ಸಂಗೀತದ ರಾಗಗಳೇ ನಮ್ಮೊಂದಿಗಿರುವ ಅತೀ ದೊಡ್ಡ ಧನ: ವಿದ್ವಾನ್ ಡಾ. ಆರ್. ಸೂರ್ಯ ಪ್ರಕಾಶ್.

ದೇವತೆಗಳಿಂದ ಸೃಷ್ಟಿಯಾದ ರಾಗಗಳು ಅನಾದಿಯಿಂದ ನಮ್ಮಲ್ಲಿರುವ ಅತೀ ದೊಡ್ಡ ಧನವೆಂದು ಅವರು ಅಭಿಪ್ರಾಯ ಪಟ್ಟರು. ಸಂಗೀತದ ಸೂಕ್ಷ್ಮಗಳನ್ನು ಗುರು ಮುಖೇನ ಶಿಷ್ಯರು ಪಡೆಯಲು ಅವರು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು.

 

ರಾಗಧನ ಉಡುಪಿ (ರಿ) ಇದರ ಆಶ್ರಯದಲ್ಲಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ಸಂಗೀತ ಶಿಬಿರವನ್ನು ಉಡುಪಿಯ ಎಂ.ಜಿ.ಎಂ.ಕಾಲೇಜಿನಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಂತರ ಮನೋಧರ್ಮ ಮತ್ತು ಸಂಗೀತದ ಹೊಸಹೊಳಹುಗಳ ಬಗ್ಗೆ ಶಿಬಿರ ನಡೆಸಿ ಕೊಟ್ಟರು. ಅಪರಾಹ್ನ ವಿದುಷಿ ಶ್ರೀಮತಿ ಪವನ ಬಾಲಚಂದ್ರ ಅವರ ವೀಣಾ ವಾದನ ಕಛೇರಿ ನಡೆಯಿತು.ಸಂಜೆ ಡಾ. ಆರ್.ಸೂರ್ಯ ಪ್ರಕಾಶ್ ಅವರ ಕಛೇರಿಯೂ ನಡೆಯಿತು. ಅವರಿಗೆ ಶ್ರೀ ಗಣರಾಜ ಕಾರ್ಲೆ ಮುಳ್ಳೇರಿಯ ವಯಲಿನ್ ನಲ್ಲಿ, ಹಾಗೂ ಶ್ರೀ ಸುನಾದಕೃಷ್ಣ ಮೃದಂಗದಲ್ಲಿ ಸಹಕರಿಸಿದರು.

 
 
 
 
 
 
 
 
 
 
 

Leave a Reply