ಧಾರಾಕಾರ ಮಳೆಯಿಂದಾಗಿ  ಶಿವಮೊಗ್ಗ -ಮಂಗಳೂರು ಹೆದ್ದಾರಿ ಬಂದ್

ಶಿವಮೊಗ್ಗ : ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಿವಮೊಗ್ಗ-ಮಂಗಳೂರು ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ತೀರ್ಥಹಳ್ಳಿ ಸಮೀಪದ ಶಿವರಾಜಪುರದ ಬಳಿ ಹಳ್ಳಕ್ಕೆ ಹಿಮ್ಮುಖವಾಗಿ ನುಗ್ಗಿದ‌ ತುಂಗಾ ನದಿ ನೀರು, ಸೇತುವೆ ಮೇಲೆ ಕೂಡ ಹರಿಯಲಾರಂಭಿಸಿದೆ.
ಹೀಗಾಗಿ‌ ಶಿವರಾಜಪುರದ ಬಳಿಯ ಸೇತುವೆಯಲ್ಲಿ ನಾಲ್ಕು ಅಡಿಗೂ ಹೆಚ್ಚಿನ ಮಟ್ಟದಲ್ಲಿ ನೀರು ಹರಿಯುತ್ತಿದೆ. ಇದೇ ಸೇತುವೆ ಮೇಲೆ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಹೋದ ಲಾರಿಯೊಂದು ನೀರಿನಲ್ಲಿ ಸಿಲುಕಿಕೊಂಡಿದ್ದು, ತುಂಗಾ ನದಿ ನೀರಿನ ರಭಸಕ್ಕೆ ಲಾರಿಯನ್ನು ಅಲ್ಲೇ ನಿಲ್ಲಿಸಿ ಚಾಲಕನು ಸುರಕ್ಷಿತ ಸ್ಥಳಕ್ಕೆ ಆಗಮಿಸಿದ್ದಾರೆ. ಮಳೆ ಮುಂದುವರಿದಲ್ಲಿ ನೀರಿನಲ್ಲಿ ಲಾರಿ ಕೊಚ್ಚಿ ಹೋಗುವ ಸಾಧ್ಯತೆಯಿದೆ.
ಅಲ್ಲದೆ ಯಾವುದಾದರೂ ಬೇರೆ ವಾಹನ ಸೇತುವೆ ಮೇಲೆ ಸಾಗಲು ಯತ್ನಿಸಿದರೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವುದರಿಂದ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. 
ಪರಿಣಾಮವಾಗಿ ಶಿವಮೊಗ್ಗ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್​ ಆಗಿದೆ. ಪ್ರಯಾಣಿಕರಿಗೆ ಬೊಬ್ಬಿ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ.
 
 
 
 
 
 
 
 
 
 
 

Leave a Reply