ನಿರ್ಮಲಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕ್ರಿಸ್ ಮಸ್ ಹಬ್ಬ

ಬ್ರಹ್ಮಾವರ : ಏಸು ಕ್ರಿಸ್ತರು ಈ ಜಗತ್ತಿಗೆ ಮಾನವತೆಯ ಸಂದೇಶವನ್ನು ಬೋಧಿಸಿದರು. ದೇವರಿಗೆ ಎಲ್ಲರು ಸಮಾನರು. ದೇವರು ಪ್ರೀತಿಯ ಭಾಷೆಯಲ್ಲಿ ಮಾತನಾಡುತ್ತಾರೆ. ಪ್ರೀತಿ,ಮಾನವತೆಯ ಸಂದೇಶವನ್ನು ಏಸು ಕ್ರಿಸ್ತರು ನಮಗೆ ತಿಳಿಸಿ ಅಮರರಾಗಿದ್ದಾರೆ ಎಂದು ಫಾಧರ್ ಪ್ರಕಾಶ್ ಲೋಬೊ ಹೇಳಿದರು.

ಅವರು ಬ್ರಹ್ಮಾವರ ನಿರ್ಮಾಲಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕ್ರಿಸ್ಮಸ್ ಹಬ್ಬದ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಂದೇಶ ನೀಡಿದರು.

ಕಾಲೇಜಿನ ಸಂಚಾಲಕಿ ಸಿಸ್ಟರ್ ರೋಸ್ ಫ್ಲೋರಿನ್ ಡಿಸೋಜ ಮಾತನಾಡಿ ದೇವರು ಹೊರಗಡೆ ಎಲ್ಲೂ ಇಲ್ಲ ನಮ್ಮೊಳಗೆ ಇದ್ದಾನೆ. ಒಳ್ಳೆ ಕೆಲಸ ಮಾಡುವವರಿಗೆ ದ್ವೇಷಿಗಳು ಇದ್ದೆ ಇರುತ್ತಾರೆ. 

ಈ ದ್ವೇಷ ಭಾವನೆ ಬಿಟ್ಟು ಪ್ರೀತಿ ಸಹಬಾಳ್ವೆ ಯಿಂದ ಬದುಕಬೇಕು ಎಂದರು ಪ್ರಾಂಶುಪಾಲೆ ಸಿಸ್ಟರ್ ಜೇಸಿಂತಾ ಕರ್ಡೊಜ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪದವಿ ಪೂರ್ವ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸಾಮೂಹ ಗಾಯನ, ನಕ್ಷತ್ರ ಗೂಡು ದೀಪ ಸ್ಪರ್ಧೆ ಗಳನ್ನು ಆಯೋಜಿಸಿ ಬಹುಮಾನ ನೀಡಲಾಯಿತು. ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ರೂಪಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

ಪ್ರೌಢ ಶಾಲಾ ಶಿಕ್ಷಕ ವೈಲೆಟ್ ಹಾಗೂ ಟೀನಾ ಲಸ್ರಾದೋ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಡಾಲ್ವಿನ್ ಡಯಾಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಅಲ್ತಾರು ನಾಗರಾಜ್, ಪ್ರಶಾಂತ್, ವಿಲ್ಮಾ, ಫಾತಿಮ, ಶ್ರಾವ್ಯ ಹಾಗೂ ಪ್ರೌಢ ಶಾಲಾ ಶಿಕ್ಷಕ ರಮಾನಂದ, ಪ್ರತಿಮಾ ಪಿ, ಪ್ರತಿಮಾ ಶೆಟ್ಟಿ, ರೇಷ್ಮಾ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply