ಒಪ್ಪಂದ ಪ್ರಕಾರ ಬಿ.ಆರ್.ಶೆಟ್ಟರೇ ಆಸ್ಪತ್ರೆ ಮುನ್ನಡೆಸಲಿ: ಶಾಸಕ ರಘುಪತಿ ಭಟ್

ಉಡುಪಿ: ಉಡುಪಿಯ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಈ ಹಿಂದೆ ಆದ ಒಪ್ಪಂದದಂತೆಯೇ ಬಿ.ಆರ್. ಶೆಟ್ಟರೇ ಮುನ್ನಡೆಸಿಕೊಂಡು ಹೋಗಬೇಕು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಆಸ್ಪತ್ರೆಗೆ ನಾವು ತಡೆ ಮಾಡಿದ್ದೇವೆ ಎಂದು ಆರೋಪಿಸಿದ್ದಾರೆ. ಇದು ಅವರ ಜ್ಞಾನದ ಕೊರತೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ಮಕ್ಕಳ ಆಸ್ಪತ್ರೆ ಬದಲಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಲು ಸರಕಾರ ಅನುಮತಿ ನೀಡಿತ್ತು. ಬೇಸ್ ಮೆಂಟ್ ಗೆ ಎರಡಂತಸ್ತಿನ ಅನುಮತಿ ಸರ್ಕಾರ ನೀಡಿತ್ತು. ಆದರೆ, ಮೂರು ಅಂತಸ್ತು ಕಟ್ಟಲು ಹೊರಟಾಗ ತಡೆಯಾಜ್ಞೆ ಬಿದ್ದಿದೆ. 

ಖಾಸಗಿಯಾಗಲಿ, ಸರಕಾರಿ ಆಗಲಿ ಬೇಸ್ ಮೆಂಟ್ ಎರಡು ಅಂತಸ್ತಿಗೆ ಮಾತ್ರ ಅವಕಾಶ ಇರುತ್ತದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರಿಗೆ ಈ ನಿಯಮ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಕಾನೂನುಬಾಹಿರವಾಗಿ ಕಟ್ಟಲು ನಾವು ಅವಕಾಶ ಕೊಡುವುದಿಲ್ಲ ಎಂದರು.

ಆಸ್ಪತ್ರೆಯ ಇವತ್ತಿನ ಸಮಸ್ಯೆಗೆ ಹಿಂದಿನ ಸರಕಾರವೇ ಕಾರಣ. ಕೇವಲ ಒಂದು ವರ್ಷದ ಎಂಒಯು ಮಾಡಿ ಆಸ್ಪತ್ರೆಯನ್ನು ಬಿ.ಆರ್ .ಶೆಟ್ಟಿಗೆ ವಹಿಸಿದ್ದಾರೆ. ಕಾಯಂ ಒಪ್ಪಂದ ಇನ್ನೂ ಆಗಿಲ್ಲ. ಈ ಬಗ್ಗೆ ನಾನು ಮೊದಲೇ ಆಕ್ಷೇಪ ವ್ಯಕ್ತಪಡಿಸಿದ್ದೆ. ಈಗ ಬಿ.ಆರ್. ಶೆಟ್ಟಿ ಆರ್ಥಿಕ ಅಡಚಣೆಯಲ್ಲಿದ್ದಾರೆ. ಅದು ಅವರ ಸಮಸ್ಯೆ ಹೊರತು ನಮ್ಮ ಸಮಸ್ಯೆ ಅಲ್ಲ.

ಈ ಹಂತದಲ್ಲಿ ಕಟ್ಟಡದ ವಿನ್ಯಾಸ ಮತ್ತಿತರ ಖರ್ಚು ವಿಷಯ ನೋಡಿದಾಗ ಸರಕಾರ ನಡೆಸುವುದು ಕಷ್ಟ. ಹಿಂದೆ ಆದ ಒಪ್ಪಂದದಂತೆ ಬಿ.ಆರ್. ಶೆಟ್ಟರೇ ಆಸ್ಪತ್ರೆ ಮುನ್ನಡೆಸಿಕೊಂಡು ಹೋಗಬೇಕು ಎಂದು ರಘುಪತಿ ಭಟ್ ಹೇಳಿದ್ದಾರೆ.

 
 
 
 
 
 
 
 
 
 
 

Leave a Reply