ಫ್ಲೆಕ್ಸಿಬಿಜ್ ಅಕೌಂಟಿಂಗ್ ಸರ್ವೀಸಸ್ ಪ್ರೈ. ಲಿ. : ನೂತನ ಶಾಖೆ ಉದ್ಘಾಟನೆ.

ದಿನಾಂಕ 07.11-2021ರಂದು ಫ್ಲೆಕ್ಸಿಬಿಜ್ ಅಕೌಂಟಿಂಗ್ ಸರ್ವೀಸಸ್ ಪ್ರೈ. ಲಿ. ನ ನೂತನ ಶಾಖೆ ಆದಿಉಡುಪಿಯ ಜೈಜವಾನ್ ರೋಡ್, ವೀರ ಭವನ ಕಟ್ಟಡದಲ್ಲಿ ನೂತನ ಶಾಖೆಯ ಕಚೇರಿ ಉದ್ಘಾಟನೆ ನಡೆಯಿತು.

ಉದ್ಘಾಟನೆಯನ್ನು ಸಿಎ. ದೇವ್ ಆನಂದ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರ ವಿವಿದೋದ್ದೇಶ ಸಹಕರ ಸಂಘ. (ರಿ) ಅಧ್ಯಕ್ಷರಾದ ಕೆ.ಸುಭಾಷ್, ಸಿಎ ರೇಖಾ ದೇವಾನಂದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮಶಿವ, ಫ್ಲೆಕ್ಸಿಬಿಜ್ ಅಕೌಂಟಿಂಗ್ ಸರ್ವೀಸಸ್ ಪ್ರೈ. ಲಿ. ಆಡಳಿತ ನಿರ್ದೇಶಕರಾದ ಸಚಿನ್ ಪೂಜಾರಿ, ಧೀರಜ್ ಜೆ. ಶೆಟ್ಟಿ, ಹಾಗೂ ನೂತನ ಶಾಖೆಯ ಕಚೇರಿಯ ಪಾಲುದಾರರಾದ ಕಾರ್ತಿಕ್ ಬಿ. ಎಸ್. , ರಕ್ಷಿತ್ ಶೆಟ್ಟಿಗಾರ್, ಅಭಿಷೇಕ್ ಆಚಾರ್ಯ, ಸಿಎಸ್ ಸುಷ್ಮಾ ಶ್ರೀಪಾದ್ ಉಪಸ್ಥಿತರಿದ್ದರು.

ಇದರ ಪ್ರಧಾನ ಕಚೇರಿ ಬ್ರಹ್ಮಾವರದ ಎಸ್.ಎಮ್.ಎಸ್. ಚರ್ಚ್ ಕಾಂಪ್ಲೆಕ್ಸ್ ನಲ್ಲಿ ಇದ್ದು, ಈ ಕಂಪನಿಯಲ್ಲಿ ಸಿಎ (ಚಾರ್ಟರ್ಡ್ ಅಕೌಂಟೆಂಟ್) , ಸಿಎಸ್(ಕಂಪನಿ ಸೆಕ್ರೆಟರಿ)ನ ಒಳಗೊಂಡ ಕಂಪನಿಯಾಗಿದ್ದು, ಇಲ್ಲಿ ಅಕೌಂಟಿಂಗ್ ಸರ್ವೀಸಸ್, ಬುಕ್ಕೀಪಿಂಗ್, ಐಟಿ ಫೈಲಿಂಗ್, ಜಿಎಸ್ ಟಿ, ಟಿಡಿಎಸ್ ಫೈಲಿಂಗ್, ರಿಜಿಸ್ಟ್ರೇಷನ್, ಕಂಪೆನಿ ರಿಜಿಸ್ಟ್ರೇಷನ್ ಮತ್ತು ಕಂಪ್ಲೈನ್ಸ್, ಇಂಟರ್ನಲ್ ಆಡಿಟ್, ಪ್ರೊಜೆಕ್ಟ್ ರಿಪೋರ್ಟ್, ಡಿಜಿಟಲ್ ಸಿಗ್ನೇಚರ್ ಹಾಗೂ ಇನ್ನಿತರ ಸೇವೆಯನ್ನು ನೀಡುತ್ತಾ ಬರುತ್ತಿದೆ.
ಹೆಚ್ಚಿನ ಮಾಹಿತಿಗಾಗಿ www.flexibizservices.com

 
 
 
 
 
 
 
 
 
 
 

Leave a Reply