ಭಾರತವನ್ನು ಮಿನುಗುವ ತಾರೆ ಎಂದು ಜಗತ್ತು ಗುರುತಿಸಿದೆ: ನಿರ್ಮಲಾ ಸೀತಾರಾಮನ್

ನವದೆಹಲಿ: ಈ ವರ್ಷದ ಭಾರತದ ಅಭಿವೃದ್ಧಿ ದರವು 7% ಇದ್ದು, ಪ್ರಮುಖ ಆರ್ಥಿಕತೆಗಳಲ್ಲಿ ಇದು ಉತ್ತಮವೆನಿಸಿದೆ ಎಂದು ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಭಾರತವನ್ನು ಹೊಳೆಯುವ ನಕ್ಷತ್ರ ಎಂದು ಜಗತ್ತೇ ಗುರುತಿಸಿದೆ. ಇಡೀ ಜಗತ್ತು ಭಾರತದ ಸಾಧನೆಯನ್ನು ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ಕಾಲದಲ್ಲಿ ಹೊಗಳುತ್ತಿದೆ. ಜಾಗತಿಕ ಹಣಕಾಸು ಪರಿಸರ ಅತಂತ್ರವಾಗಿರುವಂತೆ ಕಂಡರೂ ಭಾರತದ ಸಾಧನೆ ಗುರುತಿಸುವಂತಿದೆ ಎಂದು ಅವರು ಹೇಳಿದರು.

ಭಾರತವು ಈಗ ಜಿ- 20 ಅಧ್ಯಕ್ಷ ಪೀಠದಲ್ಲಿದ್ದು ಜಾಗತಿಕ ಹಣಕಾಸು ಸ್ಥಿತಿ ಸುಧಾರಿಸುವಲ್ಲಿ ಭಾರತವು ತನ್ನ ಛಾಪು ಮೂಡಿಸುತ್ತದೆ. ಇದು ಭಾರತಕ್ಕೆ ಅತ್ಯುತ್ತಮ ಅವಕಾಶವೂ ಆಗಿದೆ ಎಂದು ಅವರು ಹೇಳಿದರು.

ಸುಸ್ಥಿರ ಆರ್ಥಕಾಭಿವೃದ್ಧಿ ನಮ್ಮದು. ಜಾಗತಿಕ ಸವಾಲಿನ ನಡುವೆಯೂ ಇದು ಸಾಧ್ಯವಾಗಿದೆ. ವಸುದೈವ ಕುಟುಂಬಕಂ ಎನ್ನಲು ನಮ್ಮ ಆರ್ಥಿಕ ಸ್ಫೂರ್ತಿಯೇ ಸಾಕು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

 
 
 
 
 
 
 
 
 
 
 

Leave a Reply