ಪೊಲ್ಯೂಟಿಂಗ್’ ಬದಲು ‘ಪೊಲಿಟಿಕಲ್’ ಎಂದ ಸಚಿವೆ: ಸದನದಲ್ಲಿ ನಗೆ ಬುಗ್ಗೆ

ನವದೆಹಲಿ: ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ’ಪೊಲ್ಯೂಟಿಂಗ್ ವೆಹಿಕಲ್ಸ್ ’ (ಮಾಲಿನ್ಯಕಾರಕ ವಾಹನಗಳು) ಅನ್ನುವ ಬದಲಿಗೆ ’ಪೊಲಿಟಿಕಲ್ ’ ಎಂದು ಹೇಳಿದ ಘಟನೆ ನಡೆದಿದೆ.

ಹಳೆಯ ರಾಜಕೀಯ ವಾಹನಗಳನ್ನು ಬದಲಾಯಿಸಲಾಗುವುದು.  ಕ್ಷಮಿಸಿ ಹಳೆಯ ಮಾಲಿನ್ಯಕಾರಕ ವಾಹನಗಳಿಗೆ ಆದ್ಯತೆ ನೀಡಲಾಗುವುದು..’ ಎನ್ನುತ್ತಾ ಬಜೆಟ್ ಮಂಡನೆ ಮುಂದುವರಿಸಿದರು. ಈ ಸ್ವಾರಸ್ಯಕರ ಘಟನೆ ಇಡೀ ಸದನದಲ್ಲಿ ನಗೆಯುಕ್ಕುವಂತೆ ಮಾಡಿತು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು ನೆಟ್ಟಿಗರು ಇದಕ್ಕೆ ತರಹೇವಾರಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

 
 
 
 
 
 
 
 
 
 
 

Leave a Reply