ಮತ್ತೆ ಭಾರತಕ್ಕೆ ಆಗಮಿಸಿದ ಮೂರು ರಾಫೆಲ್ ಯುದ್ಧ ವಿಮಾನ 

ಹೊಸದಿಲ್ಲಿ: ಇಂದು ಸಂಜೆ 8:14ಕ್ಕೆ ರಫೇಲ್ ವಿಮಾನದ ಎರಡನೇ ತಂಡ ಭಾರತಕ್ಕೆ ಆಗಮಿಸಿದ್ದು, ಫ್ರಾನ್ಸ್‌ ನಿಂದ ತಡೆ ರಹಿತವಾಗಿ ಹಾರಾಟ ನಡೆಸಿದ 3 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.

ಈ ರಫೇಲ್ ವಿಮಾನಗಳು ಫ್ರಾನ್ಸ್ ನ ಇಸ್ರೆಸ್ʼನಿಂದ ಹೊರಟು ಇಂದು ಬೆಳಗ್ಗೆ ಗುಜರಾತ್ʼನ ಜಾಮ್ ನಗರ್ ತಲುಪಿವೆ. ನಾಳೆ ಹರಿಯಾಣದ ಅಂಬಾಲಾ ವಾಯುನೆಲೆಗೆ ಸೇರಿಕೊಳ್ಳಲಿದ್ದು, ನಂತರ ಅಧಿಕೃತವಾಗಿ ವಾಯುಸೇನೆಗೆ ಹಸ್ತಾಂತರಗೊಳ್ಳಲ್ಲಿವೆ. ಈ ಯುದ್ಧ ವಿಮಾನಗಳು ಫ್ರೆಂಚ್ ವಾಯುಪಡೆಯ ಮಿಡ್ ಏರ್ ರೀಫ್ಯೂಲಿಂಗ್ ವಿಮಾನದೊಂದಿಗೆ ಭಾರತಕ್ಕೆ ಬಂದಿದ್ದವು.

ಇದೀಗ ಮೂರು ಓಮ್ನಿ-ರೋಲ್ ವಿಮಾನಗಳ ಆಗಮನದೊಂದಿಗೆ ಐಎಎಫ್ ಒಟ್ಟು ಎಂಟು ರಫೇಲ್ ಜೆಟ್ʼಗಳನ್ನ ತನ್ನ ಸೇವೆಗೆ ನೀಡಲಿದೆ. ಐದು ರಫೇಲ್ʼಗಳ ಮೊದಲ ತಂಡ ಜುಲೈ 28ರಂದು ಭಾರತಕ್ಕೆ ಬಂದಿತ್ತು. ಸೆಪ್ಟೆಂಬರ್ 10ರಂದು ಅಧಿಕೃತವಾಗಿ ಹರಿಯಾಣದ ಅಂಬಾಲಾ ವಾಯುನೆಲೆಗೆ ಸೇರ್ಪಡೆಯಾಗಿತ್ತು.

36 ಜೆಟ್ ಗಳನ್ನು ಖರೀದಿಸಲು ಭಾರತ ಫ್ರಾನ್ಸ್ ಜತೆ ಒಪ್ಪಂದ ಮಾಡಿಕೊಂಡಿದ್ದು, 2023ರ ಒಳಗೆ ಈ ಎಲ್ಲ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದು ವಾಯುಪಡೆಯ ಬಲವನ್ನು ಹೆಚ್ಚಿಸಲಿವೆ.

 
 
 
 
 
 
 
 
 
 
 

Leave a Reply