ಪ.ಜಾತಿಯ ಜನತೆಗೆ ವಿವಿಧ ಸೌಲಭ್ಯ ಒದಗಿಸಲು ವಿಶೇಷ ಅಭಿಯಾನ.

ಪ.ಜಾತಿಯ ಜನತೆಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ವಿದ್ಯಾರ್ಥಿ ವೇತನ, ಬಹುಮಾನ ಹಣ ಹಾಗು ಅಂತರ್ಜಾತಿ ವಿವಾಹ ಕಾರ್ಯಕ್ರಮ ಕುರಿತ ಅರ್ಜಿಗಳ ಶೀಘ್ರ ವಿಲೇವಾರಿಗಾಗಿ ದಿನಾಂಕ:28.10.2021 ರಿಂದ 17.11.2021ರವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ನಿಗಧಿತ ಮಿತಿಯಿಲ್ಲದೇ ಕೆಳಗಿನ ಯೋಜನೆಗಳಲ್ಲಿ ಅರ್ಜಿ ಸಲ್ಲಿಸುವ ಅರ್ಹ ಎಲ್ಲಾ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಮಂಜೂರು ಮಾಡಲಾಗುವುದು.

ವಿದ್ಯಾರ್ಥಿವೇತನ;- ವಿದ್ಯಾರ್ಥಿವೇತನ ಯೋಜನೆಯು ಪ.ಜಾತಿ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಪ್ರಮುಖ ಯೋಜನೆಯಾಗಿದೆ. ಪ್ರತಿ ವರ್ಷ ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಈ ಯೋಜನೆಯ ಮೂಲಕ ಶಿಕ್ಷಣದ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ.

ವಿದ್ಯಾರ್ಥಿವೇತನ ಮಂಜೂರಾತಿಗಾಗಿ ವಿದ್ಯಾರ್ಥಿಗಳು ಎಸ್.ಎಸ್.ಪಿ ಪೋರ್ಟಲ್‌ನಲ್ಲಿ ತಮ್ಮ ವಿವರಗಳನ್ನು ನೋಂದಾಯಿಸಿಕೊ0ಡು ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ವಿದ್ಯಾರ್ಥಿಯು ಅರ್ಜಿ ಸಲ್ಲಿಸಿದ ನಂತರ ಕಾಲೇಜಿನಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ವಿವರವನ್ನು ಯುನಿವರ್ಸಿಟಿ ಮುಖಾಂತರ ಎಸ್.ಎಸ್.ಪಿ ವಿಭಾಗಕ್ಕೆ ಕಳುಹಿಸಬೇಕಿರುತ್ತದೆ.

ಪ್ರಸ್ತುತ ಎಸ್.ಎಸ್.ಪಿ ಪೋರ್ಟಲ್‌ನಲ್ಲಿ 2020-21 ಹಾಗು 2021-22ನೇ ಸಾಲಿನ ವಿದ್ಯಾರ್ಥಿವೇತನ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ವಿದ್ಯಾರ್ಥಿಗಳು ಕಾರಣಾಂತರದಿ0ದ 2019-20ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಲು ವಿಫಲರಾಗಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೂ ವಿಶೇಷ ಅಭಿಯಾನದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು.

2021-22ನೇ ಸಾಲಿನಿಂದ ವಿದ್ಯಾರ್ಥಿವೇತನಕ್ಕೆ ಎಸ್.ಎಸ್.ಪಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪೋರ್ಟಲ್‌ನಿಂದ “ಫ್ರೀಶಿಪ್ ಕಾರ್ಡ” ಡೌನ್‌ಲೋಡ್ ಮಾಡಿಕೊಂಡು ,ಅದನ್ನು ಕಾಲೇಜಿನಲ್ಲಿ ನೀಡಿ ಉಚಿತ ಶಿಕ್ಷಣ ಪಡೆಯಬಹುದು. ವಿದ್ಯಾರ್ಥಿವೇತನ ಮಂಜೂರಾಗುವ ಮೊದಲು ಕಾಲೇಜು ಶುಲ್ಕ ಪಾವತಿಸುವಂತೆ ಕಾಲೇಜುಗಳು ಒತ್ತಡ ಹೇರುವಂತಿಲ್ಲ.

ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಯಡಿ 7470 ವಿದ್ಯಾರ್ಥಿಗಳಿಗೆ ಒಟ್ಟು ರೂ. 90 ಲಕ್ಷ ವಿದ್ಯಾರ್ಥಿವೇತನ ಮಂಜೂರು ಮಾಡಲಾಗಿದೆ ಹಾಗು ಮೆಟ್ರಿಕ್ ನಂತರ ವಿದ್ಯಾರ್ಥಿವೇತನ ಯೋಜನೆಯಡಿ 2037 ವಿದ್ಯಾರ್ಥಿಗಳಿಗೆ ಒಟ್ಟು ರೂ. 152.79 ಲಕ್ಷ ವಿದ್ಯಾರ್ಥಿವೇತನ ಮಂಜೂರು ಮಾಡಲಾಗಿದೆ.

• ಬಹುಮಾನ ಹಣ;- ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪ.ಜಾತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕೆಳಕಂಡ0ತೆ ಬಹುಮಾನ ಹಣ ಮಂಜೂರು ಮಾಡಲಾಗುತ್ತಿದೆ. ದ್ವಿತೀಯ ಪಿ.ಯು.ಸಿ. (ರೂ.20000), ಅಂತಿಮ ಪದವಿ ತರಗತಿ (ರೂ.25000), ಎಲ್ಲಾ ತರಹದ ಸ್ನಾತಕೋತ್ತರ ಪದವಿ (30000), ವೃತ್ತಿ ಶಿಕ್ಷಣ (ಉದಾ: ಬಿ.ಇ. ಮೆಡಿಕಲ್ , ರೂ.35000) ಬಹುಮಾನ ಹಣ ಮಂಜೂರಾತಿಗಾಗಿ ಆನ್‌ಲೈನ್ ಮುಖಾಂತರ www.sw.kar.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ವಿದ್ಯಾರ್ಥಿಯು ಅರ್ಜಿಯನ್ನು ಪ್ರಾಂಶುಪಾಲರಿ0ದ ಧೃಢೀಕರಿಸಿಕೊಂಡು ಜಿಲ್ಲಾ ಸಮಾಜ ಕಲ್ಯಾಣ ಕಛೇರಿಗೆ ದಾಖಲೆಗಳನ್ನು ಸಲ್ಲಿಸುವುದು.

ಉಡುಪಿ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 629 ವಿದ್ಯಾರ್ಥಿಗಳಿಗೆ ಒಟ್ಟು ರೂ. 142.15 ಲಕ್ಷ ಬಹುಮಾನ ಹಣ ಮಂಜೂರು ಮಾಡಲಾಗಿದೆ.

• ಅಂತರ್ ಜಾತಿ ವಿವಾಹವಾದ ದಂಪತಿಗಳಿಗೆ ಪ್ರೋತ್ಸಾಹಧನ :- ಪ.ಜಾತಿಯ ಹೆಣ್ಣು ಹಿಂದೂ ಧರ್ಮದ ಇತರೇ ಸವರ್ಣೀಯ ಜನಾಂಗದ ಗಂಡನ್ನು ವಿವಾಹವಾದಲ್ಲಿ ರೂ. 3 ಲಕ್ಷಗಳ ಪ್ರೋತ್ಸಾಹಧನ ನೀಡಲಾಗುವುದು (ವಯೋಮಿತಿ 18 ರಿಂದ 42 ವರ್ಷದೊಳಗಿನವರು). ಪ.ಜಾತಿಯ ಗಂಡು ಹಿಂದೂ ಧರ್ಮದ ಇತರೇ ಸವರ್ಣೀಯ ಜನಾಂಗದ ಹೆಣ್ಣನ್ನು ಅಂತರ್‌ಜಾತಿ ವಿವಾಹವಾದಲ್ಲಿ ರೂ. 2 ಲಕ್ಷಗಳ ಪ್ರೋತ್ಸಾಹಧನ ನೀಡಲಾಗುವುದು (ವಯೋಮಿತಿ 21 ರಿಂದ 45 ವರ್ಷದೊಳಗಿನವರು). ವಿವಾಹವಾದ 18 ತಿಂಗಳೊಳಗೆ ಆನ್‌ಲೈನ್ ಮೂಖಾಂತರ www.sw.kar.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಉಡುಪಿ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 34 ದಂಪತಿಗಳಿಗೆ ಒಟ್ಟು ರೂ. 95 ಲಕ್ಷ ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ.

• ಮರು ಮದುವೆಯಾಗುವ ಪ.ಜಾತಿಯ ವಿಧವೆಯರಿಗೆ ರೂ. 3 ಲಕ್ಷ ಪ್ರೋತ್ಸಾಹಧನ :- ಕಾನೂನು ಬದ್ಧವಾಗಿ ವಿವಾಹವಾಗಿರುವ ಬಗ್ಗೆ ಸಬ್ ರಿಜಿಸ್ಟಾçರ್ ಕಛೇರಿಯಲ್ಲಿ ನೊಂದಾಯಿಸಿರಬೇಕು. ವಿಧವೆಯ ವಯೋಮಿತಿ ಕನಿಷ್ಟ 18 ವರ್ಷದಿಂದ ಗರಿಷ್ಟ 42 ವರ್ಷಗಳಾಗಿದ್ದು, ವರನಿಗೆ ಕನಿಷ್ಟ 21 ಅರ್ಜಿ ವರ್ಷಗಳಿಂದ 45 ವರ್ಷ ವಯಸ್ಸು ಆಗಿರತಕ್ಕದ್ದು. ಮರುವಿವಾಹವಾದ 01 ವರ್ಷದೊಳಗೆ ಆನ್‌ಲೈನ್ ಮೂಖಾಂತರ www.sw.kar.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು.

• ಪ.ಜಾತಿ ಒಳ ಪಂಗಡದೊಳಗೆ ಅಂತರ್‌ಜಾತಿ ವಿವಾಹವಾದ ದಂಪತಿಗಳಿಗೆ ರೂ. 2 ಲಕ್ಷ ಪ್ರೋತ್ಸಾಹಧನ : ಅರ್ಜಿ ಸಲ್ಲಿಸುವ ದಂಪತಿಗಳ ವಾರ್ಷಿಕ ಆದಾಯ ರೂ. 2 ಲಕ್ಷ ಮೀರಿರಬಾರದು. ವಿವಾಹವಾದ 18 ತಿಂಗಳೊಳಗೆ ಆನ್‌ಲೈನ್ ಮೂಖಾಂತರ www.sw.kar.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಉಡುಪಿ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 3 ದಂಪತಿಗಳಿಗೆ ಒಟ್ಟು ರೂ. 6 ಲಕ್ಷ ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ.

• ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳ ವಿವಾಹವಾದ ದಂಪತಿಗಳಿಗೆ ರೂ. 50,000 ಪ್ರೋತ್ಸಾಹ ಧನ:-ಕಾನೂನು ಬದ್ಧವಾಗಿ ವಿವಾಹವಾಗಿರುವ ಬಗ್ಗೆ ಸಬ್ ರಿಜಿಸ್ಟಾçರ್ ಕಛೇರಿಯಲ್ಲಿ ನೊಂದಾಯಿಸಿರಬೇಕು. ವಿವಾಹವಾದ 1 ವರ್ಷದೊಳಗೆ ಆನ್‌ಲೈನ್ ಮೂಖಾಂತರ www.sw.kar.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ದಂಪತಿಗಳ ವಾರ್ಷಿಕ ಆದಾಯ ರೂ. 2 ಲಕ್ಷ. ಉಡುಪಿ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 1 ದಂಪತಿಗೆ ರೂ. 0.5 ಲಕ್ಷ ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ.

ಈ ಅಭಿಯಾನ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಜಿಲ್ಲೆಯಾದ್ಯಂತ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅರ್ಜಿ ಸಲ್ಲಿಸುವಾಗ ಯಾವುದೇ ತೊಂದರೆ/ ಗೊಂದಲಗಳಿದ್ದಲ್ಲಿ , ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ನೀಡಲು , ಸಹಾಯಕ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ಉಡುಪಿ (0820-2528884, 9480843209, 9740736224, 9741928762, 9535201383), ಕುಂದಾಪುರ (08254-298089, 9480843208, 7892690170, 9611819430) ಹಾಗು ಕಾರ್ಕಳ (08258-232133, 9480843207, 9731168878) ಇಲ್ಲಿನ ಸಹಾಯವಾಣಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ. ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸುವಲ್ಲಿ ಹಾಗು ಕಾಲೇಜುಗಳಿಂದ ವಿದ್ಯಾರ್ಥಿಗಳ ವಿವರ ಸಲ್ಲಿಸುವಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಕೂಡಾ ಈ ಸಹಾಯವಾಣಿ ಕೇಂದ್ರಗಳು ಸಹಕಾರ ನೀಡಲಿವೆ.

ಅಭಿಯಾನದಲ್ಲಿ ಈ ಮೇಲಿನ ಸೌಲಭ್ಯಗಳನ್ನು ಪಡೆಯಲು ಅರ್ಹ ಪ.ಜಾತಿಯ ಎಲ್ಲಾ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಜಿಲ್ಲೆಗೆ ಯಾವುದೇ ನಿಗಧಿತ ಗುರಿ ಇಲ್ಲವಾಗಿದ್ದು, ಅರ್ಜಿ ಸಲ್ಲಿಸುವ ಅರ್ಹ ಎಲ್ಲರಿಗೂ ವಿವಿಧ ಸೌಲಭ್ಯಗಳನ್ನು ಮಂಜೂರು ಮಾಡಲಾಗುವುದು , ಆದ್ದರಿಂದ ಜಿಲ್ಲೆಯ ಪ.ಜಾತಿಯ ಜನತೆ ಈ ಸುವರ್ಣಾವ ಕಾಶವನ್ನು ಸದುಪಯೋಗ ಪಡಿಸಿಕೊಂಡು, ಈ ಅವಧಿಯಲ್ಲಿ ಅತ್ಯಂತ ಗರಿಷ್ಠ ಪ್ರಮಾಣದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು: ಅನಿತಾ ಮಡ್ಲೂರು , ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ.ಉಡುಪಿ

 
 
 
 
 
 
 
 
 
 
 

Leave a Reply