ಕಸ್ತೂರ್ಬಾ ಆಸ್ಮತ್ರೆಯಲ್ಲಿ ನೌಕರರ ರಾಜ್ಯ ವಿಮಾ ಯೋಜನೆಯ (ಇಎಸ್ ಐ ) ಕ್ಯಾಸ್ ಲೆಸ್ ವ್ಯವಸ್ಥೆ ಸ್ಥಗಿತ-ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ~ವೆರೋನಿಕಾ ಕರ್ನೆಲಿಯೋ

ಸರಕಾರ ಬಿಲ್ ಪಾವತಿಸದೆ ಇರುವ ಕಾರಣ ಜಿಲ್ಲೆಯ ಪ್ರತಿಷ್ಟಿತ ಕಸ್ತೂರ್ಬಾ ಆಸ್ಮತ್ರೆಯಲ್ಲಿ ನೌಕರರ ರಾಜ್ಯ ವಿಮಾ ಯೋಜನೆಯ (ಇಎಸ್ ಐ ) ಜನರಲ್ ಸ್ಪಶಾಲಿಟಿ ಕ್ಯಾಸ್ ಲೆಸ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದು ಇದರ ಬಗ್ಗೆ ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಕಾರ್ಮಿಕರಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕಿ ವೆರೋನಿಕಾ ಕರ್ನೆಲಿಯೋ ಆಗ್ರಹಿಸಿದ್ದಾರೆ.

ಕಾರ್ಮಿಕರ ಹಣವನ್ನು ಅವರ ಚಿಕಿತ್ಸೆಗೆ ನೀಡದೆ ಸತಾಯಿಸುವುದು ಸರಿಯಲ್ಲ ಇದರಿಂದ ಬಡ ಕಾರ್ಮಿಕ ವರ್ಗ ಸೂಕ್ತ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗದೆ ಇರಲು ಸರ್ಕಾರ ನೇರ ಹೊಣೆಯಾಗ ಬೇಕಾಗುತ್ತದೆ. ಈಗಾಗಲೇ ಮಣಪಾಲ ಕೆ ಎಮ್ ಸಿ ಆಸ್ಪತ್ರೆಯಲ್ಲಿ ಇ ಎಸ್ ಐ ಅಡಿ ಚಿಕಿತ್ಸೆ ಪಡೆದಿರುವವರ ರೂ 10 ಕೋಟಿ ಬಿಲ್ ಬಾಕಿ ಇಟ್ಟಿರುವುದಿಂದ ಕಾರ್ಮಿಕರಿಗೆ ಅವರ ಹಕ್ಕಿನ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ.

ಇದರಿಂದ ಸಾವಿರಾರು ಮಂದಿ ಬೀಡಿ ಕಾರ್ಮಿಕರು, ಗೇರುಬೀಜ ಫ್ಯಾಕ್ಟರಿಗಳ ಕಾರ್ಮಿಕರ ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.
ಆದ್ದರಿಂದ ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಬಾಕಿ ಇರುವ ಬಿಲ್ ಪಾವತಿ ಮಾಡಿ ಕಾರ್ಮಿಕ ವರ್ಗಕ್ಕೆ ನ್ಯಾಯ ಒದಗಿಸಬೇಕು ಹಾಗೂ ಕೆ ಎಮ್ ಸಿ ಆಸ್ಪತ್ರೆಯಲ್ಲಿ ಈ ಸೌಲಭ್ಯವನ್ನು ಮುಂದುವರೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

 
 
 
 
 
 
 
 
 
 
 

Leave a Reply