ಶೀಘ್ರದಲ್ಲಿ ಬೆರಳ ತುದಿಯಲ್ಲಿ ಇರಲಿದೆ ವಾಟ್ಸ್ಆ್ಯಪ್ ವೆಬ್ ಭದ್ರತೆ

ವಾಟ್ಸ್ಆ್ಯಪ್ ವೆಬ್ನ ಭದ್ರತೆ ಇನ್ನೂ ನಿಮ್ಮ ಬೆರಳ ತುದಿಯಲ್ಲೇ ಇರಲಿದೆ. ಅಂದರೆ, ಫಿಂಗರ್ ಪ್ರಿಂಟ್ ಸಹಾಯದಲ್ಲಿ ವೆಬ್ ನಲ್ಲಿ ವಾಟ್ಸ್ಆ್ಯಪ್ ಸೆಷನ್ ಸಾಧ್ಯವಾಗಿಸುವಂಥ ವ್ಯವಸ್ಥೆ ನೀಡಲು ಕಂಪನಿ ಮುಂದಾಗಿದೆ.

ಬಳಕೆದಾರರ ಖಾಸಗಿತನಕ್ಕೆ ಹೆಚ್ಚಿನ ಸುರಕ್ಷತೆ ನೀಡುವ ಉದ್ದೇಶದಿಂದ ವಾಟ್ಸ್ಆ್ಯಪ್ ವೆಬ್ ಸಂಪರ್ಕಕ್ಕೆ ಫಿಂಗರ್ ಪ್ರಿಂಟ್ ಮೂಲಕ ಅಥೆಂಟಿಕೇಷನ್ ನೀಡುವಂತಹ ಟೆಕ್ನಾಲಜಿಯನ್ನು ಸಂಸ್ಥೆ ರೂಪಿಸುತ್ತಿದ್ದು, ಸದ್ಯದಲ್ಲೆ ಹೊಸ ಅಪ್ಡೇಟ್ನಲ್ಲಿ ಇದು ಸಿಗಲಿದೆ.

ಸದ್ಯ ವೆಬ್ ಮೂಲಕ ವಾಟ್ಸ್ಆ್ಯಪ್ ಬಳಸುವ ಗ್ರಾಹಕರು ತಮ್ಮ ಮೊಬೈಲ್ಫೋನ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕಿದೆ. ಆದರೆ ಈ ಹೊಸ ಟೆಕ್ನಾಲಜಿಯಲ್ಲಿ ಫಿಂಗರ್ ಪ್ರಿಂಟ್ ಮೂಲಕ ಅಥೆಂಟಿಕೇಷನ್ ನಡೆಯಲಿದೆ. ಇದರಿಂದ ಗ್ರಾಹಕರ ಚಾಟ್ಗೆ ಹೆಚ್ಚಿನ ಸುರಕ್ಷತೆ ಸಿಗಲಿದ್ದು ಗ್ರಾಹಕರ ಗ್ರಹಿಕೆಗೆ ಬರದಂತೆ ಇತರರು ಅವರ ಸೆಷನ್ ಬಳಸದಂಥ ಭದ್ರತೆಯೂ ಇದರಿಂದ ಸಿಗಲಿದೆ ಎಂಬ ಮಾಹಿತಿ ವಾಟ್ಸ್ಆ್ಯಪ್ ಬೀಟಾ ಇನ್ಫೋ ವರದಿ ನೀಡಿದೆ.

 
 
 
 
 
 
 
 
 
 
 

Leave a Reply