ಉಡುಪಿ ಅಂಚೆ ವಿಭಾಗಕ್ಕೆ ವಲಯ ಮಟ್ಟದ ಪ್ರಶಸ್ತಿ ಪ್ರದಾನ

ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ದಕ್ಷಿಣ ಕರ್ನಾಟಕ ವಲಯ ಮಟ್ಟದ ಪ್ರಶಸ್ತಿಗಳಲ್ಲಿ ಉಡುಪಿ ಅಂಚೆ ವಿಭಾಗಕ್ಕೆ ಪಿಮ್ಎ ಹಾಗು ನನ್ಯತಾ ವಿಷಯವಾಗಿ ತೃತೀಯ ಪ್ರಶಸ್ತಿ, ವ್ಯವಹಾರ ಅಭಿವೃದ್ಧಿ ವಿಷಯವಾಗಿ ವಲಯ ಮಟ್ಟದಲ್ಲಿ ತೃತೀಯ ಸ್ಥಾನ ಲಭಿಸಿದ್ದು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿ  ಎಸ್ ವಿ ಆರ್ ಮೂರ್ತಿಯವರು ವೀಡಿಯೋ ಕಾನ್ಫರೆನ್ಸ್ ಮೂಲಕ  ನಡೆಸಿಕೊಟ್ಟರು.
ಅದೇ ಸಮಯದಲ್ಲಿ   ಉಳಿತಾಯ ಯೋಜನೆಯಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ಉಡುಪಿ ಅಂಚೆ ವಿಭಾಗೀಯ ಕಚೇರಿಯಲ್ಲಿ‌ ನಡೆಯಿತು.ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ರವರ ಅನುಪಸ್ಥಿತಿಯಲ್ಲಿ ಸಹಾಯಕ ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿಯವರು ಸಾಧಕರಿಗೆ ಅಭಿನಂದನೆ ಸಲ್ಲಿಸಿದರು. 
ಅಂಚೆ ಇಲಾಖೆ ಹಾಗು ಉಳಿತಾಯ ಏಜೆಂಟ್ ರವರ ಪೂರಕ ಆಸಕ್ತಿ ಹಾಗು ಸಹಕಾರದಿಂದ ಅತಿ ಹೆಚ್ಚು ಖಾತೆ ತೆರೆಯುವ  ನಮ್ಮ ಇಲಾಖೆಯ ಗುರಿಯನ್ನು ತಲುಪಲು ಸುಲಭ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು. ಸಣ್ಣ ಉಳಿತಾಯ ಏಜೆಂಟ್ ವಿಭಾಗದಲ್ಲಿ ಕರ್ನಾಟಕ ವಲಯ ಮಟ್ಟದಲ್ಲಿ ಅತೀ ಹೆಚ್ಚಿನ ಖಾತೆಗಳನ್ನು ತೆರೆದು ವಲಯ ಮಟ್ಟದಲ್ಲಿ‌ ತೃತೀಯ ಸ್ಥಾನ ಗಳಿಸಿದ ಸಣ್ಣ ಉಳಿತಾಯ ಯೋಜನಾ ಪ್ರತಿನಿಧಿ  ಟಿ ಗಿರೀಶ್ ಪೈ,ಅತೀ ಹೆಚ್ಚಿನ ಹಣ ಕ್ರೋಡೀಕರಿಸಿದ ಪ್ರತಿನಿಧಿ  ರಂಗನಾಥ ಭಟ್, ಅತೀ ಹೆಚ್ಚು ಖಾತೆ ತೆರೆದ ಮಹಿಳಾ ಒ್ರಧಾನ ಕೇಂದ್ರೀಯ ಬಚತ್ ಯೋಜನಾ ಪ್ರತಿನಿಧಿ ಹರಿಣಾಕ್ಷಿ ಉಡುಪಿ,ಬೇಬಿ ಎಮ್ ಶೆಟ್ಟಿಗಾರ್, ಬಸ್ರೂರು ,ಗೀತಾ ಚಂದ್ರಶೇಖರ್ ತಲ್ಲೂರು, ಪದ್ಮಿನಿ ಪಿ ಮಣಿಪಾಲ ಇವರನ್ನು ಗುರುತಿಸಿ ಅಭಿನಂದಿಸಲಾಯಿತು.
ಅಂತೆಯೇ ಅತೀ ಹೆಚ್ಚು ಸಜೀವ ಖಾತೆಗಳನ್ನು‌ ಹೊಂದಿದ ಶಾಖಾ ಅಂಚೆ ಕಚೇರಿ ಕಿರಿ ಮಂಜೇಶ್ವರದ ಅಂಚೆ ಪಾಲಕಿ ಜ್ಯೋತಿಯವರನ್ನು ಗುರುತಿಸಿ ಅಭಿನಂದಿಸಲಾಯಿತು. ಉಡುಪಿ ಉತ್ತರ ವಿಭಾಗದ ಅಂಚೆ ನಿರೀಕ್ಷಕ ಮಾಧವ ಟಿವಿ ಹಾಗು ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಗುರು ‌ಪ್ರಸಾದ್ ಉಪಸ್ಥಿತಿತರಿದ್ದರು‌.
 
 
 
 
 
 
 
 
 
 
 

Leave a Reply