ಕೃಷ್ಣನ ನಾಡಿನಲ್ಲಿ ಮಹಿಳೆಯರು ಪವರ್ ಫುಲ್ 

ಉಡುಪಿ : ಮಹಿಳೆ ಶಕ್ತಿ ಸ್ವರೂಪಿಣಿ, ಆಕೆಯನ್ನು ಅಬಲೆಯೆಂದು ತಪ್ಪಾಗಿ ಅರ್ಥೈಸಲಾಗಿದೆ. ಆಕೆ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಿಲ್ಲ, ಅದನ್ನು ಈ ಜಗತ್ತಿನಲ್ಲಿ ಅನೇಕ ಮಹಿಳೆಯರು ಸಾಬೀತು ಮಾಡಿದ್ದಾರೆ. ಅನೇಕ ವಿಷಯಗಳಲ್ಲಿ ಮಾದರಿ ವ್ಯಕ್ತಿಗಳಾಗಿದ್ದಾರೆ. ಮನೆಯಲ್ಲಿ ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುವುದು ಮಾತ್ರವಲ್ಲ, ನಮ್ಮಿಂದಲೂ ಸಾಧನೆ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ.

ಉಡುಪಿ ರಜತ ಪೀಠದಲ್ಲಿ ರಾಜಕೀಯ ಚುಕ್ಕಾಣಿ ಮತ್ತು ಜಿಲ್ಲಾಡಳಿತದಲ್ಲಿ ಮಹಿಳೆಯರೇ ಮೇಲಗೈ ಸಾಧಿಸಿದ್ದಾರೆ.  ಸಂಸದೆ \ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ.

ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೆಕ್ಕೆಯಲ್ಲಿದೆ. ಡಾ| ವಿದ್ಯಾ ಕುಮಾರಿ ನೂತನ ಜಿಲ್ಲಾಧಿಕಾರಿ. ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ವೀಣಾ ಬಿ.ಎನ್. ಉಪ ವಿಭಾಗಾಧಿಕಾರಿಯಾಗಿ ರಶ್ಮಿ ಎಸ್.ಆರ್   ಹೀಗೆ ಜಿಲ್ಲೆಯ ಆಡಳಿತ ಮಹಿಳೆಯರ ಕೈಯಲ್ಲಿದೆ.

ವಿವಿಧ ಇಲಾಖೆಗಳ ಉಪನಿರ್ದೇಶಕ ಹುದ್ದೆಗಳಲ್ಲೂ ಕೆಲವು ಮಹಿಳೆಯರಿದ್ದಾರೆ. ಹೀಗೆ ಸರಕಾರದ ಸ್ಥಳೀಯ ಕೊಂಡಿಯಾಗಿ, ಜನರಿಗೆ ನೇರವಾಗಿ ಸಿಗುವ ಭಾಗ್ಯ ಈ ಮಹಿಳಾ ಅಧಿಕಾರಿಗಳದ್ದು.

ಆದರೂ ರಾಜಕೀಯವಾಗಿ ಜಿಲ್ಲೆಯಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆಯೇ. ಕಳೆದ 25 ವರ್ಷಗಳಿಂದ ಜಿಲ್ಲೆಯ  ಒಬ್ಬ ಮಹಿಳೆಯೂ ಶಾಸಕಿಯಾಗಿಲ್ಲ! ವಿನ್ನಿ ಫೆರ್ನಾಂಡಿಸ್ ಅವರು ಕುಂದಾಪುರದ ಶಾಸಕರಾಗಿದ್ದರು. ಮನೋರಮಾ ಮಧ್ವರಾಜ್ ಶಾಸಕರಾಗಿದ್ದೇ ಕೊನೆ. ಆಮೇಲೆ ಮಹಿಳೆಗೆ ಶಾಸಕರಾಗುವ ಯೋಗ ಕೂಡಿ ಬಂದಿಲ್ಲ.ಆದರೆ ಸಂಸದರಾಗಿ ಶೋಭಾ ಕರಂದ್ಲಾಜೆ ನಿರಂತರ ಎರಡು ಅವಧಿ ಪೂರೈಸುತ್ತಿದ್ದಾರೆ.

ಜಿಲ್ಲೆಯಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣವೂ ಪುರುಷರಿಗಿಂತ ಹೆಚ್ಚಿದೆ.2011 ರಲ್ಲಿ ಒಟ್ಟು 86.24% ಸಾಕ್ಷರತೆ ಪ್ರಮಾಣದಲ್ಲಿ ಮಹಿಳಾ ಸಾಕ್ಷರತೆ 81.58ರಷ್ಟಿತ್ತು. ನಂತರ ಜನಗಣತಿ ನಡೆದಿಲ್ಲ.

 
 
 
 
 
 
 
 
 
 
 

Leave a Reply