥಿತರಿದ್ದರು. ಇವರೊಂದಿಗೆ ಎಸ್ ಡಿ ಎಂ ಆಯುರ್ವೇದ ಕಾಲೇಜು ರೋಟರಾಕ್ಟ್ ಕ್ಲಬ್ , Childline Udupi ಹಾಗೂ ಗ್ರಾಮ ಪಂಚಾಯತ್ ಬದನಿದಿಯೂರಿನ ಪಿಡಿಒ ಹಾಗೂ ಅಧ್ಯಕ್ಷರ ಸಹಿತ ಕೆಲವು ಸದಸ್ಯರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಚಂದಗಾನಿಸಿಕೊಟ್ಟರು.

 
 
 
 
 
 
 
 
 
 
 

Leave a Reply