ಪುಣ್ಯಕೋಟಿಯ ಸೇವೆ ಮಾಡುವುದರಿಂದ ಕೋಟಿಪುಣ್ಯ ಲಭ್ಯ- ಪದ್ಮಶ್ರೀ ಡಾ.ವಿ.ಆರ್.ಗೌರಿಶಂಕರ್ 

ನಂಚಾರು ಇಲ್ಲಿ ಗೋಆಶ್ರಯ ತಾಣಕ್ಕೆ ಶಿಲನ್ಯಾಸ ಕಾರ್ಯಕ್ರಮ. ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನಂಚಾರು ಇದರ ಗೋ ಆಶ್ರಯ ತಾಣದ ಗೋವಿಗಾಗಿ ನಾವು ದೇಣಿಗೆ ಚೀಟಿ ಬಿಡುಗಡೆ. 

ಕೊಕ್ಕರ್ಣೆ: ಸನಾತನ ಧರ್ಮದ ಅನುಯಾಯಿಗಳಿಗೆ ದೇವರು ಮತ್ತು ಧರ್ಮ ಅಡಿಪಾಯವಾಗಿರುತ್ತದೆ. ದಿನನಿತ್ಯದ ಜೀವನದಲ್ಲಿ ನಾವು ಪುನರ್ಜೀವನದಲ್ಲಿ ನಂಬಿಕೆ ಉಳ್ಳವರು. ಮನುಷ್ಯ ಜನ್ಮ ಪಡೆದು ಭೂಮಿಗೆ ಬಂದ ನಂತರ ಸತ್ಕಾರ್ಯಗಳನ್ನು ಮಾಡಬೇಕು. ಇದರಿಂದ ಪುಣ್ಯಪ್ರಾಪ್ತಿಯಾಗುತ್ತದೆ.

ದೇವರು ನಮ್ಮನ್ನು ಹರಸುತ್ತಾನೆ. ಮನೆಯಲ್ಲಿ ಒಳ್ಳೆಯ ಕೆಲಸಗಳಿಗೆ ಗೋವಿನ ಮೂಲಕ ಕಾರ್ಯಕ್ರಮಗಳನ್ನು ಮಾಡುವುದರಿಂದ ಪುಣ್ಯ ಲಭಿಸುತ್ತದೆ. ಇದನ್ನು ಪ್ರತಿಯೊಬ್ಬರೂ ಮಾಡಿ ಪುಣ್ಯ ಸಂಪಾದನೆ ಮಾಡಬೇಕು. ಪುಣ್ಯಕೋಟಿಯ ಸೇವೆ ಮಾಡುವುದರಿಂದ ಕೋಟಿಪುಣ್ಯ ಲಭಿಸುತ್ತದೆ. ಈ ಮೂಲಕ ಗೋಸೇವೆ ಮತ್ತು ಗೋಪೂಜೆಗೆ ವಿಶೇಷವಾದ ಮಹತ್ವವಿದೆ.ಗೋವುಗಳು ಮನುಷ್ಯನ ಜೀವನದಲ್ಲಿ ಎಷ್ಟು ಕಾಲ ಜೊತೆ ಇರುತ್ತಾವೋ ಅಷ್ಟೆ ಆ ಕುಟುಂಬಗಳನ್ನು ಸಂರಕ್ಷಣೆಯಾಗುತ್ತದೆ
. ಇ೦ದಿನ ಮಕ್ಕಳಿಗೆ ಪುಣ್ಯಕೋಟಿಯ ಮಹತ್ವವನ್ನು ತಿಳಿಹೇಳಬೇಕಾದ ಅನಿವಾರ್ಯತೆ ಇದೆ ಹಾಗೂ ಗೋವನ್ನು ಸಾಕುವುದು ನಮ್ಮ ಕರ್ತವ್ಯ ಎಂದು ಸೇವಾಧುರೀಣ ಪದ್ಮಶ್ರೀ ಪುರಸ್ಕೃತ  ಶಾರದಾ ಪೀಠ ಶೃಂಗೇರಿ ಇದರ ಆಡಳಿತಾಧಿಕಾರಿಡಾ.ವಿ.ಆರ್.ಗೌರಿಶಂಕರ್ ಶಿಲನ್ಯಾಸಗೈದು ಮಾತನಾಡಿದರು.
ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನಂಚಾರು ಇದರ ಗೋ ಆಶ್ರಯ ತಾಣದ ಶಿಲನ್ಯಾಸ ಕಾರ್ಯಕ್ರಮವು ಬುಧವಾರ ಜರುಗಿತು.ಈ ಸಂಧರ್ಭದಲ್ಲಿ ಶ್ರೀಮಹಿಷಮರ್ಧಿನಿ ದೇವಸ್ಥಾನ ನೀಲಾವರ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀಲಾವರ ರಘುರಾಮ ಮಧ್ಯಸ್ಥ,ನಾಗಪಾತ್ರಿ ಲೋಕೇಶ್ ಅಡಿಗ ಬಡಾಕೆರೆ,ಬೆಂಗಳೂರು ಶ್ರೀನಿವಾಸಪುರ ಸ್ಟಾರ್ ವರ್ಟೆಕ್ಸ್ ಇದರ ಡಾ.ಗಾಯತ್ರಿ ಮುತ್ತಪ್ಪ ಕೋಲಾರ,ಕರ್ನಾಟಕ ಬ್ಯಾಂಕ್ ನಿವೃತ್ತ ಪ್ರಬಂಧಕ ಚಂದ್ರಶೇಖರ ನಾವಡ,ಶ್ರೀಸಿದ್ಧಿವಿನಾಯಕ ದೇವಸ್ಥಾನದ ಹಟ್ಟಿಯಂಗಡಿ ಇದರ ಧರ್ಮದರ್ಶಿ ಬಾಲಚಂದ್ರ ಭಟ್, 
ಬಿಜೆಪಿ ರಾಜ್ಯ ಕಾರ್ಯಕಾರಣಿ ಸಮಿತಿಯ ಗೀತಾಂಜಲಿ ಸುವರ್ಣ, ರುಡ್‌ಸೆಟ್ ಸಂಸ್ಥೆ ಬ್ರಹ್ಮಾವರ ಇದರ ಹಿರಿಯ ಉಪನ್ಯಾಸಕ ಕರುಣಾಕರ್ ಜೈನ್,ದ.ಕ.ಹಾಲು ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ, ಎಪಿಎಂಸಿ ಉಡುಪಿ ಇದರ ಅಧ್ಯಕ್ಷ ಸತೀಶ್ ಶೆಟ್ಟಿ ನಂಚಾರು,ಜಯಚ೦ದ್ರ ಹೆಬ್ಬಾರ್,ಜಿಲ್ಲಾಪಂಚಾಯತ್ ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ,ಬಿಜೆಪಿ ಮುಖಂಡ ಯಶ್‌ಪಾಲ್ ಸುವರ್ಣ,
ಸುವಿಧಾ ಕೇಂದ್ರ ಉಡುಪಿ ಇದರ ಅರುಣ್ ಸಲ್ದಾನ್,ಸ್ಪೋರ್ಟ್ಸ್ ಕನ್ನಡ ಇದರ ಪ್ರಧಾನ ಸಂಪಾದಕ ರಾಮಕೃಷ್ಣ ಆಚಾರ್ಯ ಕೋಟ,ಪ್ರಗತಿಪರ ಕೃಷಿಕ ಲಲಿತಾ ರಾಜೇಂದ್ರ ಚಕ್ಕೇರ, ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನಂಚಾರು ಇದರ ಪದಾಧಿಕಾರಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯೋಗಸಾಧಕಿ ತನುಶ್ರೀ ಪಿತ್ರೋಡಿ ಪ್ರಾರ್ಥಿಸಿ, ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನಂಚಾರುಇದರ ಅಧ್ಯಕ್ಷ ಎನ್.ರಾಜೇಂದ್ರ ಚಕ್ಕೇರ ಸ್ವಾಗತಿಸಿ, ಸತ್ಯೇಶ್ ಉಡುಪ ಮಿಯ್ಯಾರು ನಿರೂಪಿಸಿ, ಪ್ರತಿಭಾ ಆಚಾರ್ಯ ಧನ್ಯವಾದಗೈದರು. ಕಾರ್ಯಕ್ರಮದಲ್ಲಿ ಗೋವಿಗಾಗಿ ನಾವು ದೇಣಿಗೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು.
 
 
 
 
 
 
 
 
 
 
 

Leave a Reply