ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಹೆಚ್ಚಿಸಿ ~ ಪ್ರಮೋದ್ ಮಧ್ವರಾಜ್

ಮಂಗಳೂರಿನ ಮೀನುಗಾರಿಕಾ ದೋಣಿಯು ಮೀನುಗಾರಿಕೆ ಮುಗಿಸಿ ವಾಪಾಸ್ಸಾಗುವ ಸಂದರ್ಭ, ಸಮುದ್ರದ ಅಲೆಗೆ ದೋಣಿ ಮಗುಚಿ ಬಿದ್ದು ದೋಣಿಯಲ್ಲಿದ್ದ 25 ಜನರು ನೀರು ಪಾಲಾಗಿದ್ದರು, ಅವರಲ್ಲಿ 19 ಮೀನುಗಾರರನ್ನು ಇತರ ದೋಣಿಯ ಮೀನುಗಾರರು ರಕ್ಷಿಸಿದ್ದು, ಕಾಣೆಯಾಗಿದ್ದ 6 ಮೀನುಗಾರರು ಮೃತ ದೇಹ ಪತ್ತೆಯಾಗಿದೆ 

ಈ ಘಟನೆ ತೀವೃ ನೋವಿನ ಸಂಗತಿಯಾಗಿದ್ದು ಇಂತಹ ಘಟನೆ ಮುಂದೆಂದು ನಡೆಯದಿರಲಿ ಮತ್ತು ಯಾವ ಮೀನುಗಾರನ ಜೀವಕ್ಕೂ ಪ್ರಾಣಾಪಾಯ ಸಂಭವಿಸದಿರಲಿ ಎಂದು ನಾವೆಲ್ಲರೂ ಸಮುದ್ರ ದೇವರಲ್ಲಿ ಪ್ರಾರ್ಥಿಸೋಣ..

ಅಗಲಿದ ಜೀವಕ್ಕೆ ಬೆಲೆ ಕಟ್ಟಲಾಗದು , ಸಂಕಷ್ಟ ದಲ್ಲಿ ಹೊಟ್ಟೆಪಾಡಿಗೆ ಸಮುದ್ರದಲ್ಲಿ ಜೀವ ಪಣಕಿಟ್ಟು ಹೋರಾಡಿ ಸಮುದ್ರದಲ್ಲಿ ಮಡಿದ ಜೀವವನ್ನೇ ನಂಬಿಕೊಂಡಿದ್ದ ಕುಟುಂಬಕ್ಕೆ ಸರಕಾರ ಗರಿಷ್ಟ ಪರಿಹಾರ ಧನ ಮಂಜೂರು ಮಾಡಿ ಅವರ ತಾತ್ಕಾಲಿಕ ಜೀವನೋಪಾಯಕ್ಕೆ ಸಹಾಯ ಮಾಡುವಂತೆ ಮನವಿ ಮಾಡುತ್ತೇನೆ..

ನಾನು ಮೀನುಗಾರಿಕಾ ಸಚಿವನಾಗಿದ್ದ ಸಂದರ್ಭ ಇಂತಹ ಪರಿಸ್ಥಿತಿಯಲ್ಲಿ ಕುಟುಂಬದವರ ಬೆಂಬಲಕ್ಕಾಗಿ 2 ಲಕ್ಷ ರೂಪಾಯಿದ್ದ ಮೀನು ಗಾರರ ಸಂಕಷ್ಟ ಪರಿಹಾರ ನಿಧಿಯನ್ನು 6 ಲಕ್ಷ ರೂಪಾಯಿಗೆ ಏರಿಸಿ ಸರಕಾರದ ವತಿಯಿಂದ ಆದೇಶ ಮಾಡಿಸಿ ನೊಂದ ಮೀನುಗಾರರ ಕುಟುಂಬಕ್ಕೆ ಆಧಾರ ನೀಡುವ ವ್ಯವಸ್ಥೆ ಮಾಡಿಸಿದ್ದೆನು..

ಮತ್ಸ್ಯಕ್ಷಾಮ ಮತ್ತು ಕೋರೊನಾ ಲಾಕ್ಡೌನ್ ನಂತಹ ಪರಿಸ್ಥಿತಿಯಲ್ಲಿ ಸಂಪೂರ್ಣ ನೆಲ ಕಚ್ಚಿರುವ ಉದ್ಯಮಗಳಲ್ಲಿ ಮೀನುಗಾರಿಕೆಯು ಒಂದು.

ಮೀನುಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮತ್ತು ಅನುದಾನ ಬಿಡುಗಡೆಯ ಜೊತೆಗೆ, ಮೀನುಗಾರರ ಸಂಕಷ್ಟ ಪರಿಹಾರ ನಿಧಿಯ ಮೊತ್ತವನ್ನು ಇನ್ನು ಮಂದೆ ಕನಿಷ್ಟ 10 ಲಕ್ಷ ರೂಪಾಯಿಗಳಿಗೆ ಏರಿಸುವಂತೆ ಮಾನ್ಯ ಮೀನುಗಾರಿಕಾ ಮಂತ್ರಿಗಳು ಮತ್ತು ಮಾನ್ಯ ಮುಖ್ಯಮಂತ್ರಿಯವರಲ್ಲಿ ವಿನಮ್ರ ಮನವಿ ಮಾಡುತ್ತೇನೆ…

-ಪ್ರಮೋದ್ ಮಧ್ವರಾಜ್, _ಮಾಜಿ ಯುವಜನ ಸಬಲೀಕರಣ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವರು ಕರ್ನಾಟಕ ಸರಕಾರ_

 
 
 
 
 
 
 
 
 
 
 

Leave a Reply