ಶಿವಸೇನೆ ಮುಖಂಡ ಸಂಜಯ್ ರಾವತ್ ನಿವಾಸದದಲ್ಲಿ ಲಕ್ಷ ಲಕ್ಷ ಹಣ

ಶಿವಸೇನೆಯ ಮುಖಂಡ ಸಂಜಯ್ ರಾವತ್ ಅವರ ನಿವಾಸದ ಮೇಲೆ ಇಂದು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಾದ ಬಳಿಕ ಅವರನ್ನು ವಶಕ್ಕೂ ಪಡೆದಿದ್ದರು. ಇದೀಗ ಅವರ ನಿವಾಸದಲ್ಲಿ 11.50 ಲಕ್ಷ ರೂ ಲೆಕ್ಕಕ್ಕೆ ಸಿಗದಂತ ಹಣ ಪತ್ತೆಯಾಗಿದೆ.

ಇಂದು ಮುಂಬೈನಲ್ಲಿರುವ ಶಿವಸೇನೆಯ ಮುಖಂಡ ಸಂಜಯ್ ರಾವತ್ ನಿವಾಸದ ಮೇಲೆ ಇಡಿ ಅಧಿಕಾರಿಗಗಳಿಗೆ 11.50 ಲಕ್ಷ ಹಣ ಸಿಕ್ಕಿರೋದಾಗಿ ತಿಳಿದು ಬಂದಿದೆ. ಇದಕ್ಕೆ ಯಾವುದೇ ದಾಖಲೆ ಕೂಡ ನೀಡಿಲ್ಲ ಎಂದು ಹೇಳಲಾಗುತ್ತಿದೆ.

ಇತ್ತ ಸಂಜಯ್ ರಾವತ್ ಪರ ವಕೀಲ ವಿಕ್ರಾಂತ್ ಸಬ್ ಮಾಹಿತಿ ನೀಡಿ, ನಾವು ಹೊಸ ಸಮನ್ಸ್ ಸ್ವೀಕರಿಸಿದ್ದೇವೆ, ಸಂಜಯ್ ರಾವತ್ ಅವರನ್ನು ವಿಚಾರಣೆಗೆ ಕರೆತರಲಾಗಿದೆ. ಅವರು (ಇಡಿ) ಈಗಾಗಲೇ ಅವರು ಮುಖ್ಯವೆಂದು ಭಾವಿಸಿದ ದಾಖಲೆಗಳನ್ನು ತೆಗೆದುಕೊಂಡಿದ್ದಾರೆ.

ಕೆಲವು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಪಾತ್ರಾ ಚಾಲ್ಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಅವರು ತೆಗೆದುಕೊಂಡಿಲ್ಲ ಎಂದು ಹೇಳಿದ್ದರು.

 
 
 
 
 
 
 
 
 
 
 

Leave a Reply