ಕೋಟ ಶ್ರೀನಿವಾಸ ಪೂಜಾರಿಯನ್ನೇ ಸಿಎಂ ಮಾಡಿ

ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ. ಜೊತೆಗೆ ಹೈಕಮಾಂಡ್ ಸೂಚನೆಗೆ ಬದ್ಧ ಎಂದು ಹೇಳಿದ್ದಾರೆ. ಗುರುವಾರ ಮಾಧ್ಯಮ ಗಳ ಮುಂದೆ ಬಿ.ಎಸ್.ಯಡಿಯೂರಪ್ಪ ನೀಡಿದ ಹೇಳಿಕೆಗಳನ್ನು ಗಮನಿಸಿದಾಗ ಸಿಎಂ ಹುದ್ದೆಯಿಂದ ಇಳಿಯುವ ಸಾಧ್ಯತೆ ಹೆಚ್ಚಿದೆ.

ಈ ಬೆನ್ನಲ್ಲೇ ಪ್ರಣವಾನಂದ ಸ್ವಾಮೀಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಸಿಎಂ ಯಡಿಯೂರಪ್ಪರವರನ್ನು ಬದಲಾವಣೆ ಮಾಡಿದರೆ ಕೋಟ ಶ್ರೀನಿವಾಸ ಪೂಜಾರಿಯನ್ನೇ  ಸಿಎಂ ಮಾಡಬೇಕು ಅಂತ ಪ್ರಣವಾನಂದ ಶ್ರೀ ಹೇಳಿದ್ದಾರೆ.

ಆರ್ಯ ಇಡೀಗ ಸಮಾಜಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಸರ್ಕಾರ ಇದುವರೆಗೂ ನಮ್ಮ ಸಮಾಜಕ್ಕೆ ನಿಗಮ ಮಂಡಳಿ ಘೋಷಣೆ ಮಾಡಿಲ್ಲ. ಸಣ್ಣ ಸಣ್ಣ ಸಮಾಜಕ್ಕೆ ನಿಗಮ ಮಂಡಳಿ ಘೋಷಣೆ ಮಾಡಿದ್ದಾರೆ. ಕೂಡಲೇ ಸರ್ಕಾರ ಬ್ರಹ್ಮಶ್ರೀ ನಾರಾಯಣಸ್ವಾಮಿ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು. 
ನಮ್ಮ ಸಮಾಜವನ್ನು ಚುನಾವಣೆಯಲ್ಲಿ ಮಾತ್ರ ಉಪಯೋಗಿಸಿಕೊಳುತ್ತಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆಯಾದರೆ ಮುಖ್ಯಮಂತ್ರಿ ಸ್ಥಾನವನ್ನು ಕೋಟ ಶ್ರೀನಿವಾಸ ಪೂಜಾರಿಗೆ ಕೊಡಬೇಕು ಅಂತ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರಣವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಇದು ನಮ್ಮ ಸಮಾಜದ ಆಗ್ರಹ ಎಂದು ಹೇಳಿದ ಸ್ವಾಮೀಜಿ, ಅಕಸ್ಮಾತ್ ನಮ್ಮ ಸಮಾಜಕ್ಕೆ ಸರಿಯಾಗಿ ಸರಕಾರಗಳು ಸ್ಪಂದನೆ ಮಾಡದೆ ಹೋದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ನಮ್ಮ ಸಮಾಜದ ಹುಲಿಗಳಾದ ಮಾಲೀಕಯ್ಯ ಗುತ್ತೆದಾರ, ಎಚ್.ಆರ್.ಶ್ರೀನಾಥ್ ನೇತೃತ್ವದಲ್ಲಿ ಹೋರಾಟ ನಡೆಸುತ್ತೇವೆ ಎಂದಿದ್ದಾರೆ. 
ನಾವು ತುಂಬಾ ಸೈಲೆಂಟ್, ವೈಲೆಂಟ್ ಆದರೆ ನಮ್ಮ ಸಮಾಜವನ್ನು ಹಿಡಿಯೋಕಾಗಲ್ಲ. ನಿಗಮ ಮಂಡಳಿ ಮಾಡದೆ ಹೋದರೆ ಮುಂದಿನ ದಿನದಲ್ಲಿ ಸಿಗಂಧೂರ ಚಲೋ ಮಾಡುತ್ತೀವಿ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
 
 
 
 
 
 
 
 
 
 
 

Leave a Reply