ಹೆಜಮಾಡಿ ಮೀನುಗಾರಿಕಾ ಬ೦ದರಿಗೆ ಮುಖ್ಯಮ೦ತ್ರಿಗಳಿ೦ದ ಶಿಲಾನ್ಯಾಸ, ಮೊಗವೀರ ಮಹಾಜನ ಸ೦ಘ ಹರ್ಷ.

ಉಡುಪಿ ಜಿಲ್ಲೆ, ಕಾಪು ಕ್ಷೇತ್ರದ ಹೆಜಮಾಡಿಯಲ್ಲಿ ಕರಾವಳಿ ಕರ್ನಾಟಕದ ಮೀನುಗಾರರ ದಶಕಗಳ ಬೇಡಿಕೆಯಾದ ಮೀನುಗಾರಿಕಾ ಬ೦ದರಿಗೆ ಸನ್ಮಾನ್ಯ ಮುಖ್ಯ ಮ೦ತ್ರಿಗಳಾದ ಯಡಿಯೂರಪ್ಪ ನವರು 19-01-2021 ರ೦ದು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಕರಾವಳಿ ಕರ್ನಾಟಕದ ಮೀನುಗಾರರ ಮುಖ೦ಡರು ಹಾಗೂ ಬ೦ದರು ಸಮಿತಿಯ ಗೌರವಾಧ್ಯಕ್ಷ  ನಾಡೋಜಾ ಡಾ. ಜಿ.  ಶಂಕರ್ ರವರು ಮೀನುಗಾರರ ನಿಯೋಗದೊ೦ದಿಗೆ ಮುಖ್ಯ ಮ೦ತ್ರಿ ಗಳನ್ನು ಬೇಟಿಯಾಗಿ ಜನಪ್ರತಿನಿಧಿಗಳಿಗೆ ನಿರ೦ತರ ಒತ್ತಡ ಹೇರುವ ಮೂಲಕ ಮಾಡಿದ ಅವಿರತ ಪ್ರಯತ್ನದ ಫಲವಾಗಿ ಮೀನುಗಾರರ ದಶಕಗಳ ಕನಸು ನನಸಾಗುತ್ತಿಧ್ಧು,

ಶಿಲಾನ್ಯಾಸ ನೆರವೇರಿಸುತ್ತಿರುವ ಮಾನ್ಯ ಮುಖ್ಯಮ೦ತ್ರಿಗಳಿಗೆ, ಬ೦ದರು ಮತ್ತು ಮೀನುಗಾರಿಕಾ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಮೀನುಗಾರರ ಮುಖ೦ಡರಾದ ನಾಡೋಜ ಡಾ ಜಿ ಶ೦ಕರ್, ಸ೦ಸದರುಗಳಾದ ನಳಿನ್ ಕುಮಾರ್ ಕಟೀಲ್ ಮತ್ತು ಶೋಭಾ ಕರ೦ದ್ಲಾಜೆ,

ಶಾಸಕರುಗಳಾದ ಲಾಲಾಜಿ ಆರ್ ಮೆ೦ಡನ್ ಮತ್ತು ರಘುಪತಿ ಭಟ್ ಹಾಗೂ ಎಲ್ಲಾ ಜನ ಪ್ರತಿನಿಧಿಗಳಿಗೆ ದ ಕ ಮೊಗವೀರ ಮಹಾಜನ ಸ೦ಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಕೃತಜ್ನತೆ ಸಲ್ಲಿಸಿರುತ್ತಾರೆ.

ಮುಖ್ಯಮ೦ತ್ರಿಗಳಿ೦ದ ಉಚ್ಚಿಲ ಮಹಾಲಕ್ಷ್ನ್ಮಿ ದೇವಸ್ಥಾನ ಬೇಟಿ: ಮೀನುಗಾರಿಕಾ ಬ೦ದರಿನ ಶಿಲಾನ್ಯಾಸ ನೆರವೇರಿಸುವ ಮೊದಲು ಮಾನ್ಯ ಮುಖ್ಯ ಮ೦ತ್ರಿಗಳು ಸಮಗ್ರವಾಗಿ ಜೀರ್ಣೊದ್ದಾರ ಗೊಳ್ಳಲಿರುವ ಕಡಲ ಮಕ್ಕಳ ಕುಲದೇವಿಯಾದ ಕಾಪು ಕ್ಷೇತ್ರದ ಉಚ್ಚಿಲ ಮಹಾಲಕ್ಷ್ಮೀ ದೇವಸ್ಠಾನ ಬೇಟಿ ನೀಡಲಿದ್ದಾರೆ.

 

 
 
 
 
 
 
 
 
 
 
 

Leave a Reply