ಶಿಕ್ಷಕರಿಗೇ ಶಿಸ್ತು ಕಲಿಸಿದ ಡಾ| ಪ.ನಾರಾಯಣ ರಾವ್

ಉಡುಪಿ ಬಳಕೆದಾರರ ವೇದಿಕೆಯ ಸಂಸ್ಥಾಪಕ ದಿ.ಡಾ:ಪ.ನಾರಾಯಣ ರಾವ್ ಅವರ ಸಂಸ್ಮರಣಾ ದಿನಾಚರಣೆಯನ್ನು ಇತ್ತೀಚೆಗೆ ಉಡುಪಿ ಬಳಕೆದಾರರ ವೇದಿಕೆಯ ಸಭಾಂಗಣದಲ್ಲಿ ನೆರವೇರಿಸಲಾಯಿತು. ಡಾ| ರಾವ್‌ರವರ ಭಾವಚಿತ್ರಕ್ಕೆ ವೇದಿಕೆಯ ವಿಶ್ವಸ್ಥರು ಪುಷ್ಪ ನಮನ ಸಲ್ಲಿಸಿದರು.

ಅಸಂಖ್ಯ ನೊಂದ ಬಳಕೆದಾರರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸೂಕ್ತ ಪರಿಹಾರೋಪಾಯಗಳನ್ನು ಸೂಚಿಸುತ್ತಿದ್ದ ಡಾ:ರಾವ್ ಅವರು, ಕಾಲೇಜಿನಲ್ಲಿ ತಾವು ಪ್ರಾಂಶುಪಾಲರಾಗಿದ್ದಾಗ ಶಿಕ್ಷಕರಿಗೇ ಶಿಸ್ತನ್ನು ಕಲಿಸಿದ ಮಹಾನುಭಾವರು ಎಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ:ಎ.ಪಿ.ಭಟ್ ವಿಶ್ಲೇಷಿಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ:ಬಿ.ಎಂ.ಹೆಗಡೆಯವರು ತಮ್ಮ ನೆನಪಿನ ಮೂಟೆಯಿಂದ ಡಾ:ರಾವ್ ಅವರ ಒಡನಾಟದಲ್ಲಿ ಅವರ ಅನೇಕ ಸಾಧನೆಗಳನ್ನು ಬಣ್ಣಿಸಿದರು. ಡಾ:ರಾವ್ ಅವರ ಬಗ್ಗೆ ಶಂಕರ ಪೂಜಾರಿ ಕಟಪಾಡಿ, ವೇದಿಕೆಯ ವಿಶ್ವಸ್ಥ ಎನ್.ರಾಮ ಭಟ್ ತಮ್ಮ ಅನುಭವಗಳನ್ನು ಹಂಚಿಕೊAಡರು.
ವೇದಿಕೆಯ ಸಂಚಾಲಕ ಯು.ಜಿ.ಕಾಮತ್ ಸ್ವಾಗತಿಸಿ, ವಿಶ್ವಸ್ಥ ಟಿ.ಚಂದ್ರಶೇಖರ್ ವಂದಿಸಿದರು. ವಿಶ್ವಸ್ಥೆ ಲಕ್ಷ್ಮೀ ಬಾಯಿಯವರು ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply