ಪ್ರಸಾದ್ ನೇತ್ರಾಲಯ ಉಡುಪಿ: ಸ್ವಾತಂತ್ರ್ಯ ದಿನಾಚರಣೆ

ಉಡುಪಿಯ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯದಲ್ಲಿ
ಸ್ವಾತಂತ್ರ್ಯ ದಿನಾಚರಣೆ ಹಾಗೂ ಸ್ವಾತಂತ್ರ್ಯದ
ಅಮೃತ ಮಹೋತ್ಸವವನ್ನು ವಿಜ್ರ೦ಭಣೆಯಿ೦ದ
ಆಚರಿಸಲಾಯಿತು. ಭಾರತೀಯ ಜನತಾ ಪಕ್ಷದ ಮುಖ೦ಡ,
ಉದ್ಯಮಿ, ಸಮಾಜ ಸೇವಕ ಶ್ರೀ ಸುರೇಶ್ ಶೆಟ್ಟಿ
ಗುರ್ಮೆಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ
ಧ್ವಜಾರೋಹಣಗೈದರು.
ಅವರು ಮಾತನಾಡುತ್ತಾ ಸನ್ಮಾನ್ಯ ಪ್ರಧಾನ
ಮ೦ತ್ರಿಗಳ ಸಾರಥ್ಯದಲ್ಲಿ ಭಾರತವು ಸ್ವಾತಂತ್ರ್ಯ
ತರುವಾಯ 75ವರ್ಷಗಳ ಬಳಿಕ ವಿಶ್ವದಲ್ಲಿಯೇ ಅತೀ
ಗೌರವಯುತವಾದ ದೇಶವಾಗಿ ರೂಪಾ೦ತರಗೊ೦ಡಿದೆ. ಈ
ಬದಲಾವಣೆಯು ಇನ್ನೂ ಉತ್ತಮ ರೀತಿಯಲ್ಲಿ
ಮು೦ದುವರಿಯಲು ನಮ್ಮಲ್ಲಿರುವ ವೈಚಾರಿಕ
ಬೇಧಗಳನ್ನು ಬದಿಗಿಟ್ಟು ದೇಶದ ಅಭಿವದ್ಧಿಗಾಗಿ ನಮ್ಮ
ಸೇವೆಯನ್ನು ಮುಡಿಪಾಗಿಡಬೇಕೆ೦ದರು.
ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ
ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು
ಎಲ್ಲರಿಗೂ ಸ್ವಾತಂತ್ರೋತ್ಸವದ
ಶುಭಾಶಯಗಳನ್ನು ಹೇಳಿದರು. ಶ್ರೀ ರಘುರಾಮ್
ರಾವ್, ನಿವತ್ತ ಡಿ.ಸಿ.ಎಫ್, ಶ್ರೀಮತಿ ವೀಣಾ ರಾವ್, ಆಸ್ಪತ್ರೆಯ
ನಿರ್ದೇಶಕಿ ಶ್ರೀಮತಿ ರಶ್ಮಿ ಕೃಷ್ಣ ಪ್ರಸಾದ್, ಆಸ್ಪತ್ರೆಯ

ವೈದ್ಯರುಗಳು, ಸಿಬ೦ದಿ ವರ್ಗ, ನೇತ್ರಜ್ಯೋತಿ
ಕಾಲೇಜಿನ ಪ್ರಾಧ್ಯಾಪಕ ವೃ೦ದ, ವಿದ್ಯಾರ್ಥಿಗಳು
ಉಪಸ್ಥಿತರಿದ್ದರು.
ಈ ಸ೦ಧರ್ಭದಲ್ಲಿ ಭಾಗವಹಿಸಿದವರಿಗೆ ಗಿಡಗಳನ್ನು
ವಿತರಿಸಲಾಯಿತು.
ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀ ಮಧ್ವವಲ್ಲಭ
ಆಚಾರ್ಯರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ
ನಿರೂಪಿಸಿದರು.

 
 
 
 
 
 
 
 
 
 
 

Leave a Reply