ವ್ಯಕ್ತಿಯ ಹೆಸರಿನಲ್ಲಿ ಪೂಜೆ ಮಾಡುವುದು ದೇವರಿಗೆ ಅವಮಾನ – ಕಲ್ಲಡ್ಕ ಪ್ರಭಾಕರ್ ಭಟ್ –

ಮಂಗಳೂರು: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುತ್ತಿರುವ “ಸಲಾಮ್ ಪೂಜೆ”ಯ ಮೇಲೆ ಸಂಘಪರಿವಾರದ ಕಣ್ಣು ಬಿದ್ದಿದೆ. ಇದೀಗ ಅದನ್ನು ಆಕ್ಷೇಪಿಸಿ ಆ ಹೆಸರಿನಲ್ಲಿ ಪೂಜೆ ನಿಲ್ಲಿಸುವಂತೆ ಬಲಪಂಥೀಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಟಿಪ್ಪು ಆ ದೇವಸ್ಥಾನಕ್ಕೆ ನೀಡಿದ ಕೊಡುಗೆ‌ ಮತ್ತು ಭೇಟಿಯ ಗೌರವಾರ್ಥವಾಗಿ ಹಲವು ವರ್ಷಗಳಿಂದ ಸಲಾಮ್ ಪೂಜೆ ನಡೆಯುತ್ತಿರುವುದು ಒಂದು ಪ್ರತೀತಿ. ಇದೀಗ ಈ ಕುರಿತು ಪ್ರತಿಕ್ರಿಯಿಸಿರುವ ಬಲಪಂಥೀಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ” ಹಿಂದು ಸಮಾಜವನ್ನು ನಾಶ ಮಾಡಿದ ವ್ಯಕ್ತಿಯ ಹೆಸರಿನಲ್ಲಿ ಪೂಜೆ ಮಾಡುವುದು ದೇವರಿಗೆ ಅವಮಾನ” ಎಂದು ಹೇಳಿದ್ದಾರೆ.

“ಇದರಿಂದಾಗಿ ದೇವಿಯ ಶಕ್ತಿ ಕಡಿಮೆಯಾಗುತ್ತದೆ. ಇದರ ಹೊರತಾಗಿ ಬೇರೆ ಹೆಸರಿನಲ್ಲಿ ‌ಪೂಜೆ ನಡೆಸಲಿ. ಈಗ ಸಲಾಮ್ ಮುಂದೆ ಅದು ಅಲ್ಲಾಹ್ ಸಲಾಮ್ ಎಲ್ಲ ಆಗಬಹುದು. ಅವರು ಅದನ್ನು ಅವರ ಧಾರ್ಮಿಕ ಕೇಂದ್ರಗಳಲ್ಲಿ ಮಾಡಿಕೊಳ್ಳಲಿ. ಇಲ್ಲಿ ನಮ್ಮ ಧಾರ್ಮಿಕ ಕೇಂದ್ರಗಳಲ್ಲಿ ನಮ್ಮ ಸಂಸ್ಕೃತಿಯೇ ನಡೆಯಲಿ ಎಂದು ಆಗ್ರಹಿಸಿದರು.

ದೇವಸ್ಥಾನದ ಕಟ್ಟಡ, ಇನ್ನೂರು ಮೀಟರ್ ಸುತ್ತಮುತ್ತ ಹಿಂದುಗಳಿಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ನಿಯಮ ರೂಪಿಸಿದ್ದು ಕಾಂಗ್ರೆಸ್. ಎಸ್.ಎಮ್ ಕೃಷ್ಣ ಇರುವಾಗ ನಿಯಮ ರೂಪಿಸಿದ್ರು. ಆಗ ಅವರಿಗೆ ಇವರು ಸಮಸ್ಯೆ ಸೃಷ್ಟಿಸುವ ಕುರಿತು ಅರಿವಿತ್ತು. ಆದರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್’ಗೆ ಇದು ಅರ್ಥವಾಗುತ್ತಿಲ್ಲ ಎಂದರು.

ಈ ವ್ಯಾಪರದ ಆಕ್ಷೇಪ ನಾವು ಆರಂಭಿಸಿದ್ದಲ್ಲ. ಅವರ ಕ್ರಿಯೆಗೆ ನಮ್ಮ ಪ್ರತಿಕ್ರಿಯೆ. ಈ ಆಕ್ಷೇಪ ನಿರಂತರ ಮುಂದುವರಿಯಬೇಕೆಂದು ಆಗ್ರಹಿಸಿದರು.

 
 
 
 
 
 
 
 
 
 
 

Leave a Reply