ಡಿಜಿಟಲ್ ಮಾಧ್ಯಮ ನಿಯಂತ್ರಿಸಿ : ಸುಪ್ರೀಂ‌ಗೆ ಕೇಂದ್ರದಿಂದ ಅಫಿಡವಿಟ್!

ಹೊಸದಿಲ್ಲಿ: ಎಲೆಕ್ಟ್ರಾನಿಕ್ ಮಾಧ್ಯಮಕ್ಕಿಂತ ಮೊದಲು ಡಿಜಿಟಲ್ ಮಾಧ್ಯಮಕ್ಕೆ ನಿಯಮ ಗಳನ್ನ ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಮೂಲಕ ಕೇಂದ್ರ ಹೇಳಿದೆ.


ಸುದರ್ಶನ್ ಟಿವಿ ಪ್ರಕರಣಕ್ಕೆ ಸಂಬಂಧಿಸಿ ದಂತೆ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಈ ಕುರಿತು ಪ್ರಸ್ತಾಪಿಸಿದೆ. ಮುದ್ರಣ ಮತ್ತು ಎಲೆಕ್ಟ್ರಾ ನಿಕ್ ಮಾಧ್ಯಮಗಳಿಗೆ ಈಗಾಗಲೇ ಸಾಕಷ್ಟು ನೀತಿ ನಿಯಮಗಳ ಚೌಕಟ್ಟುಗಳಿವೆ.

ಸುಪ್ರೀಂ ಕೋರ್ಟ್‌ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವಂತಹ ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ, ತ್ವರಿತಿಗತಿಯಲ್ಲಿ ಮಾಹಿತಿ ಹಂಚುವ ಡಿಜಿಟಲ್ ಮಾಧ್ಯಮ ಗಳಿಗೆ ಮೊದಲು ನಿರ್ಬಂಧ ವಿಧಿಸಬೇಕಿದೆ ಎಂದು ತಿಳಿಸಿದೆ. ಸುಪ್ರೀಂಕೋರ್ಟ್ ಮಾನ ದಂಡವನ್ನ ನಿಗದಿಪಡಿಸಲು ನಿರ್ಧರಿಸಿದ್ದರೆ, ಗಂಭೀರತೆ ಮತ್ತು ಸಾಮರ್ಥ್ಯವನ್ನ ಗಮನಿಸಿ ಡಿಜಿಟಲ್ ಮಾಧ್ಯಮಕ್ಕೆ ನಿಯಮಗಳನ್ನ ಸಿದ್ಧಪಡಿಸಬೇಕು.

ಯಾಕಂದ್ರೆ, ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಕ್ಕೆ ಈಗಾಗಲೇ ಮಾರ್ಗ ಸೂಚಿಗಳು ಮತ್ತು ಶಾಸನಗಳು ಅಸ್ತಿತ್ವದ ಲ್ಲಿವೆ ಎಂದಿದೆ. ಈಗಾಗಲೇ ಶಾಸನಬದ್ಧ ನಿಬಂಧನೆಗಳು ಮತ್ತು ತೀರ್ಪುಗಳಿಂದ ‘ವಾಕ್ ಸ್ವಾತಂತ್ರ್ಯ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮವನ್ನು ಸಮತೋಲನ ಗೊಳಿಸುವ ವಿಷಯವನ್ನ ನಿಯಂತ್ರಿಸಲಾಗಿದೆ

ಹಾಗೂ ಕೋರ್ಟಿಗೆ ಸಲ್ಲಿಸದ ಅರ್ಜಿಯು ಕೇವಲ ಒಂದು ಸುದ್ದಿ ವಾಹಿನಿಗೆ ಸೀಮಿತ ವಾಗಿರುವುದರಿಂದ ಮಾಧ್ಯಮಗಳಿಗೆ ಮಾರ್ಗ ಸೂಚಿಗಳನ್ನ ನೀಡಲು ಸಮಿತಿಯನ್ನ ರಚಿಸು ವುದು ಬೇಡ ಎಂದು ಸುಪ್ರೀಂ ಕೋರ್ಟ್‌ಗೆ ಸರ್ಕಾರ ವಿನಂತಿಸಿದೆ. ‘ಡಿಜಿಟಲ್‌ ಮಾಧ್ಯಮ ಗಳು ವಿಶ್ವದ ಮೂಲೆ ಮೂಲೆಗೂ ಕ್ಷಣಾರ್ಧ ದಲ್ಲಿ ತಲುಪಬಲ್ಲವು.

ಇವುಗಳ ದುರ್ಬಳಕೆಯಿಂದ ಗಂಭೀರ ಪರಿಣಾಮಗಳೂ ಆಗುತ್ತವೆ. ಇದನ್ನು ಪರಿಗಣಿಸಿ, ಆದ್ಯತೆ ಮೇರೆಗೆ ಡಿಜಿಟಲ್ ಮಾಧ್ಯಮಗಳಿಗೆ ನಿಯಂತ್ರಣ ವಿಧಿಸ ಬಹುದು ಎಂದು ಕೇಂದ್ರ ಸರಕಾರ ಅಭಿಪ್ರಾಯ ಪಟ್ಟಿದೆ. ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಒಂದು ಬಾರಿ ಮಾತ್ರ ಸುದ್ದಿಗಳು ಮುದ್ರಿತ ಅಥವಾ ಪ್ರಸಾರವಾಗುತ್ತವೆ.

ಆದರೆ ಡಿಜಿಟಲ್ ಮಾಧ್ಯಮಗಳಲ್ಲಿ ಮಾಹಿತಿ ತ್ವರಿತಗತಿಯಾಗಿ ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ.

 
 
 
 
 
 
 
 
 
 
 

Leave a Reply