ಮಂದಾರ್ತಿ : ನಡೂರು ಕಂಬಳಗದ್ದೆ ಮನೆಯಲ್ಲಿ ಕಂಬಳ ಮಹೋತ್ಸವ

ಮಂದಾರ್ತಿ: ಮಳೆಗಾಲದ ಕೃಷಿ ಚಟುವಟಿಕೆಗಳು ಮುಗಿದು ಫಸಲಿನ ಕಟಾವು ಆದ ನಂತರ ರೈತರು ಗದ್ದೆಯಲ್ಲಿಯೇ ತಮ್ಮ ಪ್ರೀತಿಯ ಕೋಣಗಳನ್ನು ಓಡಿಸುವ ಮೂಲಕ ತಮ್ಮ ಇಷ್ಟು ದಿನದ ದಣಿವನ್ನು ನೀಗಿಸಿ ಮನೋರಂಜನೆ ಪಡೆಯಲು ಮಾರ್ಗ ಕಂಬಳ.

ಇತ್ತೀಚೆಗಿನ ದಿನಗಳಲ್ಲಿ ಕಂಬಳ ಆಯೋಜಿಸಲು ಕಷ್ಟಕರವಾಗುತ್ತಿದೆ.ಅದಕ್ಕೆ ಸರಕಾರ ಕಂಬಳವನ್ನು ಪ್ರೋತ್ಸಾಹಿಸಬೇಕು ಎಂದು ಬ್ರಹ್ಮಾವರ ವಲಯ ಬಂಟರ ಸಂಘದ ಮಾಜಿ ಅಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ ಹೇಳಿದರು.

ನಡೂರು ಕಂಬಳಗದ್ದೆ ಮನೆಯಲ್ಲಿ ಶನಿವಾರ ಕಂಬಳ ಮಹೋತ್ಸವವು ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ ಬ್ರಹ್ಮಾವರ ವಲಯದ ಅಧ್ಯಕ್ಷ ರಾಜಾರಾಮ್ ಶೆಟ್ಟಿ ವಹಿಸಿದ್ದರು.

ಪಠೇಲರ ಮನೆ ನಿತ್ಯಾನಂದ ಶೆಟ್ಟಿ ಕಾಡೂರು,ಕಾಡೂರು ಗ್ರಾಮಪಂಚಾಯತ್ ಅಧ್ಯಕ್ಷ ಪಾಂಡುರಂಗ ಶೆಟ್ಟಿ,ಮಾಜಿ ಸದಸ್ಯ ಜಯರಾಮ್ ಶೆಟ್ಟಿ,ಪಠೇಲರ ಮನೆ ಪ್ರಕಾಶ್ ಶೆಟ್ಟಿ ಕಾಡೂರು,ನಿವೃತ್ತ ಶಿಕ್ಷಕ ಅಲೆಯ ರಾಘವೇಂದ್ರ ಉಡುಪ,ಪ್ರಕಾಶ್ ಶೆಟ್ಟಿ ತಡೆಕಲ್ಲು,ಸೀತರಾಮ ಶೆಟ್ಟಿ ಮಂಡಾಡಿಮನೆ ಹೆಬ್ರಿ,ಚಂದ್ರಶೇಖರ ಶೆಟ್ಟಿ ಕುತ್ಪಾಡಿ,ಬಾಲಕೃಷ್ಣ ಶೆಟ್ಟಿ ಪಠೇಲರಮನೆ ನಡೂರು,ಸೀತಾರಾಮ ಹೆಗ್ಡೆ ಕೆಂಜೂರು ನಾಯಕರಮನೆ,ಸುಬ್ಬಣ್ಣ ಶೆಟ್ಟಿ ಮಾರಾಳಿ,ನಡೂರು ಕಂಬಳಗದ್ದೆ ಮನೆಯವರು,ಉದ್ಯಮಿ ಕಾಶೀನಾಥ್ ಶೆಣೈ ಕಜ್ಕೆ,ಸದಾಶಿವ ಶೆಟ್ಟಿ ಕೆಂಜೂರು,ನಡೂರು ಕೆಳಮನೆ ಚಂದ್ರಶೇಖರ ಶೆಟ್ಟಿ,ಸದಾನಂದ ಶೆಟ್ಟಿ ಕೆಂಜೂರು ನಾಯಕರ ಮನೆ,ಕಾಡೂರು ಶ್ರೀನಿವಾಸ ಶೆಟ್ಟಿ ಕೊಲ್ಲಾಪುರ,ಕಂಬಳ ಪ್ರೇಮಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ನಡೂರು ಕಂಬಳಗದ್ದೆ ಮನೆ ಹಿರಿಯರಾದ ಎನ್.ಕರುಣಾಕರ ಶೆಟ್ಟಿ ಕಜ್ಕೆ ಸ್ವಾಗತಿಸಿ,ಎ.ಕೆ.ಶೆಟ್ಟಿ ನಡೂರು ನಿರೂಪಿಸಿ,ನಡೂರು ಕಂಬಳಗದ್ದೆಮನೆ ಮಂದಾರ ಹೆಗ್ಡೆ ವಂದಿಸಿದರು.

ತೀರ್ಪುಗಾರರಾಗಿ ಜಲಂಧರ್ ಶೆಟ್ಟಿ ಮತ್ತು ನಾಗರಾಜ ಶೆಟ್ಟಿ ಬಳಗದವರು ಸಹಕರಿಸಿದರು.

ಓಟದ ಕೋಣಗಳ ಬಹುಮಾನದ ವಿವರ:ಹೋರಿ ಹಗ್ಗ ಸಬ್‌ಜ್ಯೂನಿಯರ್ ಪ್ರಥಮ ರವಿಚಂದ್ರ ದೇವಾಡಿಗ ಬೈಂದೂರು,ದ್ವಿತೀಯ ಪುಂಡ ನಾಯ್ಕ ಸೂರಾಲು,ಹೋರಿ ಹಲಗೆ ಪ್ರಥಮ ವೆಂಕಟರಮಣ ಗಾಣಿಗ ನಾವುಂದ,ದ್ವಿತೀಯ ಸುಕ್ರ ಪೂಜಾರಿ ಕಿರಿಮಂಜೇಶ್ವರ,ಹೋರಿ ಹಗ್ಗ ಸೀನಿಯರ್ ವಿಭಾಗ ಗಂಗಾ ಹೆಬ್ಬಾರ್ ಭಟ್ಕಳ,ದ್ವಿತೀಯ ವರುಣ್ ವಾದಿರಾಜ್ ಗೋಳಿಯಂಗಡಿ,ಹೋರಿ ಹಗ್ಗ ಜ್ಯೂನಿಯರ್ ವಿಭಾಗ ಪ್ರಥಮ ಸಂಜೀವ ಪೂಜಾರಿ ಕಳಿಹಿತ್ಲು,ದ್ವಿತೀಯ ವಿಶ್ವನಾಥ ನಾಯ್ಕ ಮುದ್ದುಮನೆ,ಹಗ್ಗ ಜಗ್ಗಾಟ ಜ್ಯೂನಿಯರ್ ವಿಭಾಗ ನಡೂರು ಫ್ರೆಂಡ್ಸ್,ದ್ವಿತೀಯ ಎಸ್.ಎಂ.ಫ್ರೆಂಡ್ಸ್, ಹಗ್ಗ ಜಗ್ಗಾಟ ಸಿನೀಯರ್ ವಿಭಾಗ ಪ್ರಥಮ ನಡೂರು ಫ್ರೆಂಡ್ಸ್,ದ್ವಿತೀಯ ಮಹಾಲಿಂಗೇಶ್ವರ ಫ್ರೆಂಡ್ಸ್,ಕೆಸರುಗದ್ದೆ ಓಟ ಜ್ಯೂನೀಯರ್ ವಿಭಾಗ ಪ್ರಥಮ ಚಿನ್ಮಯ್,ದ್ವಿತೀಯ ದರ್ಶನ್,ಕೆಸರುಗದ್ದೆ ಓಟ ಸಿನೀಯರ್ ವಿಭಾಗ ಪ್ರಥಮ ಸಂಜೀವ ಪೂಜಾರಿ,ದ್ವಿತೀಯ ಶ್ರೀಕಾಂತ್ ಇವರು ನಗದು ಪುರಸ್ಕಾರ ಮತ್ತು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply