ಮಂಡ್ಯದ ಮುಸ್ಕಾನ್ ಳನ್ನು ಹಾಡಿ ಹೊಗಳಿದ ಆಲ್ ಖೈದಾ

ಮಂಡ್ಯದಲ್ಲಿ ಮೊಳಗಿದ ಜೈ ಶ್ರೀರಾಮ್ ಎಂಬ ಘೋಷಣೆಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಎಂದು ಕೂಗಿದ ಮುಸ್ಕಾನ್ ಮುಸ್ಲಿಂ ಸಮುದಾಯಕ್ಕೆ ರಾತ್ರೋ ರಾತ್ರಿ ಹೀರೋ ಆದಳು. ಹಲವು ಮುಸ್ಲಿಂ ಸಂಘಟನೆಗಳು ಲಕ್ಷ ಲಕ್ಷ ಬಹುಮಾನ ನೀಡಿತ್ತು. ಅದರ ಮುಂದಿನ ಸರದಿಯಾಗಿ ವಿಶ್ವದ ನಂಬರ್ ಒನ್ ಉಗ್ರ ಸಂಘಟನೆ ಆಲ್ ಖೈದಾ ಮುಸ್ಕಾನ್ ಳನ್ನು ಹಾಡಿ ಹೊಗಳಿದೆ.

ಆಲ್ ಖೈದಾ ಮುಖ್ಯಸ್ಥ ಅಮನ್-ಅಲ್-ಜವಾಹಿರಿಯು ಮುಸ್ಕಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಈ ಸಂಬಂಧ ಆಲ್ ಖೈದಾ ಮುಖವಾಣಿ ಅಸ್-ಸಾಹಬ್ ಎಂಬ ಸೋಷಿಯಲ್ ಮೀಡಿಯಾದಲ್ಲಿ ಅಮನ್-ಅಲ್- ಜವಾಹಿರಿ ಮಾತನಾಡಿದ್ದಾನೆ. 9 ನಿಮಿಷಗಳ ವಿಡಿಯೋದಲ್ಲಿ “ಮುಸ್ಕಾನ್ ಮೊಳಗಿಸಿರುವ ಘೋಷಣೆ ಮೆಚ್ಚುಗೆ ಪಡುವಂತದ್ದು, ಅವಳು ಜಿಹಾದ್ ಚೈತನ್ಯವನ್ನು ಹುರಿದುಂಬಿಸಿದ್ದಾಳೆ. ಮುಸ್ಕಾನ್ ಳ ಘೋಷಣೆ ನನ್ನಲ್ಲಿ ಸ್ಪೂರ್ತಿ ತುಂಬಿದೆ. ಆಕೆಗಾಗಿ ನಾನು ಕೆಲವು ಸಾಲುಗಳ ಕವಿತೆ ಬರೆದಿದ್ದೇನೆ ಎಂದು ಹೇಳಿದ್ದಾನೆ.

“ಆ ಕವನಗಳ ಸಾಲುಗಳನ್ನು ಹೇಳುವ ಮೂಲಕ ಅವಳಿಗೆ ಇದೇ ನನ್ನ ಕೊಡುಗೆಯಾಗಿದೆ. ಸಹೋದರಿ ಇದನ್ನು ಸ್ವೀಕರಿಸುತ್ತಾಳೆ ಎಂದು ನಂಬಿದ್ದೇನೆ” ಎಂದು ಅಮನ್-ಅಲ್-ಜವಾಹರಿ ಹೇಳಿದ್ದಾನೆ. ಈ ಮೂಲಕ ಮುಸ್ಕಾನ್ ಕರ್ನಾಟಕ, ಭಾರತ ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರಖ್ಯಾತಿ ಗಳಿಸಿದ್ದಾಳೆ.

ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಮಸ್ಕಾನ್ ಗೆ ಆಲ್ ಖೈದಾ ಬಗ್ಗೆ ಗೊತ್ತಿಲ್ಲ. ಅವಳು ಪಾಪದ ಹುಡುಗಿ. ಕರ್ನಾಟಕಕ್ಕೂ ಆಲ್ ಖೈದಾಗೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ತಾಕತ್ತಿದ್ದರೆ ಮುಸ್ಕಾನ್ ಬಗ್ಗೆ ಮಾತನಾಡಿರುವ ಆಲ್ ಖೈದಾ ಉಗ್ರನನ್ನು ಬಂಧಿಸಲಿ ಎಂದು ಇಬ್ರಾಹಿಂ ಸವಾಲು ಹಾಕಿದರು.

Leave a Reply