ನಂದಿನಿ’ ಕನ್ನಡಿಗರ ಜೀವನಾಡಿ, ಅದರ ತಂಟೆಗೆ ಬಂದರೆ ಕರ್ನಾಟಕದಲ್ಲಿ ಬಿಜೆಪಿ ಇಲ್ಲದಂತೆ ಆಗುತ್ತದೆ~ ಡಾ ರವಿ ಶೆಟ್ಟಿ ಬೈಂದೂರು.

ಬೆಂಗಳೂರು: `ನಂದಿನಿ’ ಕನ್ನಡಿಗರ ಜೀವನಾಡಿ. ಅದರ ತಂಟೆಗೆ ಬಂದರೆ ಕರ್ನಾಟಕದಲ್ಲಿ ಬಿಜೆಪಿ ಇದಲ್ಲದಂತೆ ಆಗುತ್ತದೆ. ಮಂಡ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ಕರ್ನಾಟಕವನ್ನು ಕೇಂದ್ರಾಡಳಿತ ಮಾಡುವ ಹುನ್ನಾರದಲ್ಲಿರುವಂತೆ ಕಾಣುತ್ತಿದ್ದು ಹಾಗೂ ಆರ್ಥಿಕ, ಕೈಗಾರಿಕಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ನಮ್ಮ ರಾಜ್ಯವನ್ನು ಹತ್ತಿಕ್ಕುವ ಇವರ ಪ್ರಯತ್ನ ಯಶಸ್ಸು ಕಾಣದು ಇಂತಹ ಪ್ರಯತ್ನ ಮಾಡಿದರೆ ನಾಡಿನ ಜನತೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ ರವಿ ಶೆಟ್ಟಿ ಬೈಂದೂರು  ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಗುಜರಾತ್‌ನ `ಅಮೂಲ್’ ಜತೆ ಕರ್ನಾಟಕದ `ನಂದಿನಿ’ಯನ್ನು (ಕೆಎಂಎಫ್) ಒಂದುಗೂಡಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ವಿರೋಧಿಸಿ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆಲ, ಜಲ, ನುಡಿಯ ಬಗ್ಗೆ ಕನ್ನಡ ಮತ್ತು ಕರ್ನಾಟಕದ ಮೇಲೆ ಸದಾ ಪ್ರಹಾರ ನಡೆಸುತ್ತಿರುವ ಡಬಲ್ ಇಂಜಿನ್ ಸರ್ಕಾರ ಕನ್ನಡಿಗರ ವಿರುದ್ಧ ತನ್ನ ರಕ್ಕಸ ನೀತಿಗಳನ್ನು ಮುಂದುವರಿಸಿದೆ.

ಈಗ ಕರ್ನಾಟಕದ ಹಾಲಿನಲ್ಲೂ ಗುಜರಾತಿನ ಹುಳಿ ಹಿಂಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊರಟಿದ್ದಾರೆ ಇದನ್ನು ಸ್ವಾಭಿಮಾನಿ ಕನ್ನಡಿಗರು ಸಹಿಸುವುದಿಲ್ಲ ಇದಕ್ಕೆ ಸರ್ಕಾರ ತಕ್ಕ ಪ್ರತಿಫಲವನ್ನು ಅನುಭವಿಸಲೇಬೇಕು ಎಂದು ಅಭಿಪ್ರಾಯಪಟ್ಟರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶಕ್ಕೇ ಮಾದರಿಯಾಗಿದ್ದ ಕರ್ನಾಟಕವನ್ನು ಉತ್ತರ ಭಾರತದ ಬ್ಯಾಂಕ್ ಗಳಿಗೆ ಅಡಿಯಾಳನ್ನಾಗಿಸಿ, ಹಿಂದಿ ಭಾಷಿಗರ ಉದ್ಧಾರಕ್ಕಾಗಿ ಕನ್ನಡಿಗರ ಅನ್ನ ಕಸಿದುಕೊಂಡ ಸರ್ಕಾರ, ಇಂದಿನವರೆಗೂ ಬ್ಯಾಂಕಿಂಗ್ ಸೇವೆಯನ್ನು ಸರಿಯಾಗಿ ಕನ್ನಡದಲ್ಲಿ ನೀಡದೇ ಜನರಿಗೆ ಸರಿಯಾದ ವ್ಯವಸ್ಥೆ ಮಾಡದೆ ಅವ್ಯವಸ್ಥೆ ಯನ್ನು ಸೃಷ್ಟಿ ಮಾಡಿದೆ. ಈಗ ನಂದಿನಿಯನ್ನು ಹೊಡೆದುಕೊಂಡು ಹೋಗಲು ಹಿಡನ್ ಅಜೆಂಡಾ ರೂಪಿಸಿದಂತಿದೆ.

ಅಮಿತ್ ಶಾ ರವರು ಪ್ರತಿ ಬಾರಿ ಕರ್ನಾಟಕಕ್ಕೆ ಬಂದಾವಾಗಲು ಕರ್ನಾಟಕದ ಪ್ರತಿಷ್ಠಿತ ಬ್ಯಾಂಕ್ ಸಹಕಾರ ಇಲಾಖೆ, ಒಂದರ ಮೇಲೊಂದಂತೆ ಕಣ್ಣ ಹಾಯಿಸುತ್ತಿದ್ದು ಕರ್ನಾಟಕಕ್ಕೆ ಇವರ ಭೇಟಿ ಕನ್ನಡಿಗರಿಗೆ ದುಗುಡ ಸೃಷ್ಟಿ ಮಾಡುತ್ತಿದ್ದು ನಮ್ಮ ನಾಡು ಎಂದಿಗೂ ಗುಜರಾತಿನ ಅಡಿಯಾಳು ಆಗಲು ಸ್ವಾಭಿಮಾನಿ ಕನ್ನಡಿಗರು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಮುಲ್ ಜತೆ ನಂದಿನಿ ವಿಲೀನ ಸಾಧ್ಯವಿಲ್ಲ. ನಮ್ಮ ರೈತರ ಅನ್ನ ಕಸಿಯುವ ಕೆಲಸವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ನಮ್ಮ ಸ್ವಾಭಿಮಾನಿ ರೈತರು, ಗುಜರಾತಿ ಸರ್ಕಾರಗಳ ಮುಂದೆ ಕೈಕಟ್ಟಿ ನಿಲ್ಲುವ ಸನ್ನಿವೇಶವನ್ನು ನಾವು ಸಹಿಸಲಾರೆವು. ಕೆಎಂಎಫ್ ಕನ್ನಡಿಗರ ಜೀವನಾಡಿ ಮಾತ್ರವಲ್ಲ, ಸಮಸ್ತ ಕನ್ನಡಿಗರ ಆಸ್ತಿ ಮತ್ತು ಅಸ್ಮಿತೆ. ಅಮಿತ್ ಶಾ ಅವರು ಇದೆಲ್ಲವನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ತಿಂಗಳ 7ನೇ ತಾರೀಕು ಫ್ರೀಡಂ ಪಾರ್ಕಿನಲ್ಲಿ ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟ ಹಾಗೂ ರೈತರು ಮತ್ತು ಹಲವಾರು ಎಲ್ಲ ರೀತಿಯ ಸಂಘಟನೆಗಳ ನೇತೃತ್ವದಲ್ಲಿ ನಂದಿನಿ ಮತ್ತು ಅಮೂಲ್ ವಿಲೀನ ಪದ್ದತಿಯನ್ನು ವಿರೋಧಿಸಿ ಹಸುಗಳನ್ನು ಅಲ್ಲಿಗೆ ತಂದು ಹಾಲು ಕರೆದು ವಿನುತನ ರೀತಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಒಕ್ಕೂಟದ ರಾಜ್ಯ ಕಾರ್ಯಧ್ಯಕ್ಷರು ಆಗಿರುವ ರವಿ ಶೆಟ್ಟಿ ಬೈಂದೂರ್ ತಿಳಿಸಿದರು.

ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಮಿಲ್ಕ್ ಡೈರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಮಿತ್ ಶಾ, ಗುಜರಾತ್‌ನ `ಅಮೂಲ್’ ಜತೆ ಕರ್ನಾಟಕದ `ನಂದಿನಿ’ಯನ್ನು ಒಂದುಗೂಡಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳ ಲಾಗುವುದು ಎಂದು ಹೇಳಿದ್ದರು.

 
 
 
 
 
 
 
 
 
 
 

Leave a Reply