ಕಾಶಿ ವಿಶ್ವನಾಥ ಧಾಮದ ಪುನರುತ್ಥಾನ ಲೋಕಾರ್ಪಣೆಯ ನೇರ ಪ್ರಸಾರ ವೀಕ್ಷಣೆಯ ಉದ್ಘಾಟನೆ

ಉಡುಪಿ : ಕಾಶಿ ವಿಶ್ವನಾಥ ಧಾಮದ ಪುನರುತ್ಥಾನ ಲೋಕಾರ್ಪಣೆಯ ನೇರ ಪ್ರಸಾರ ವೀಕ್ಷಣೆಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯ ಸಂಸದರಾಗಿ ಹಾಗೂ ಪ್ರಧಾನಿಯಾಗಿ ಕಂಡ ಕನಸು ಮತ್ತು ಜನತೆಗೆ ನೀಡಿದ ವಾಗ್ದಾನದಂತೆ ಇಂದು ಅವರ ಕಲ್ಪನೆಯ ಭವ್ಯ ವಾರಣಾಸಿ ರೂಪಾಂತರಗೊಳ್ಳುತ್ತಿದೆ. ಕಾಶಿ ವಿಶ್ವನಾಥಧಾಮ ಲೋಕಾರ್ಪಣೆ ಭಾರತೀಯ ಐತಿಹಾಸಿಕ ಮತ್ತು ಸಾಂಸ್ಕ್ರತಿಕ ಪರಂಪರೆಯ ಗತ ವೈಭವವನ್ನು ಮತ್ತೆ ಸಾದರಪಡಿಸುವಲ್ಲಿ ಹೊಸ ಮೈಲಿಗಲ್ಲಾಗಲಿದೆ. 

ನವ ಭಾರತ ನಿರ್ಮಾಣದ ಪರಿಕಲ್ಪನೆಯ ಪ್ರಮುಖ ಘಟ್ಟ ಇದಾಗಿದ್ದು ಪ್ರತಿಯೊಬ್ಬ ಭಾರತೀಯನ ಮನಸಲ್ಲಿ ಭಾರತೀಯತೆಯ ನೈಜ ರೂಪದ ಅನಾವರಣದ ಬಗ್ಗೆ ಹೊಸ ಆತ್ಮವಿಶ್ವಾಸ ಮತ್ತು ಆಶಾದಾಯಕ ಭಾವನೆ ಮೂಡಿಸುವಲ್ಲಿ ಈ ಸಂದರ್ಭ ಸಾಕ್ಷಿಭೂತವಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಅಭಿಮತ ವ್ಯಕ್ತ ಪಡಿಸಿದರು.

ಡಿ.13ರಂದು ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ಉಡುಪಿ ರಥಬೀದಿ ಪೇಜಾವರ ಮಠದ ಪ್ರಾಂಗಣದಲ್ಲಿ ನಡೆದ, ನವೀಕೃತ ಕಾಶಿ ವಿಶ್ವನಾಥಧಾಮ ‘ಭವ್ಯ ಕಾಶಿ ದಿವ್ಯ ಕಾಶಿ’ ಇದರ ಉದ್ಘಾಟನೆಯ ನೇರ ಪ್ರಸಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಭಾರತೀಯನಿಗೂ ಕಾಶಿ ಒಂದು ಪವಿತ್ರ ಸ್ಥಳವಾಗಿದ್ದು ಮುಂದೆ ಆ ಕ್ಷೇತ್ರ ಸಂದರ್ಶನ ಮಾಡಿದಾಗ ಹೊಸ ಅನುಭವ ಮತ್ತು ಕೃತಾರ್ಥತೆ ಮೂಡಲಿದೆ ಎಂದು ಹೇಳಿದರು. ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ನಗರಸಭಾ ಸದಸ್ಯರಾದ ಮಾನಸ ಸಿ. ಪೈ, ರಜನಿ ಹೆಬ್ಬಾರ್, ಸುಂದರ್ ಕಲ್ಮಾಡಿ, ಜಯಂತಿ ಪೂಜಾರಿ, ರಶ್ಮಿ ಆರ್. ಭಟ್, ಅಶೋಕ್ ನಾಯ್ಕ್, ಗಿರಿಧರ್ ಆಚಾರ್ಯ, ಹರೀಶ್ ಶೆಟ್ಟಿ, ಚಂದ್ರಶೇಖರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಪೆರಂಪಳ್ಳಿ ವಾಸುದೇವ ಭಟ್, ಉಡುಪಿ ನಗರ ಬಿಜೆಪಿ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು.

ಭವ್ಯ ಕಾಶಿ ದಿವ್ಯ ಕಾಶಿ ಕಾರ್ಯಕ್ರಮದ ಉಡುಪಿ ನಗರ ಸಂಚಾಲಕ ಬಾಲಕೃಷ್ಣ ಶೆಟ್ಟಿ ಸಂಯೋಜಿಸಿದರು. ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಅಮೀನ್ ಸ್ವಾಗತಿಸಿ, ಮಂಜುನಾಥ್ ಮಣಿಪಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply