“ಸಂವಿಧಾನ ರಾಷ್ಟ್ರದ ಆತ್ಮ”~ ಚಿಂತಕ ಪ್ರೊ.ಪಿ. ಅನಂತಕೃಷ್ಣ ಭಟ್

         “ವಿಶ್ವದಲ್ಲಿಯೇ ಅತ್ಯಂತ ದೀರ್ಘವಾದ ಲಿಖಿತ ಸಂವಿಧಾನ ನಮ್ಮದು.  ಸಂವಿಧಾನವು ದೇಶದ ಆತ್ಮವಿದ್ದಂತೆ. ಇದರಲ್ಲಿ ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನು ವಿವರವಾಗಿ ಉಲ್ಲೇಖಿಸಲಾಗಿದೆ.
ಸಂವಿಧಾನದ  ಅರಿವು  ಇಲ್ಲದಿದ್ದರೇ  ಆತ್ಮಾಭಿಮಾನ, ದೇಶಾಭಿಮಾನ ಎರಡೂ ನಶಿಸಿ ಹೋಗುತ್ತದೆ”ಎಂದು ಹಿರಿಯ ಚಿಂತಕರಾದ ಪ್ರೊ.ಪಿ. ಅನಂತಕೃಷ್ಣ ಭಟ್ ಅವರು ಅಭಿಪ್ರಾಯಪಟ್ಟರು. 
ಅವರು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಭಾರತದ ಸಂವಿಧಾನದ ಕುರಿತು ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ರಾಘವೇಂದ್ರ ಅವರು ಅಧ್ಯಕ್ಷತೆ ವಹಿಸಿ, ಪ್ರತಿಯೊಬ್ಬರು ಸಂವಿಧಾನದ ಮಹತ್ವವನ್ನು ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು. 
ಮತದಾರರ ಸಾಕ್ಷರತಾ ಸಂಘದ ಸಂಚಾಲಕ  ಪ್ರತಿಭಾ ಭಟ್ ಸ್ವಾಗತಿಸಿದರು. ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ನಿರ್ದೇಶಕರಾದ ಡಾ. ಭರತ್ ವಂದಿಸಿದರು ರಾಜ್ಯಶಾಸ್ತ್ರ  ಪ್ರಾಧ್ಯಾಪಕ  ಪ್ರೊ. N. ನಿತ್ಯಾನಂದರವರು ಕಾರ್ಯಕ್ರಮ ನಿರ್ವಹಿಸಿದರು.
 
 
 
 
 
 
 
 
 
 
 

Leave a Reply