2021ರ ಜೂನ್ ನಲ್ಲಿ ₹ 92,849 ಕೋಟಿ ಜಿಎಸ್‌ಟಿ ಆದಾಯ ಸಂಗ್ರಹ

ನವದೆಹಲಿ: ಜೂನ್ 2021ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ ₹ 92,849 ಕೋಟಿಯಾಗಿದ್ದು, ಅದರಲ್ಲಿ ಸಿಜಿಎಸ್‌ಟಿ ₹ 16,424 ಕೋಟಿ, ಎಸ್‌ಜಿಎಸ್‌ಟಿ 20,397, ಐಜಿಎ ಎಸ್ ಟಿ ₹ 49,079 ಕೋಟಿ ಮತ್ತು ಸೆಸ್ ₹ 6,949 ಕೋಟಿ ಎಂದು ವಿತ್ತ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

ಜೂನ್ 2021ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ ₹92,849 ಕೋಟಿಯಾಗಿದ್ದು, ಅದರಲ್ಲಿ ಸಿಜಿಎಸ್‌ಟಿ ₹ 16,424 ಕೋಟಿ, ಎಸ್‌ಜಿಎಸ್‌ಟಿ 20,397, ಐಜಿಎ ಎಸ್ ಟಿ ₹ 49,079 ಕೋಟಿ (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ, ₹25,762 ಕೋಟಿ ಸೇರಿದಂತೆ) ಮತ್ತು ಸೆಸ್ ₹6,949 ಕೋಟಿ (ಸರಕುಗಳ ಆಮದಿಗೆ ಸಂಗ್ರಹಿಸಿದ ₹809 ಕೋಟಿ ಸೇರಿದಂತೆ) ಎಂದು ವಿತ್ತ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

ಈ ಅಂಕಿ ಅಂಶವು ಜೂನ್ 5 ರಿಂದ ಜುಲೈ 5 ರವರೆಗಿನ ದೇಶಿ ವಹಿವಾಟಿನಿಂದಾದ ಜಿಎಸ್‌ಟಿ ಸಂಗ್ರಹವನ್ನು ಒಳಗೊಂಡಿದೆ, ಏಕೆಂದರೆ ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಒಟ್ಟು 5 ಕೋಟಿವರೆಗೆ ವಹಿವಾಟು ಹೊಂದಿರುವ ತೆರಿಗೆ ಪಾವತಿದಾರರಿಗೆ 2021 ಜೂನ್ ತಿಂಗಳಿಗೆ ರಿಟರ್ನ್ ಫೈಲಿಂಗ್ 15 ದಿನಗಳ ಕಾಲ ವಿಳಂಬವಾದ ರಿಟರ್ನ್ ಫೈಲಿಂಗ್ ಮೇಲಿನ ಮನ್ನಾ/ಬಡ್ಡಿ ಕಡಿತದ ರೂಪದಲ್ಲಿ ತೆರಿಗೆದಾರರಿಗೆ ವಿವಿಧ ಪರಿಹಾರ ಕ್ರಮಗಳನ್ನು ನೀಡಲಾಗಿತ್ತು.

ಈ ತಿಂಗಳಲ್ಲಿ ಸರ್ಕಾರವು ಸಿಜಿಎಸ್‌ಟಿ ಗೆ ₹ 19,286 ಕೋಟಿ ಮತ್ತು ಐಜಿಎಸ್‌ಟಿಯಿಂದ ಎಸ್‌ಜಿಎಸ್‌ಟಿಗೆ ₹ 16,939 ಕೋಟಿಯನ್ನು ನಿಯಮಿತ ಇತ್ಯರ್ಥವಾಗಿ ಪಾವತಿಸಿದೆ. ಜೂನ್ 2021 ರ ಆದಾಯವು ಕಳೆದ ವರ್ಷ ಇದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ ಪ್ರತಿಶತ 2 ರಷ್ಟು ಹೆಚ್ಚಾಗಿದೆ.

ಸತತ ಎಂಟು ತಿಂಗಳವರೆಗೆ 1 ಲಕ್ಷ ಕೋಟಿ ಗುರುತನ್ನು ದಾಟಿ, ಜೂನ್ 2021ರಲ್ಲಿ ಸಂಗ್ರಹವು ರೂ .1 ಲಕ್ಷ ಕೋಟಿಗಿಂತ ಕಡಿಮೆಯಾಗಿದೆ. ಜೂನ್ 2021 ರ ಜಿಎಸ್‌ಟಿ ಸಂಗ್ರಹವು ಮೇ 2021 ರಲ್ಲಿ ಮಾಡಿದ ವ್ಯವಹಾರಗಳಿಗೆ ಸಂಬಂಧಿಸಿದೆ. ಮೇ 2021 ರಲ್ಲಿ, ಕೋವಿಡ್ ಕಾರಣದಿಂದಾಗಿ ಹೆಚ್ಚಿನ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣ ಅಥವಾ ಭಾಗಶಃ ಲಾಕ್ ಡೌನ್ ಆಗಿದ್ದವು. ಮೇ 2021 ರ ಇ-ವೇ ಬಿಲ್ ದತ್ತಾಂಶವು ತಿಂಗಳಲ್ಲಿ 3.99 ಕೋಟಿ ಇ-ವೇ ಬಿಲ್‌ಗಳನ್ನು ಉತ್ಪಾದಿಸಲಾಗಿದೆ ಎಂದು ತೋರಿಸುತ್ತದೆ. ಏಪ್ರಿಲ್ 2021ರ 5.88 ಕೋಟಿಗೆ ಹೋಲಿಸಿದರೆ ಇದು 30% ಕ್ಕಿಂತ ಕಡಿಮೆಯಾಗಿದೆ.

 
 
 
 
 
 
 
 
 
 
 

Leave a Reply