ಉಡುಪಿ: ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಉಡುಪಿ: ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯನ್ನು ಕಡಿಯಾಳಿಯ ಪೆಟ್ರೋಲ್ ಬಂಕ್ ಎದುರುಗಡೆ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಭಾಗವಹಿಸಿದ್ದು ಕಳೆದ ಒಂದು ವರ್ಷದಿಂದ ದೇಶದೆಲ್ಲೆಡೆ ಕೊರೋನಾ ಮಹಾಮಾರಿ ತಾಂಡವವಾಡುತ್ತಿದೆ. ಈ ಸಂಕಷ್ಟ ಕಾಲದಲ್ಲಿಯೂ ಕೇಂದ್ರ ಸರ್ಕಾರವು ಇಂಧನಗಳ ಬೆಲೆಯನ್ನು ಏರಿಸುತ್ತಿರುವುದು ದುರಾದೃಷ್ಟಕರ.ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ರೂ.37ರಷ್ಟಿದ್ದು, ಅದಕ್ಕೆ ರೂ 65ರಷ್ಟು ತೆರಿಗೆ ವಿಧಿಸಲಾಗುತ್ತಿದೆ ಎಂದು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೋ,ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ,ಮುಂತಾದವರು ಸಂದರ್ಭೋಚಿತವಾಗಿ ಮಾತನಾಡಿದರು.ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು.ಜನಾರ್ಧನ್ ಭಂಡಾರ್ಕರ್ ಕಾರ್ಯಕ್ರಮ ನಿರೂಪಿಸಿದರು.ನಗರಸಭೆಯ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ವಂದಿಸಿದರು.

ನಗರಸಭಾ ಸದಸ್ಯ ರಮೇಶ್ ಕಾಂಚನ್,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ,ರೋಶನಿ ಒಲಿವರ್,ಶೈಲಾ ಅಲ್ಮೇಡಾ, ಜಯಶ್ರೀ ಶೇಟ್,ದೇವಕಿ ಕೋಟ್ಯಾನ್,ಆಶಾ ಕಡಿಯಾಳಿ, ಜಯಶ್ರೀ ಕೋಟ್ಯಾನ್,ಬಿ.ಕುಶಲ್ ಶೆಟ್ಟಿ, ಗಣೇಶ್ ನೆರ್ಗಿ, ವಿಶ್ವಾಸ್ ಆಮೀನ್,ಅಖಿಲೇಶ್ ಕೋಟ್ಯಾನ್,ಪ್ರಮೀಳಾ ಜತ್ತನ್, ಶ್ರೀನಿವಾಸ ಹೆಬ್ಬಾರ್,ಶಶಿರಾಜ್ ಕುಂದರ್, ಕೃಷ್ಣ ಹೆಬ್ಬಾರ್,ಸಂಜಯ್ ಆಚಾರ್ಯ, ಸತೀಶ್ ಪುತ್ರನ್,ಮಾಧವ ಬನ್ನಂಜೆ, ವಿಜಯ್ ಪೂಜಾರಿ, ಉಮೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

 

 
 
 
 
 
 
 
 
 
 
 

Leave a Reply