ಓದುವ ಹವ್ಯಾಸ ಬೆಳೆಸಿಕೊಂಡಾಗ ಜ್ಞಾನಶಕ್ತಿ ವೃದ್ಧಿಸುತ್ತದೆ- ರಾಮದೇವ ಹಂದೆ

ಕೋಟ:ಪ್ರತಿಯೊಬ್ಬರಲ್ಲೂ ಪ್ರಾಥಮಿಕ ಹಂತದಲ್ಲೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಆಗಮಾತ್ರ ಜ್ಞಾನಶಕ್ತಿ ವೃದ್ಧಿಸುತ್ತದೆ ಎಂದು ನಿವೃತ್ತ ಶಿಕ್ಷಕ ರಾಮದೇವ ಹಂದೆ ಹೇಳಿದ್ದಾರೆ
ಗುರುವಾರ ಐರೋಡಿ ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಇಲ್ಲಿಗೆ ದಿ.ಜಲಜಮ್ಮ ಸುಬ್ರಾಯ ಉಪಾಧ್ಯ ಸ್ಮಾರಕ ಅವರ ಮಕ್ಕಳು ಕೊಡಮಾಡಿದ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿ ಗ್ರಂಥಾಲಯಗಳು ಜ್ಞಾನ ಹೆಚ್ಚಿಸುವ ದೇವಾಲಯ ಇದ್ದಂತೆ ಆ ಮೂಲಕ ತಮ್ಮ ಶೈಕ್ಷಣಿಕ ,ಸಾಮಾಜಿಕ ಕ್ಷೇತ್ರದಲ್ಲಿ ಉನ್ನತಿ ಪಡೆಯಲು ಸಾಧ್ಯವಿದೆ.ವಿದ್ಯಾರ್ಥಿಗಳು ಪ್ರತಿ ದಿನ, ದಿನ ಪತ್ರಿಕೆಗಳಲ್ಲಿ ಬರುವ ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಬೇಕು.
ಶಾಲೆಯ ಓದು ಮುಗಿಸಿದ ನಂತರ ತನ್ನ ಶಾಲೆಯ ಬಗ್ಗೆ ಚಿಂತಿಸುವ ಹಾಗೂ ಉದಾರತ್ವ ಬೆಳೆಸಿಕೊಳ್ಳಬೇಕು ಆಗ ಮಾತ್ರ ಸಾರ್ಥಕ್ಯ ಕಾಣಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ದಾನಿಗಳ ಪರವಾಗಿ ರಾಮದೇವ ಹಂದೆಯವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಡೆನಿಸ್ ಡಿಸೋಜ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಅರ್ಚನಾ,ಸಿ.ಆರ್.ಪಿ ಅನುಪಮ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸೇಸು ಸ್ವಾಗತಿಸಿದರು. ಕಾರ್ಯಕ್ರಮವನ್ನು ವೀಣಾ ನಿರೂಪಿಸಿದರು.ಶಿಕ್ಷಕಿ ಉಷಾರಾಣಿ ವಂದಿಸಿದರು.ಶಿಕ್ಷಕಿಯರಾದ ಪ್ರೆಸಿಲ್ಲಾ,ಯಶೋಧ,ರಮ್ಯ ಸಹಕರಿಸಿದರು.

ಐರೋಡಿ ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಇಲ್ಲಿಗೆ ದಿ.ಜಲಜಮ್ಮ ಸುಬ್ರಾಯ ಉಪಾಧ್ಯ ಸ್ಮಾರಕ ಅವರ ಮಕ್ಕಳು ಕೊಡಮಾಡಿದ ಗ್ರಂಥಾಲಯವನು ್ನನಿವೃತ್ತ ಶಿಕ್ಷಕ ರಾಮದೇವ ಹಂದೆ ಉದ್ಘಾಟಿಸಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಡೆನಿಸ್ ಡಿಸೋಜ, ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಅರ್ಚನಾ,ಸಿ.ಆರ್.ಪಿ ಅನುಪಮ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply