ಶಿರೂರು ಮಠ ವಿವಾದ~ ಹೈಕೋರ್ಟ್ ತೀರ್ಪು ಸ್ವಾಗತಿಸಿದ ಪೇಜಾವರ ಸ್ವಾಮೀಜಿ

ಉಡುಪಿ: ಶಿರೂರು ಮಠಕ್ಕೆ ಪೀಠಾಧಿಕಾರಿ ಆಯ್ಕೆ ವಿರುದ್ಧ ಪಿಐಎಲ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ತೀರ್ಪನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ವಾಗತಿಸಿದ್ದಾರೆ.

ಈ ಬಗ್ಗೆ ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಧಾರ್ಮಿಕ ಗ್ರಂಥದಲ್ಲಿ ಪ್ರೌಢತೆ ವಯಸ್ಸನ್ನು ಹದಿಮೂರರ ಬಳಿಕ ಅಂತ ಗುರುತಿಸಲಾಗಿದೆ. 

ಹದಿಮೂರರ ಬಳಿಕ ಪ್ರೌಢ ಅಂತ ಮಹಾಭಾರತದಲ್ಲೇ ಉಲ್ಲೇಖ ಇದೆ. ಮೊದಲು ಎಂಟು ವರ್ಷದ ವರೆಗೆ ಬಾಲ್ಯ ಅಂತ ಇತ್ತು ನಂತರ ಅಣಿ ಮಾಂಡವ್ಯ ಖುಷಿಗಳು ಅದನ್ನು 13 ವರ್ಷಕ್ಕೆ ವಿಸ್ತಾರ ಮಾಡಿದರು. ಹೀಗಾಗಿ ಧಾರ್ಮಿಕ ನೆಲೆ ಹದಿಮೂರು ವರ್ಷ ದಾಟಿದರೆ ಪ್ರೌಢ ಅಂತ ಅರ್ಥ ಎಂದರು.

ಪ್ರುಸ್ತುತ ಶಿರೂರು ಮಠಕ್ಕೆ ನೇಮಕವಾದ ವ್ಯಕ್ತಿಗೆ ಹದಿಮೂರು ವರ್ಷ ಆಗಿದೆ.  ಹೀಗಾಗಿ ಧಾರ್ಮಿಕ ನೆಲೆಯಲ್ಲಿ ಇದು ಬಾಲ್ಯ ಸನ್ಯಾಸ ಅಂತ ಆಗುದಿಲ್ಲ ಎಂದು ಅವರು ಹೇಳಿದರು.

 
 
 
 
 
 
 
 
 
 
 

Leave a Reply