ನೂತನ ಸಂಸತ್‌ನಲ್ಲಿ ಮೊದಲ ಬಾರಿಗೆ ಮಂಡನೆಯಾದ ಕೇಂದ್ರ ಬಜೆಟ್‌ನ ಮುಖ್ಯಾಂಶಗಳು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 6ನೇ ಬಜೆಟ್ ಇದು. ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ಈ ಬಾರಿಯ ಬಜೆಟ್ ಭಾರೀ ಮಹತ್ವ ಪಡೆದುಕೊಂಡಿದೆ. ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಹಾಗೂ ನೂತನ ಸಂಸತ್‌ನಲ್ಲಿ ಮೊದಲ ಬಾರಿಗೆ ಮಂಡನೆಯಾದ ಕೇಂದ್ರ ಬಜೆಟ್‌ನ ಮುಖ್ಯಾಂಶಗಳು ಇಂತಿವೆ:

  1. ಆದಾಯ ತೆರಿಗೆ ಮಿತಿಯಲ್ಲಿ ಈ ವರ್ಷ ಯಾವುದೇ ಬದಲಾವಣೆ ಇಲ್ಲ
  2. ಕಳೆದ ವರ್ಷ ಘೋಷಿಸಿದ ರೀತಿ 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ
  3. ಆದಾಯ ತೆರಿಗೆ ನೀತಿಯಲ್ಲೂ ಯಾವುದೇ ಬದಲಾವಣೆ ಇಲ್ಲ
  4. ಹೊಸ ತೆರಿಗೆ ಪದ್ದತಿ ಹಾಗೂ ಹಳೇ ತೆರಿಗೆ ಪದ್ದತಿ ಹಾಗೆಯೇ ಇರಲಿದೆ
  5. ಲಕ್ಷ ದ್ವೀಪ ಸೇರಿದಂತೆ ಹಲವೆಡೆ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ
  6. ಎಲೆಕ್ಟ್ರಿಕ್ ವಾಹನ ಉತ್ಪಾದನೆ, ಚಾರ್ಜಿಂಗ್ ಸ್ಟೇಷನ್ ಹೆಚ್ಚಳಕ್ಕೆ ಆದ್ಯತೆ
  7. ದೇಶದ ಹಲವು ನಗರಗಳಲ್ಲಿ ಮೆಟ್ರೋ ರೈಲು ಮಾರ್ಗ ವಿಸ್ತರಣೆಗೆ ಅನುದಾನ
  8. 40 ಸಾವಿರ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಾಗಿ ಪರಿವರ್ತನೆ
  9. ಉಡಾನ್ ಯೋಜನೆಗೆ 517 ಹೊಸ ಮಾರ್ಗ – ಸಣ್ಣ ನಗರಗಳಿಗೂ ವಿಮಾನ
  10. ರಕ್ಷಣಾ ಇಲಾಖೆಗೆ ಬರೋಬ್ಬರಿ 11 ಲಕ್ಷ ಕೋಟಿ ರೂ. ಮೀಸಲು
  11. ದೇಶದ ಒಂದು ಕೋಟಿ ಮಹಿಳೆಯರು ‘ಲಕ್ಷಾಧಿಪತಿ ದೀದಿ’ ಆಗಲಿದ್ದಾರೆ
  12. ಆಶಾ, ಅಂಗನವಾಡಿ ಕಾರ್ಯಕರ್ತರಿಗೂ ಆಯುಷ್ಮಾನ್ ಭಾರತ ಯೋಜನೆ
  13. ‘ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಹಾಗೂ ಜೈ ಅನುಸಂಧಾನ್’ ಮೋದಿ ಸರ್ಕಾರದ ಮಂತ್ರ
  14. ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಸೌರ ವಿದ್ಯುತ್
  15. ಮುಂದಿನ 5 ವರ್ಷಗಳಲ್ಲಿ 3 ಕೋಟಿ ಹೊಸ ಮನೆ ನಿರ್ಮಾಣ
  16. 2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ
  17. ಜಿಡಿಪಿಗೆ ಹೊಸ ಪರಿಭಾಷೆ ನೀಡಿದ ಕೇಂದ್ರ ಹಣಕಾಸು ಸಚಿವೆ. GDG ಎಂದರೆ – ಬೆಳವಣಿಗೆ, ಅಭಿವೃದ್ದಿ ಹಾಗೂ ಪ್ರಗತಿ (Growth – Development – Progress )
  18. ಜಾಗತಿಕವಾಗಿ ಆರ್ಥಿಕ ಸಂಕಷ್ಟ ಸ್ಥಿತಿ ಇದ್ದರೂ ಭಾರತದ ಆರ್ಥಿಕತೆ ಸ್ಥಿರವಾಗಿದೆ
  19. 10 ವರ್ಷಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಅಗಾಧ ಬೆಳವಣಿಗೆ
  20. ‘ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್’ ನಮ್ಮ ಧ್ಯೇಯ
  21. ದೇಶದ 80 ಕೋಟಿ ಜನರಿಗೆ ಉಚಿತ ಅಕ್ಕಿ ವಿತರಣೆ
  22. ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಸಾರಥ್ಯದ ಸರ್ಕಾರದಲ್ಲಿ ಭಾರತದ ಆರ್ಥಿಕಾಭಿವೃದ್ದಿ
  23. ನಾವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದೇವೆ
  24. ಜನ್‌ ಧನ್ ಖಾತೆ ಮೂಲಕ ಜನರಿಗೆ ನೇರ ಲಾಭ ವರ್ಗಾವಣೆ ಯೋಜನೆ ಜಾರಿ ಮಾಡಲಾಗಿದೆ
  25. ಯುವಕರು, ಬಡವರು, ಕೃಷಿಕರು ಹಾಗೂ ಮಹಿಳೆಯರು – ಈ ನಾಲ್ಕು ವರ್ಗಗಳನ್ನು ಗುರಿಯಾಗಿಸಿ ಕಾರ್ಯಕ್ರಮ
  26. ಕುಶಲ ಕರ್ಮಿಗಳಿಗಾಗಿ ವಿಶೇಷ ಯೋಜನೆ ರೂಪಿಸಿರುವ ಕೇಂದ್ರ ಸರ್ಕಾರ
 
 
 
 
 
 
 
 
 
 
 

Leave a Reply